ಬೆಂಗಳೂರಿನಲ್ಲಿ ರಾಜ್ಯ, ಕೇಂದ್ರ ಐಟಿ ಅಧಿಕಾರಿಗಳ ಸಮನ್ವಯ ಸಭೆ: ಸಂಸದೆ ಡಾ.ಪ್ರಭಾ ಉಪಸ್ಥಿತಿ

KannadaprabhaNewsNetwork |  
Published : Jul 06, 2025, 01:49 AM IST
ಕ್ಯಾಪ್ಷನ1ಕೆಡಿವಿಜಿ38, 39 ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಬೆಂಗಳೂರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಐಟಿ ಅಧಿಕಾರಿಗಳ ಮಹತ್ವದ ಸಮನ್ವಯ ಸಭೆ ನಡೆಸಿದರು.  | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಸಿಇಒ ಸಂಜೀವ್ ಗುಪ್ತ ಮತ್ತು ಅಧ್ಯಕ್ಷರಾದ ಬಿ.ವಿ. ನಾಯ್ಡು ಹಾಗೂ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ ಟಿಪಿಐ)ದ ನಿರ್ದೇಶಕ ಡಾ.ಸಂಜಯ್ ತ್ಯಾಗಿ ಅವರನ್ನು ಸಂಸದರು ಪ್ರತ್ಯೇಕವಾಗಿ ಅವರ ಕಚೇರಿಗಳಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

- ಜಿಲ್ಲಾಧಿಕಾರಿ, ದಾವಣಗೆರೆ ಐಟಿ ವಿಷನ್ ಗ್ರೂಪ್ ಸದಸ್ಯರು ಭಾಗಿ

- - -

ದಾವಣಗೆರೆ: ಬೆಂಗಳೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಸಿಇಒ ಸಂಜೀವ್ ಗುಪ್ತ ಮತ್ತು ಅಧ್ಯಕ್ಷರಾದ ಬಿ.ವಿ. ನಾಯ್ಡು ಹಾಗೂ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ ಟಿಪಿಐ)ದ ನಿರ್ದೇಶಕ ಡಾ.ಸಂಜಯ್ ತ್ಯಾಗಿ ಅವರನ್ನು ಸಂಸದರು ಪ್ರತ್ಯೇಕವಾಗಿ ಅವರ ಕಚೇರಿಗಳಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಅಲ್ಲದೇ, ದಾವಣಗೆರೆಯಲ್ಲಿ ಐಟಿ ವಲಯಕ್ಕೆ ಉತ್ತೇಜನ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯ ಕುರಿತು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮತ್ತು ದಾವಣಗೆರೆ ಐಟಿ ವಿಷನ್ ಗ್ರೂಪ್ ಸದಸ್ಯರೊಂದಿಗೆ ಸೇರಿ ಮಹತ್ವದ ಸಮನ್ವಯ ಸಭೆ ನೆಡೆಸಿದರು.

ಕ್ಯೂ-ಸ್ಪೈಡೆರ್ಸ್ ಹಾಗೂ ಟೆಸ್ಟ್ ಯಂತ್ರ ಸಾಫ್ಟ್‌ವೇರ್ ಸಲ್ಯೂಷನ್ಸ್ ಸಿಇಒ ಗಿರೀಶ್ ರಾಮಣ್ಣ ಅವರು ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪನಿ ಕಾರ್ಯಾಚಟುವಟಿಕೆಗಳನ್ನು ಪ್ರಾರಂಭಿಸಲು ಇಂಗಿತ ವ್ಯಕ್ತಪಡಿಸಿದರು. ಸರ್ಕಾರದಿಂದ ಐ.ಟಿ.ಗೆ ಸೂಕ್ತ ಮೂಲಸೌಲಭ್ಯ ಹಾಗೂ ಪೂರಕ ವಾತಾವರಣ ಒದಗಿಸಿಕೊಡಲು ಕೋರಿದರು. ಸಂಸದರು ಐಟಿ ಉದ್ಯೋಗಾವಕಾಶ ಬಯಸಿ ವರ್ಷಕ್ಕೆ ಸುಮಾರು 5000-10000 ವಿದ್ಯಾರ್ಥಿಗಳು ದಾವಣಗೆರೆ ಜಿಲ್ಲೆಯಿಂದ ಬೆಂಗಳೂರಿಗೆ ಬರುತ್ತಿರುವ ಬಗ್ಗೆಯೂ ವಿವರಿಸಿದರು.

- - -

(ಕೋಟ್‌) ಎಸ್ ಟಿಪಿಐ- ಐಟಿ ಪಾರ್ಕ್‌ಗೆ ಆದ್ಯತೆ ಮೇರೆಗೆ ಶೀಘ್ರ ಸೂಕ್ತ ಸ್ಥಳವನ್ನು ಒದಗಿಸಿ ಹಾಗೂ ತಾತ್ಕಾಲಿಕ ಸ್ಥಾಪನೆಗೆ ಲಭ್ಯವಿರುವ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ನೀಡಲಾಗುವುದು.

- ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಸಚಿವ, ದಾವಣಗೆರೆ

- - -

-1ಕೆಡಿವಿಜಿ38, 39:

ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಬೆಂಗಳೂರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಐಟಿ ಅಧಿಕಾರಿಗಳ ಮಹತ್ವದ ಸಮನ್ವಯ ಸಭೆ ನಡೆಸಿದರು.

PREV