- ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ: ರೇಣುಕಾಚಾರ್ಯ ಟೀಕೆ
ಹೊನ್ನಾಳಿ: ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮಗಳಲ್ಲಿ ಮುಖ್ಯ ಭಾಷಣ ಮಾಡುವ ಹಿಂದೂ ಮುಖಂಡರಿಗೆ ಹೀಗೆ ಮಾತನಾಡಬೇಕು ಎಂದು ಪೊಲೀಸರಿಂದ ನೋಟಿಸ್ ಜಾರಿ ಮಾಡಿಸುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವಿಧಾನಸೌಧದ 3ನೇ ಮಹಡಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಬಂಧಿಸುವ ತಾಕತ್ತು ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.
ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ತನ್ನ 100ನೇ ವರ್ಷ ಪೂರೈಸಿದ ಹಿನ್ನೆಲೆ ರಾಜ್ಯಾದ್ಯತ ಹಲವು ರೀತಿಯ ಸಮಾರಂಭಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುವ ಕಲ್ಲಡ್ಕ ಪ್ರಭಾಕರ್ ಭಟ್, ಚಕ್ರವತಿ ಸೂಲಿಬೆಲೆ, ಕೃಷ್ಣ ಉಪಾಧ್ಯಾಯ, ವಿಕಾಸ್ ಪುತ್ತೂರು, ಸತೀಶ್ ಪೂಜಾರಿ ಸೇರಿದಂತೆ ಹಲವು ಹಿಂದೂ ಮುಖಂಡರಿಗೆ ನೀವು ಹೀಗೇ ಮಾತನಾಡಬೇಕು ಎಂದು ನೋಟಿಸ್ ಜಾರಿ ಎಷ್ಟು ಸರಿ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ, ಜನಾರ್ದನ್ ರೆಡ್ಡಿ ಮನೆ ಸುಟ್ಟು ಭಸ್ಮ ಮಾಡುತ್ತೇನೆ ಎಂದಾಗ, ನಿಮ್ಮದೇ ಪಕ್ಷದ ಶಾಸಕರಾಗಿದ್ದ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದಾಗ, ರಾಜ್ಯದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ, ಹುಬ್ಬಳಿ, ಚನ್ನಗಿರಿ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸ್ ಠಾಣೆಗಳ ಮೇಲೆ ನಿಮ್ಮ ಬ್ರದರ್ಸ್‌ಗಳು ದಾಳಿ ಮಾಡಿದಾಗ ಯಾವುದೇ ಕ್ರಮ ಜರುಗಿಸಲಿಲ್ಲ. ಈಗ ನಿಮ್ಮ ಪೊಲೀಸರು ಏಕಾಏಕಿ ಹಿಂದೂ ಮುಖಂಡರು ಯಾವುದೇ ತಪ್ಪು ಮಾಡದೇ ಅತಿ ಶಿಸ್ತುಬದ್ಧವಾಗಿ ಕಾರ್ಯಕ್ರಮಗಳಲ್ಲಿ ಮಾತನಾಡಿ, ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದೇ ಕಾರ್ಯಕ್ರಮಗಳು ನಡೆಸಬೇಕೆಂದು ಹಿಂದೂ ಮುಖಂಡರಿಗೆ ನೋಟಿಸ್ ಜಾರಿ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ ಗಳಿಕೆಗಾಗಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದೀರಿ. ನೀವು ಆಡುತ್ತಿರುವ ಬಣ್ಣಬಣ್ಣದ ನಾಟಕಕ್ಕೆ ರಾಜ್ಯದ ಜನಮುಂದಿನ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಸುರೇಶ್, ಎಂ.ಎಸ್.ಪಾಲಕ್ಷಪ್ಪ, ಸುರೇಶ್, ಬೀರಗೊಂಡನಹಳ್ಳಿ ವಿಜಯಕುಮಾರ್, ಸುರೇಶ್, ಶ್ರೀನಿವಾಸ್, ರಾಜು ಪಲ್ಲವಿ ಇತರರು ಇದ್ದರು.
- - --26ಎಚ್.ಎಲ್ಐ3: