ಧಾರವಾಡ:
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೆಚ್ಚು ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿದ್ದು, ಐವಿಆರ್‌ಎಸ್, ಮಿಸಡ್ ಕಾಲ್ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿ ಸದರಿ ಸಿಸ್ಟಮ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಪರ್ಯಾಯವಾಗಿ ಐಒಸಿಎಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಎಲ್‌ಪಿಜಿ ತೈಲ ಕಂಪನಿಗಳು ಗ್ರಾಹಕರಿಗೆ ಆರು ಬುಕ್ಕಿಂಗ್ ವಿಧಾನಗಳನ್ನು ಕಲ್ಪಿಸಿವೆ. ಗ್ರಾಹಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಸೌಲಭ್ಯ ಬಳಸಬಹುದು. ಪ್ರತಿ ಗೃಹಬಳಕೆಯ ಸಿಲೆಂಡರ್‌ನ್ನು ಬುಕ್ ಮಾಡಿ ಪಡೆದುಕೊಂಡ ನಂತರ ಮತ್ತೊಂದು ಗೃಹಬಳಕೆಯ ಸಿಲೆಂಡರ್ ಬೇಡಿಕೆಗಾಗಿ 25 ದಿನ ನಂತರ ಬುಕ್ ಮಾಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಮಸ್ಯೆಗಳಿದ್ದಲ್ಲಿ ಧಾರವಾಡ ನಗರ (ಸಹಾಯಕ ನಿರ್ದೇಶಕರು-9164603114 ಮತ್ತು ಆಹಾರ ನಿರೀಕ್ಷಕ-8296702244), ಧಾರವಾಡ ಗ್ರಾಮೀಣ (ಆಹಾರ ಶಿರಸ್ತೇದಾರ-9845202400 ಮತ್ತು ಆಹಾರ ನಿರೀಕ್ಷಕ-8310109795, 9845202400) ಹಾಗೂ ಅಳ್ನಾವರ (ಆಹಾರ ನಿರೀಕ್ಷಕ-9448221892), ಹುಬ್ಬಳ್ಳಿ ನಗರ (ಸಹಾಯಕ ನಿರ್ದೇಶಕ-9035074105 ಮತ್ತು ಆಹಾರ ನಿರೀಕ್ಷಕ-7618760734, ಹುಬ್ಬಳ್ಳಿ ಗ್ರಾಮೀಣ (ಆಹಾರ ನಿರೀಕ್ಷಕ-9482532326), ಕಲಘಟಗಿ ತಾಲೂಕು (ಆಹಾರ ನಿರೀಕ್ಷಕ-6364304842), ಕುಂದಗೋಳ ತಾಲೂಕು (ಆಹಾರ ನಿರೀಕ್ಷಕರ- 9448324052), ಅಣ್ಣಿಗೇರಿ ತಾಲೂಕು (ಆಹಾರ ಶಿರಸ್ತೇದಾರ-9620734505), ನವಲಗುಂದ ತಾಲೂಕು (ಆಹಾರ ನಿರೀಕ್ಷಕರ-8694971257) ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.