ಮನೆ ಬಾಗಿಲು ಒಡೆದು ನಗ, ನಾಣ್ಯ ಕಳವು

KannadaprabhaNewsNetwork |  
Published : Oct 17, 2025, 01:00 AM IST

ಸಾರಾಂಶ

ದೊಡ್ಡಬಳ್ಳಾಪುರ: ಮನೆಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ನಗ, ನಗದು ಅಪಹರಿಸಿರುವ ಘಟನೆ ತಾಲೂಕಿನ ಹೊಸಹುಡ್ಯ ಗ್ರಾಮದ ಸೋಮಣ್ಣ ಮನೆಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ: ಮನೆಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ನಗ, ನಗದು ಅಪಹರಿಸಿರುವ ಘಟನೆ ತಾಲೂಕಿನ ಹೊಸಹುಡ್ಯ ಗ್ರಾಮದ ಸೋಮಣ್ಣ ಮನೆಯಲ್ಲಿ ನಡೆದಿದೆ. ಸೋಮಣ್ಣನವರ ಮೊಮ್ಮಗನ ಜನ್ಮದಿನದ ಕಾರಣ ಕುಟುಂಬ ಸಮೇತ ಅವರು ಸಮೀಪದ ಸುರದೇನಪುರಕ್ಕೆ ತೆರಳಿದ್ದರು. ಆ ವೇಳೆ ದುಷ್ಕರ್ಮಿಗಳು, ಮನೆ ಬಾಗಿಲು, ಬೀಗವನ್ನು ಆರೆಕೋಲು ಬಳಸಿ ಮೀಟಿ ಒಳಗೆ ನುಗ್ಗಿ, 250 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, ಎಟಿಎಂ ಕಾರ್ಡ್‌ಗಳು, 50 ಸಾವಿರ ರುಪಾಯಿ ನಗದು ಹಣ ಕದ್ದು ಪರಾರಿಯಾಗಿದ್ದಾರೆ. ಒಡವೆಗಳನ್ನು ಇಡಲಾಗಿದ್ದ ಬ್ಯಾಗ್‌ ಹಾಗೂ ಬಾಕ್ಸ್‌ಗಳನ್ನು ಮನೆಯ ಸಮೀಪದಲ್ಲಿಯೇ ಎಸೆದು ಹೋಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬೆಳಗ್ಗೆ ಸೋಮಣ್ಣ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ತಿಳಿದಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು