ಹುಬ್ಬಳ್ಳಿ :
ಸ್ಕೈ ಮೌಂಟ್ ಸಂಸ್ಥಾಪಕ ಮನೀಷ್ ಐ. ಜೈನ್ ನಡೆಸಿಕೊಟ್ಟ "ನಿಮ್ಮ ಡಿಜಿಟಲ್ ಐಡೆಂಟಿಟಿ ಕಟ್ಟಿಕೊಳ್ಳಿ " ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ ಉದ್ಯಮಿಗಳು ಪಾಲ್ಗೊಂಡು ವೆಬ್‌ಸೈಟ್ ನಿರ್ಮಾಣದ ಪೂರ್ವಾನುಭವವಿಲ್ಲದವರೂ ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ವೆಬ್‌ಸೈಟ್ ರೂಪಿಸಿ ಪ್ರಕಟಿಸುವ ವಿಧಾನ ಕಲಿತರು.
ಕಾರ್ಯಾಗಾರದಲ್ಲಿ "ಲವಬಲ್ " ಎಐ ವೇದಿಕೆ ಬಳಸಿ ವೆಬ್‌ಸೈಟ್ ನಿರ್ಮಿಸುವ ಪ್ರಾತ್ಯಕ್ಷಿಕೆ ನೀಡಲಾಯಿತು. ಉದ್ಯಮದ ವಿವರಗಳನ್ನು ಸಾಮಾನ್ಯ ಭಾಷೆಯಲ್ಲಿ ಸೂಚಿಸಿದರೆ, ಅದರ ಆಧಾರದಲ್ಲಿ ವೆಬ್‌ಸೈಟ್ ರೂಪಿಸಬಹುದು. ಉತ್ಪನ್ನಗಳ ಮಾಹಿತಿ, ಫೋಟೋ ಗ್ಯಾಲರಿ, ಗ್ರಾಹಕರ ಅಭಿಪ್ರಾಯ ಹಾಗೂ ವಾಟ್ಸ್‌ಆ್ಯಪ್ ಸಂಪರ್ಕದಂತಹ ಸೌಲಭ್ಯಗಳನ್ನೂ ಸೇರಿಸಬಹುದು. ಬಣ್ಣ, ವಿನ್ಯಾಸ ಮತ್ತು ಮೊಬೈಲ್‌ನಲ್ಲಿನ ಪ್ರದರ್ಶನವನ್ನು ಸೂಚನೆಗಳ ಮೂಲಕವೇ ಬದಲಾಯಿಸಬಹುದು.ವೆಬ್‌ಸೈಟ್ ನಿರ್ಮಿಸಲು ಕಂಪ್ಯೂಟರ್, ಕೋಡಿಂಗ್ ಜ್ಞಾನ ಅಥವಾ ತಾಂತ್ರಿಕ ತಂಡವೇ ಬೇಕೆಂಬುದು ಹಳೆಯ ಕಲ್ಪನೆ. ಉದ್ಯಮದ ಅಗತ್ಯಗಳನ್ನು ಸ್ಪಷ್ಟವಾಗಿ ವಿವರಿಸಲು ಬಂದರೆ ಎಐ ನೆರವಾಗುತ್ತದೆ ಎಂದು ಜೈನ್ ಹೇಳಿದರು.
ಎಐ ತಂತ್ರಜ್ಞಾನವು ತಾಂತ್ರಿಕ ಪರಿಣತರು ಮತ್ತು ಸಾಮಾನ್ಯ ಬಳಕೆದಾರರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ತಮ್ಮ ಕ್ಷೇತ್ರದ ಜ್ಞಾನವನ್ನು ಎಐ ಸಾಮರ್ಥ್ಯದೊಂದಿಗೆ ಜೋಡಿಸಿ ಕಡಿಮೆ ವೆಚ್ಚದಲ್ಲಿ ಡಿಜಿಟಲ್ ಗುರುತು ರೂಪಿಸಿಕೊಳ್ಳಬಹುದು. ಇದರಿಂದ ವೆಬ್‌ಸೈಟ್ ಮಾತ್ರವಲ್ಲದೆ, ಭವಿಷ್ಯದಲ್ಲಿ ಆ್ಯಪ್‌ಗಳು ಹಾಗೂ ಇತರ ಡಿಜಿಟಲ್ ಉತ್ಪನ್ನಗಳನ್ನು ರೂಪಿಸುವ ಅವಕಾಶವೂ ಹೆಚ್ಚಲಿದೆ. ವೈಬ್ ಕೋಡಿಂಗ್ ಮತ್ತು ಎಐ ಬಳಕೆಯ ಕುರಿತು ಹೆಚ್ಚಿನ ಮಾಹಿತಿಗೆ 8970007777 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.