ಗೋವಿನ ಬಗ್ಗೆ ಅತೀವ ಮುತುವರ್ಜಿ ವಹಿಸುತ್ತಿರುವ ಜೊತೆಗೆ ಗೋ ರಕ್ಷಣೆಗಾಗಿಯೇ ಅನೇಕ ಸವಾಲುಗಳನ್ನು ಎದುರಿಸುತ್ತಾ ಬಂದಿರುವ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರ ಹುಟ್ಟು ಹಬ್ಬ ಆಚರಣೆಯ ಪ್ರಯುಕ್ತ ಮಂಗಳವಾರ ಬಿಜೆಪಿ ಎಸ್.ಟಿ. ಮೋರ್ಚಾ ಉಡುಪಿ ನಗರ ವತಿಯಿಂದ ಇಂದ್ರಾಳಿ ವಾರ್ಡಿನ ಮಂಚಿ ಕುಮೇರಿಯಲ್ಲಿ ಮೇವನ್ನು ಸಂಗ್ರಹಿಸಿ ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಯಿತು.

ಉಡುಪಿ: ಗೋವಿನ ಬಗ್ಗೆ ಅತೀವ ಮುತುವರ್ಜಿ ವಹಿಸುತ್ತಿರುವ ಜೊತೆಗೆ ಗೋ ರಕ್ಷಣೆಗಾಗಿಯೇ ಅನೇಕ ಸವಾಲುಗಳನ್ನು ಎದುರಿಸುತ್ತಾ ಬಂದಿರುವ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರ ಹುಟ್ಟು ಹಬ್ಬ ಆಚರಣೆಯ ಪ್ರಯುಕ್ತ ಮಂಗಳವಾರ ಬಿಜೆಪಿ ಎಸ್.ಟಿ. ಮೋರ್ಚಾ ಉಡುಪಿ ನಗರ ವತಿಯಿಂದ ಇಂದ್ರಾಳಿ ವಾರ್ಡಿನ ಮಂಚಿ ಕುಮೇರಿಯಲ್ಲಿ ಮೇವನ್ನು ಸಂಗ್ರಹಿಸಿ ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ನಗರ ಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರ ಎಸ್.ಟಿ. ಮೋರ್ಚಾ ಉಸ್ತುವಾರಿ ಅಶೋಕ್ ನಾಯ್ಕ್, ಮೋರ್ಚಾದ ನಗರಾಧ್ಯಕ್ಷೆ ಸುಮಲತಾ, ಪ್ರಧಾನ ಕಾರ್ಯದರ್ಶಿ ಸುಗುಣ ನಾಯ್ಕ್, ಉಪಾಧ್ಯಕ್ಷರಾದ ನವೀನ್ ನಾಯ್ಕ್, ದಯಾನಂದ್ ನಾಯ್ಕ್, ಶರತ್ ನಾಯ್ಕ್, ಕಾರ್ಯದರ್ಶಿ ಸಂಜಯ್ ನಾಯ್ಕ್, ಸಮಿತಿ ಸದಸ್ಯ ಸುದೀಪ್ ನಾಯ್ಕ್, ಬಿಜೆಪಿ ಇಂದ್ರಾಳಿ ವಾರ್ಡ್ ಅಧ್ಯಕ್ಷ, ಲೋಕಯ್ಯ ಬೊಟ್ಯಾಡಿ, ಬಿಜೆಪಿ ಉಡುಪಿ ನಗರ ಕಾರ್ಯಕಾರಿಣಿ ಸದಸ್ಯೆ ಪ್ರಜ್ಞಾ ಶೆಟ್ಟಿ, ಸ್ಥಳೀಯರಾದ ಹರೀಶ್ ಸಹಿತ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.