ಕೊಳ್ಳೇಗಾಲ: ಸತತ ಮಳೆ ಹಾಗೂ ಪಟ್ಟಣದ ಕೊಂಗಲಕೆರೆ ಕೋಡಿ ಬಿದ್ದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದ್ದು ಮನೆಯೊಂದರ ಗೋಡೆ ಕುಸಿದಿರುವ ಘಟನೆ ಜರುಗಿದೆ. ಧಾರಾಕಾರ ಮಳೆಯಿಂದಾಗಿ ಕೊಂಗಳಕೆರೆ ತುಂಬಿ ಹರಿಯುತ್ತಿದ್ದರಿಂದ ಭಾನುವಾರ ಕೋಡಿ ಬಿದ್ದಿದ್ದು ಹಾಗೂ ಕುಪ್ಪಮ್ಮ ಕಾಲುವೆ ತುಂಬಿ ಹರಿದ ಹಿನ್ನೆಲೆಯಲ್ಲಿ ಹಲವು ಮನೆಗಳು ಜಲಾವೃತ್ತವಾಗಿದೆ. ಮಾತ್ರವಲ್ಲ, ನಿವಾಸಿಗಳು ಮಳೆಯ ನೀರಿನಿಂದಾಗಿ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿ ವರ್ಗವನ್ನು ಶಪಿಸುತ್ತಿದ್ದ ಸನ್ನಿವೇಶ ಕಂಡು ಬಂತು. ಮಳೆ ನೀರು ತುಂಬಿ ಹರಿದ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಕಾಲೋನಿಯ ರಾಜಮ್ಮ ಎಂಬವರ ಮನೆ ಗೋಡೆ ಕುಸಿದಿದೆ.
ನಾನು ಸಹಾ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ನಗರಸಭೆ ಅಧಿಕಾರಿಗಳು, ಶಾಸಕರಿಗೆ ಮನವಿ ಸಲ್ಲಿಸಿದ್ದು ನಾಳೆಯೂ ಸಹಾ ಮನವಿ ಮಾಡುವೆ, ಈ ಸಮಸ್ಯೆ ಶಾಶ್ವತವಾಗಿ ಬಗೆಹರಿಯಬೇಕು, ಮುಂದೆ ನಿವಾಸಿಗಳಿಗೆ ಹಾನಿಯಾಗದಂತೆ ತಡೆಗೋಡೆ ಹಾಗೂ ಇನ್ನಿತರೆ ಕ್ರಮ ವಹಿಸಬೇಕು ಎಂದರು.