120 ಎಕರೆಯಲ್ಲಿ ಲೇಔಟ್‌ಗೆ ಹುಡಾ ಒಪ್ಪಿಗೆ

KannadaprabhaNewsNetwork |  
Published : Apr 11, 2026, 02:15 AM IST
ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು. | Kannada Prabha

ಸಾರಾಂಶ

ಹುಡಾ ವ್ಯಾಪ್ತಿಯಲ್ಲಿ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಲೇಔಟ್ ನಿರ್ಮಾಣಕ್ಕೆ ಕಡ್ಡಾಯವಾಗಿ ಎಸ್‌ಟಿಪಿ ಪ್ಲಾಂಟ್ ಸ್ಥಾಪಿಸಬೇಕು. ಅದಕ್ಕೂ ಮುನ್ನ ಬೆಂಗಳೂರಿನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆಯಬೇಕು.

ಹುಬ್ಬಳ್ಳಿ:ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 120ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನೂತನ ಲೇಔಟ್ ನಿರ್ಮಾಣಕ್ಕೆ ಅನುಮೋದನೆ ಸೇರಿದಂತೆ ವಿವಿಧ 40 ವಿಷಯಕ್ಕೆ ಶುಕ್ರವಾರ ನಡೆದ ಹುಡಾ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ಇಲ್ಲಿನ ಹುಡಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಲೇಔಟ್‌ನಲ್ಲಿ ಉತ್ತಮ ರಸ್ತೆ ಹಾಗೂ ಯುಜಿಡಿ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸದೇ ಹೋದಲ್ಲಿ ಅಂತಹ ಲೇಔಟ್‌ಗಳ ಅನುಮೋದನೆ ರದ್ದುಪಡಿಸಲು ತೀರ್ಮಾನಿಸಲಾಯಿತು.ಎಸ್‌ಟಿಪಿ ಪ್ಲಾಂಟ್ ಕಡ್ಡಾಯ:ಸಭೆಯ ನಂತರ ಮಾತನಾಡಿದ ಹುಡಾ ಅಧ್ಯಕ್ಷ ಶಾಕೀರ್‌ ಸನದಿ, ಹುಡಾ ವ್ಯಾಪ್ತಿಯಲ್ಲಿ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಲೇಔಟ್ ನಿರ್ಮಾಣಕ್ಕೆ ಕಡ್ಡಾಯವಾಗಿ ಎಸ್‌ಟಿಪಿ ಪ್ಲಾಂಟ್ ಸ್ಥಾಪಿಸಬೇಕು. ಅದಕ್ಕೂ ಮುನ್ನ ಬೆಂಗಳೂರಿನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆಯಬೇಕು ಎಂದು ನಿರ್ಧರಿಸಲಾಗಿದೆ. ದೊಡ್ಡ ಲೇಔಟ್ ನಿರ್ಮಾಣ ಮಾಡುವ ಮಾಲೀಕರಿಂದ ಎಸ್‌ಟಿಪಿ ಸ್ಥಾಪನೆಯ ಹಣವನ್ನು ಹುಡಾಗೇ ಭರಣ ಮಾಡಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.ಉತ್ತಮ ಟೌನ್‌ಶಿಪ್‌ಗೆ ನಿರ್ಧಾರ:ಈಗಾಗಲೇ ಹು-ಧಾ ಅವಳಿ ನಗರದ ಸುತ್ತಮುತ್ತ ಹುಡಾದಿಂದ ನಿರ್ಮಿಸಲಾದ ಲೇಔಟ್‌ನಲ್ಲಿ ನಿವೇಶನ ಪಡೆದ ಮಾಲೀಕರಿಗೆ (10 ವರ್ಷ ಅವಧಿ ಮೀರಿದ) ಹುಡಾದಿಂದಲೇ ಶುದ್ಧ ಕ್ರಿಯಾಪತ್ರ ವಿತರಿಸಲು ನಿರ್ಧಾರ ಕೈಗೊಳ್ಳಲಾಯಿತು. ಹುಡಾ ವ್ಯಾಪ್ತಿಗೆ ಒಳಪಡುವ ಹೊಸ ಗ್ರಾಮಗಳಿಗೆ ರಿಂಗ್ ರೋಡ್ ನಿರ್ಮಾಣ, 4-5 ಕಡೆ ಹುಡಾದಿಂದ ಟೌನ್ ಪ್ಲಾನಿಂಗ್ ಯೋಜನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದರಲ್ಲಿ ಒಳಪಡುವ ವಿವಿಧ ಜಮೀನು ಮಾಲೀಕರ ಮನವೊಲಿಸಿ ಉತ್ತಮ ಟೌನ್‌ಶಿಪ್ ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಅದರಲ್ಲಿ ರಸ್ತೆ, ಯುಜಿಡಿ, ರಿಂಗ್ ರಸ್ತೆ ಹಾಗೂ ಸಮುದಾಯ ಭವನ ಸೇರಿದಂತೆ ಎಲ್ಲವೂ ಇರುವಂತೆ ಮಾಡಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದೇವರಾಜ ಆರ್., ವಾಟರ್‌ಬೋರ್ಡ್, ಮಾಲಿನ್ಯ ನಿಯಂತ್ರಣ ಮಂಡಳಿ, ಹು-ಧಾ ಪೊಲೀಸ್ ಆಯುಕ್ತ ಕಚೇರಿ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖರ್ಗೆ ಹೇಳಿಕೆ ವಿರುದ್ಧ ಹಳಿಯಾಳ ಠಾಣೆಯಲ್ಲಿ ಬಿಜೆಪಿ ದೂರು
ನ್ಯಾಷನಲ್ ಪದವಿಪೂರ್ವ ಕಾಲೇಜಿಗೆ ಶೇ. 95 ಫಲಿತಾಂಶ