13 ವರ್ಷದಲ್ಲಿ ಮಾಜಿ ಶಾಸಕರು ತಂದ ಅನುದಾನವೆಷ್ಟು?

KannadaprabhaNewsNetwork |  
Published : Oct 27, 2024, 02:16 AM IST
ಸಿಂದಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಮಾಜಿ ಶಾಸಕರು ಕಳೆದ ೧೩ ವರ್ಷಗಳ ಆಡಳಿತ ಅವಧಿಯಲ್ಲಿ ಮತಕ್ಷೇತ್ರದಲ್ಲಿ ಎಷ್ಟು ಅನುದಾನ ತಂದಿದ್ದಾರೆ? ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ವೇದಿಕೆ ನಿರ್ಮಿಸಿ ಅಭಿವೃದ್ಧಿ ಕೆಲಸಗಳ ತುಲನೆ ಹಾಗೂ ಚರ್ಚೆಯಾಗಬೇಕು. ಇದಕ್ಕೆ ಪಂಥಾಹ್ವಾನ ನಿಡುತ್ತಿರುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಮಾಜಿ ಶಾಸಕರು ಕಳೆದ ೧೩ ವರ್ಷಗಳ ಆಡಳಿತ ಅವಧಿಯಲ್ಲಿ ಮತಕ್ಷೇತ್ರದಲ್ಲಿ ಎಷ್ಟು ಅನುದಾನ ತಂದಿದ್ದಾರೆ? ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ವೇದಿಕೆ ನಿರ್ಮಿಸಿ ಅಭಿವೃದ್ಧಿ ಕೆಲಸಗಳ ತುಲನೆ ಹಾಗೂ ಚರ್ಚೆಯಾಗಬೇಕು. ಇದಕ್ಕೆ ಪಂಥಾಹ್ವಾನ ನಿಡುತ್ತಿರುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕರು ಕಳೆದ ೧೩ ವರ್ಷಗಳ ಆಡಳಿತ ಅವಧಿಯಲ್ಲಿ ಮತಕ್ಷೇತ್ರದಲ್ಲಿ ಎಷ್ಟು ಅನುದಾನ ತಂದಿದ್ದಾರೆ? ಎಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಪುರಾವೆ ಸಹಿತ ಕೊಡಬೇಕು ಎಂದು ಆಗ್ರಹಿಸಿದರು.ಈಗಿನ ಶಾಸಕರು ೧೭ ತಿಂಗಳ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ? ತಂದ ಅನುದಾನವೆಷ್ಟು ಎಂಬುದನ್ನು ನಾವು ಪುರಾವೆ ಸಹಿತ ಒದಗಿಸುತ್ತೇವೆ. ಇದೇ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ವೇದಿಕೆ ನಿರ್ಮಿಸಿ ಅಭಿವೃದ್ಧಿ ಕೆಲಸಗಳ ತುಲನೆ ಹಾಗೂ ಚರ್ಚೆಯಾಗಬೇಕು. ಇದಕ್ಕೆ ಪಂಥಾಹ್ವಾನ ನಿಡುತ್ತಿದ್ದೇವೆ. ಇದನ್ನು ಮಾಜಿ ಶಾಸಕರು ಸ್ವೀಕರಿಸಬೇಕು. ಈ ಹಿಂದೆ ತಾಲೂಕು ಸಾರ್ವಜನಿಕ ಕ್ರೀಡಾಂಗಣವನ್ನು ನಿರ್ಮಿಸುವಾಗ ಅಲ್ಲಿ ವಾಸವಿದ್ದ ಸಾಕಷ್ಟು ಬಡ ಕುಟುಂಬಗಳ ವಸತಿಗಳನ್ನು ತೆರವುಗೊಳಿಸಲಾಯಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷದವರು ಅಭಿವೃದ್ಧಿ ದೃಷ್ಟಿಯಿಂದ ವಿರೋಧ ವ್ಯಕ್ತಪಡಿಸಲಿಲ್ಲ. ಆಗ ನೀವೆಷ್ಟು ಕುಟುಂಬಗಳಿಗೆ ವಸತಿಗೆ ವ್ಯವಸ್ಥೆ ಹಾಗೂ ವಾಸಕ್ಕೆ ಸೂರುಗಳನ್ನು ಒದಗಿಸಿಕೊಟ್ಟಿದ್ದೀರಿ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.ರಸ್ತೆಯ ಮೇಲೆ ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿಕೊಳ್ಳುವುದರಿಂದ ನಗರ ಸೌಂದರ್ಯಿಕರಣಕ್ಕೆ ಮಾರಕವಾಗಲಿದೆ. ಸರಾಗ ಸಂಚಾರಕ್ಕೂ ಅಡ್ಡಿ. ಅಲ್ಲದೇ ಪುರಸಭೆಯ ಬೊಕ್ಕಸಕ್ಕು ಅಪಾರ ನಷ್ಟವುಂಟಾಗಲಿದೆ ಎಂದರು.ಈ ವೇಳೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಅತಿಕ್ರಮಣ ಪುರಸಭೆಯ ನಿರ್ಧಾರ. ಇದಕ್ಕೆ ಕಾಂಗ್ರೆಸ್ ಪಕ್ಷದ ಒತ್ತಡ ಹಾಗೂ ಮುತುವರ್ಜಿಗಳೇನಿಲ್ಲ. ಸೌಂದರ್ಯೀಕರಣಕ್ಕೆ ಒತ್ತು ಕೊಟ್ಟಿರುವುದು ಸ್ವಾಗತಾರ್ಹ. ಅಭಿವೃದ್ಧಿ ಕಾರ್ಯದಲ್ಲಿ ಲೋಪವಿದ್ದರೆ ವಿರೋಧ ವ್ಯಕ್ತಪಡಿಸಬೇಕು. ಅದನ್ನು ಬಿಟ್ಟು ಯಾರದೋ ಹಿತಾಸಕ್ತಿಗಾಗಿ ವಿರೋಧ ವ್ಯಕ್ತಪಡಿಸಿದ್ದು ಬಾಲಿಶತನದಿಂದ ಕೂಡಿರುತ್ತದೆ. ಮಾಜಿ ಶಾಸಕರ ೧೩ ವರ್ಷಗಳ ಅವಧಿಯಲ್ಲಿ ಆಲಮೇಲದಿಂದ ಸ್ವಗ್ರಾಮ ದೇವಣಗಾವರೆಗಿನ ನರಕ ಸದೃಶ್ಯವಾದ ರಸ್ತೆಯನ್ನು ನಿರ್ಮಾಣ ಮಾಡಲಾಗಲಿಲ್ಲ. ಅದನ್ನು ನವಚೇತನಗೊಳಿಸಲು ಮನಗೂಳಿ ಅವರೆ ಬರಬೇಕಾಯಿತು ಎಂದು ವ್ಯಂಗ್ಯವಾಡಿದರು.ಈ ವೇಳೆ ಮಹ್ಮದ ಪಟೇಲ್ ಬಿರಾದಾರ, ಸುರೇಶ ಮಳಲಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕುಮಾರ ದೇಸಾಯಿ, ಸೋಮನಗೌಡ ಬಿರಾದಾರ, ಮಲ್ಲಣ್ಣ ಸಾಲಿ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ