ರೈತರ ಬದುಕು ಹಾಳಾಗಿದೆ. ಬೆಳೆಯಲು ಸರಿಯಾದ ವ್ಯವಸ್ಥೆ ಇಲ್ಲ. ನಗರ ಮತ್ತು ಪಟ್ಟಣ ಪ್ರದೇಶಕ್ಕೆ ಹೋಗಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದರೂ ಸಾಕಷ್ಟು ಸಮಸ್ಯೆಗಳಿವೆ. ಚುನಾವಣಾ ಸಂದರ್ಭದಲ್ಲಿ ಬಂದು ಮತ ಹಾಕುತ್ತಿದ್ದಾರೆ. ಇಂತಹ ಮತಗಳನ್ನು ಪಡೆದ ನೀವು ಈ ಜನರ ಬದುಕಿಗೆ ಏನೆಲ್ಲಾ ಸೌಲಭ್ಯ ಕಲ್ಪಿಸಿದ್ದೀರಿ.
ಮಂಡ್ಯ : ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ, ದಲಿತರು, ಹಿಂದುಳಿದವರ ಅಭಿವೃದ್ಧಿಗೆ ಕೊಟ್ಟ ಹಣವೆಷ್ಟು ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಲಿ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಜೆಡಿಎಸ್‌ನವರಿಗೆ ಸವಾಲು ಹಾಕಿದರು.
ನಾನು ಪರಿಶಿಷ್ಟ ಜಾತಿ, ಪಂಗಡದ ಸದನ ಸಮಿತಿ ಅಧ್ಯಕ್ಷನಾದ ನಂತರ ಈ ವರ್ಗದ ಅಭಿವೃದ್ಧಿಗೆ ಕೆಲವು ವಿಚಾರಗಳ ಜಾರಿಗೆ ಶಿಫಾರಸ್ಸು ಮಾಡಿದ್ದೆ. ಅದರ ಆಧಾರದ ಮೇಲೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅವುಗಳನ್ನು ಜಾರಿಗೊಳಿಸಿದ್ದರು. ಎಸ್‌ಇಪಿ, ಟಿಎಸ್‌ಪಿ ಯೋಜನೆಯನ್ನೂ ಜಾರಿಗೊಳಿಸಿದರು. ಕೆಲವು ಅನಾನುಕೂಲವಾಗಿದ್ದವು. ಅದನ್ನು ಐದು ವರ್ಷಗಳ ಕಾಲ ಆಡಳಿತ ನಡೆಸಿದ ಜೆಡಿಎಸ್-ಬಿಜೆಪಿಯವರು ಯಾಕೆ ಸರಿಪಡಿಸಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಈ ವರ್ಗಕ್ಕೆ ನೀಡಿದ್ದ ಅನುದಾನಲ್ಲಿ ಹೆಚ್ಚಿನ ಹಣ ಅನಗತ್ಯ ವೆಚ್ಚಗಳಿಗೆ ಹೋಗಿದೆ. ದಲಿತರಿಗೆ ಮೀಸಲಿಟ್ಟಿರುವ ಅನುದಾನವನ್ನೂ ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ. ಇಂತಹ ಆಡಳಿತ ನೀಡಿರುವ ಜೆಡಿಎಸ್-ಬಿಜೆಪಿಯವರು ಈಗ 11500 ಕೋಟಿ ದಲಿತರಿಗೆ ಮೀಸಲಿಟ್ಟಿದ್ದ ಅನುದಾನ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಹಿಂದೆ ಗೋವಿಂದ ಕಾರಜೋಳ ಸಚಿವರಾಗಿದ್ದ ವೇಳೆ ಅನಗತ್ಯ ವೆಚ್ಚಗಳಿಗೆ ಮಂಜೂರಾಗಿದ್ದ ಹಣದಲ್ಲಿ ಒಮ್ಮೆ ೭ ಸಾವಿರ ಕೋಟಿ ರು., ಮತ್ತೊಮ್ಮೆ 10 ಸಾವಿರ ಕೋಟಿಗೂ ಹೆಚ್ಚು ಹಣ ಖಜಾನೆಗೆ ವಾಪಸ್ ಹೋಗಿದೆ. ಈ ಬಗ್ಗೆ ಏಕೆ ವಿವರಣೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ನಾನು ಸದನ ಸಮಿತಿ ಅಧ್ಯಕ್ಷನಾಗಿದ್ದ ವೇಳೆಯಲ್ಲಿ ಹಲವಾರು ಮಂದಿ ಅಧಿಕಾರಿಗಳಿಗೆ ಶಿಕ್ಷೆಯಾಗಿದೆ. ಇದನ್ನು ದಾಖಲೆಯಲ್ಲಿ ಪರಿಶೀಲಿಸಬಹುದು. ಅದು ಬಿಟ್ಟು ಇಲ್ಲದ ಸುಳ್ಳುಗಳನ್ನು ಹೇಳುತ್ತಾ ಗೊಂದಲ ಮೂಡಿಸುವುದು ಸರಿಯಲ್ಲ ಎಂದು ದೂರಿದರು.
ರೈತರ ಬದುಕು ಹಾಳಾಗಿದೆ. ಬೆಳೆಯಲು ಸರಿಯಾದ ವ್ಯವಸ್ಥೆ ಇಲ್ಲ. ಬದುಕು ಕಟ್ಟಿಕೊಳ್ಳಲು ನಗರ ಮತ್ತು ಪಟ್ಟಣ ಪ್ರದೇಶಕ್ಕೆ ಹೋಗಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದರೂ ಅಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಮಾನ ಮರ್೦ಾದೆಗೆ ಅಂಜಿ ಅಲ್ಲೇ ಉಳಿದು, ಚುನಾವಣಾ ಸಂದರ್ಭದಲ್ಲಿ ತನ್ನೂರಿಗೆ ಬಂದು ಮತ ಹಾಕುತ್ತಿದ್ದಾರೆ. ಇಂತಹ ಮತಗಳನ್ನು ಪಡೆದ ನೀವು ಈ ಜನರ ಬದುಕಿಗೆ ಏನೆಲ್ಲಾ ಸೌಲಭ್ಯ ಕಲ್ಪಿಸಿದ್ದೀರಿ ಎಂದು ಪ್ರಶ್ನಿಸಿದರು.
ಒಳ್ಳೆಯ ಕಾರ್ಖಾನೆ ಸ್ಥಾಪಿಸಲಿಲ್ಲ. ರೈತರ ಬದುಕಿಗೆ ಆಸರೆಯಾಗಬೇಕಾದ ಸೌಲಭ್ಯಗಳನ್ನು ನೀಡಲಿಲ್ಲಘಿ. ರೈತರ ಕ೦ೃಷಿ ಪದ್ಧತಿಯನ್ನು ಬದಲಿಸಲಿಲ್ಲ. ಹವಾಮಾನಕ್ಕೆ ತಕ್ಕಂತೆ ಬೆಳೆ ಬೆಳೆಯಲು ತಿಳುವಳಿಕೆ ನೀಡಲಿಲ್ಲ. ಇನ್ನು ಯಾವ ಕಾರ್ಯವನ್ನು ಮಾಡಿದ್ದೀರಿ. ಇನ್ನಾದರೂ ಬಾಲಿಶ ಹೇಳಿಕೆಗಳನ್ನು ನೀಡದೆ ಸಾಕ್ಷಿ ಸಮೇತ ಜನರ ಬಳಿ ಬಂದು ತಿಳಿಸಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡರು ಗೋಷ್ಠಿಯಲ್ಲಿದ್ದರು.