150 ಲಕ್ಷದಲ್ಲಿ ಮನೆ ಮನೆಗೆ ಗಂಗೆ ಕಾಮಗಾರಿಗೆ ಭೂಮಿಪೂಜೆ

KannadaprabhaNewsNetwork |  
Published : Jul 06, 2025, 01:49 AM IST
5 ಟಿವಿಕೆ 5 – ತುರುವೇಕೆರೆ ತಾಲೂಕು ಗುಡ್ಡೇನಹಳ್ಳಿಯಲ್ಲಿ ಜಲ ಜೀವನ್ ಯೋಜನೆಯ ಕುಡಿಯುವ ನೀರಿನ ಮನೆ ಮನೆಗೆ ಗಂಗೆ ಯೋಜನೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ ನೀಡಿದರು. | Kannada Prabha

ಸಾರಾಂಶ

ತಾಲೂಕಿನ ಹರಿಕಾರನಹಳ್ಳಿ, ದೊಂಬರನಹಳ್ಳಿ, ಗುಡ್ಡೇನಹಳ್ಳಿ, ನಾಗೇಗೌಡನ ಪಾಳ್ಯದಲ್ಲಿ ಸುಮಾರು 150 ಲಕ್ಷ ರು. ವೆಚ್ಚದಲ್ಲಿ ಪ್ರಾರಂಭ ಮಾಡಲಾಗುತ್ತಿರುವ ಮನೆ ಮನೆಗೆ ಗಂಗೆ, ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ, ತುರುವೇಕೆರೆ

ತಾಲೂಕಿನ ಹರಿಕಾರನಹಳ್ಳಿ, ದೊಂಬರನಹಳ್ಳಿ, ಗುಡ್ಡೇನಹಳ್ಳಿ, ನಾಗೇಗೌಡನ ಪಾಳ್ಯದಲ್ಲಿ ಸುಮಾರು 150 ಲಕ್ಷ ರು. ವೆಚ್ಚದಲ್ಲಿ ಪ್ರಾರಂಭ ಮಾಡಲಾಗುತ್ತಿರುವ ಮನೆ ಮನೆಗೆ ಗಂಗೆ, ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು. ದೊಂಬರನಹಳ್ಳಿಯಲ್ಲಿ ಸುಮಾರು 60 ಲಕ್ಷ ರು. ವೆಚ್ಚದಲ್ಲಿ ಸುಮಾರು 200 ಮನೆಗಳಿಗೆ ನೀರು ಒದಗಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಹರಿಕಾರನಹಳ್ಳಿಯಲ್ಲಿ ಸುಮಾರು 30 ಲಕ್ಷದಲ್ಲಿ 100 ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಕಾಮಗಾರಿ ಪ್ರಾರಂಭಿಸಲಾಯಿತು. ನಾಗೇಗೌಡನ ಪಾಳ್ಯದಲ್ಲಿ ಸುಮಾರು 70 ಮನೆಗಳಿಗೆ 25 ಲಕ್ಷದಲ್ಲಿ ಕುಡಿಯುವ ನೀರನ್ನು ಮನೆ ಮನೆಗೆ ಸರಬರಾಜು ಮಾಡುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಗುಡ್ಡೇನಹಳ್ಳಿಯಲ್ಲಿ ಸುಮಾರು 120 ಮನೆಗಳಿಗೆ ಸುಮಾರು 30 ಲಕ್ಷ ರು ವೆಚ್ಚದಲ್ಲಿ ಮನೆ ಮನೆಗೆ ಗಂಗೆ ತಲುಪಿಸುವ ಕಾರ್ಯಕ್ಕೂ ಸಹ ಶಾಸಕರು ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಇದು ಕೇಂದ್ರ ಸರ್ಕಾರ ಅತ್ಯಂತ ಮಹತ್ವ ಪೂರ್ಣವಾದ ಯೋಜನೆಯಾಗಿದೆ. ಸುಮಾರು 30 ವರ್ಷಗಳ ಕಾಲ ಈ ಯೋಜನೆಯ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕೆಂದು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಾಗಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡುವ ಮೂಲಕ ಯೋಜನೆ ಯಶಸ್ವಿಯಾಗಲು ಸಹಕರಿಸಬೇಕು ಅಲ್ಲದೇ ಶೀಘ್ರವಾಗಿ ಕಾಮಗಾರಿಗಳನ್ನು ಮುಗಿಸಬೇಕೆಂದೂ ಸಹ ಸೂಚಿಸಿದರು. ಈ ಸಂದರ್ಭದಲ್ಲಿ ಸೊಪ್ಪಿನಹಳ್ಳಿ ರಂಗನಾಥ್, ಹರಿಕಾರನಹಳ್ಳಿ ಕೀರ್ತಿ, ಕೊಂಡಜ್ಜಿ ನಟರಾಜ್, ಮಣಿಚೆಂಡೂರು ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಮ್ಮ ರಮೇಶ್, ಗುಡ್ಡೇನಹಳ್ಳಿಯ ಮುಕುಂದ, ಬಸವರಾಜು, ಹಿತ್ತಲಕೊಪ್ಪ ಪ್ರಕಾಶ್, ದೊಂಬರನಹಳ್ಳಿ ಮಂಜುನಾಥ್, ಹರಿಕಾರನಹಳ್ಳಿ ಸಿದ್ದಪ್ಪಾಜಿ, ಮಂಜಣ್ಣ, ಎಂಜಿನಿಯರ್ ರವಿಕುಮಾರ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

PREV