ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮೈಸೂರು-ಊಟಿ ಹೆದ್ದಾರಿಯ ಮರಳಿ ಹಳ್ಳದ ಬಳಿ ₹10.67 ಕೋಟಿ ವೆಚ್ಚದಲ್ಲಿ 66/11 ಕೆವಿ, 2×12.5 ಎಂ.ವಿ.ಎ ಹೊರೆಯಾಲ (ಅರೇಪುರ) ವಿದ್ಯುತ್ ಉಪ ಕೇಂದ್ರಕ್ಕೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಗುದ್ದಲಿ ಪೂಜೆ ನೆರವೇರಿಸಿದರು.
ಗುದ್ದಲಿ ಪೂಜೆ ಬಳಿಕ ಮಾತನಾಡಿದ ಶಾಸಕರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿರ್ಮಿಸುತ್ತಿರುವ 66/11 ಕೆವಿ, 2×12.5 ಎಂ.ವಿ.ಎ ವಿದ್ಯುತ್ ಉಪ ಕೇಂದ್ರದ ಕೆಲಸ ಬರುವ ಒಂಬತ್ತು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ ಎಂದರು. ಈ ಉಪ ಕೇಂದ್ರದ ವ್ಯಾಪ್ತಿಗೆ ಹೊರೆಯಾಲ, ಅರೇಪುರ, ಹೊಣಕನಪುರ, ರಂಗನಾಥಪುರ, ನಿಟ್ರೆ, ಬೇಗೂರು, ದೇಶಿಪುರ, ಮಂಚಹಳ್ಳಿ, ಚಿಕ್ಕಹುಂಡಿ, ರಂಗೂಪುರ, ಕಮರಹಳ್ಳಿ, ಚನ್ನವಡೆಯಪುರ, ಯಡವನಹಳ್ಳಿ, ಹೊಸಪುರ, ಶ್ರೀಕಂಠಪುರ ಗ್ರಾಮಗಳು ಒಳಪಟ್ಟಿವೆ ಎಂದರು.ಈ ಉಪ ಕೇಂದ್ರ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆ ಇಲ್ಲದೆ ಸಿಗಲಿದೆ. ವೋಲ್ಟೇಜ್ ಸಮಸ್ಯೆ ಇರುವುದಿಲ್ಲ, ಕೃಷಿ ಪಂಪ್ ಸೆಟ್ ಗೂ ಸಮಸ್ಯೆಯಾಗುವುದಿಲ್ಲ, ಗುಣ ಮಟ್ಟದ ವಿದ್ಯುತ್ ಗ್ರಾಹಕರು ಹಾಗೂ ರೈತರಿಗೆ ಸಿಗಲಿದೆ ಎಂದರು. ಈ ಉಪ ಕೇಂದ್ರವನ್ನು ನನ್ನ ತಂದೆ ದಿ.ಎಚ್.ಎಸ್. ಮಹದೇವಪ್ರಸಾದ್ ಕಾಲದಲ್ಲಿ ಮಂಜೂರು ಮಾಡಿಸಿದ್ದರು. ಇಂದು ನನ್ನ ತಂದೆ ಮಂಜೂರು ಮಾಡಿಸಿದ್ದ ಹೊರೆಯಾಲ (ಅರೇಪುರ) ವಿದ್ಯುತ್ ಉಪ ಕೇಂದ್ರಕ್ಕೆ ಚಾಲನೆ ಕೊಟ್ಟಿದ್ದೇನೆ. ಅಲ್ಲದೆ ತಾಲೂಕಿನ ಭೀಮನಬೀಡು ಹಾಗೂ ವಡ್ಡಗೆರೆಯಲ್ಲೂ 66/11 ಕೆವಿ ವಿದ್ಯುತ್ ಉಪ ಕೇಂದ್ರ ಆರಂಭಿಸಬೇಕಿದೆ. ವಡ್ಡಗೆರೆಯಲ್ಲಿ ಅತೀ ಶೀಘ್ರದಲ್ಲೇ ಚಾಲನೆ ಸಿಗಲಿದೆ ಎಂದರು.
ಉಪ ಕೇಂದ್ರದ ಜಾಗದ ಸಮಸ್ಯೆ ಇತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿ ಬಗೆಹರಿಸಲಾಗಿದೆ. ಚರ್ಚೆಯ ದಿನದಂದು ನಾನು ಆಡಿದ ಮಾತಿನಂತೆ ಗ್ರಾಮಸ್ಥರ ಸಮಸ್ಯೆ ಬಗೆಹರಿಸಿ ಕೊಡುತ್ತೇನೆ ಸ್ವಲ್ಪ ದಿನ ಕಾಯಿರಿ ಎಂದು ಸಲಹೆ ನೀಡಿದರು. ಜನರಿಗೆ ಅಗತ್ಯವಾಗಿ ಕುಡಿಯುವ ನೀರು ಹಾಗೂ ವಿದ್ಯುತ್ ಬೇಕು. ಜೊತೆಗೆ ವಸತಿ ಬೇಕು ಜನರ ಮೂಲಭೂತ ಸೌಲಭ್ಯ ಕಲ್ಪಿಸಲು ನಾನು ಮುಂದೆ ಇದ್ದೇನೆ. ಜನರ ಆಶೀರ್ವಾದ ಇರುವ ತನಕ ಜನರ ಸೇವೆ ಮುಂದುವರಿಯುತ್ತದೆ ಎಂದರು.ಕಾಡಾ ಮಾಜಿ ಅಧ್ಯಕ್ಷ ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ನಂಜುಂಡಪ್ರಸಾದ್, ಚಿಕ್ಕಾಟಿ ಗ್ರಾಪಂ ಅಧ್ಯಕ್ಷ ಅರೇಪುರ ಮಹದೇವಕುಮಾರ್, ಬೇಗೂರು ಫ್ಯಾಕ್ಸ್ ಅಧ್ಯಕ್ಷ ನಂದೀಶ್, ಎಪಿಎಂಸಿ ಸದಸ್ಯ ನಾಗರಾಜು, ಹಾಪ್‌ಕಾಮ್ಸ್ ಅಧ್ಯಕ್ಷ ನಾಗೇಶ್, ಜಿಪಂ ಮಾಜಿ ಸದಸ್ಯ ಕೆ.ಶಿವಸ್ವಾಮಿ, ಕೆಪಿಟಿಸಿಎಲ್ ಸೂಪರಿಡೆಂಟ್ ಇಂಜಿನಿಯರ್ ರಮೇಶ್, ಕೆಪಿಟಿಸಿಎಲ್ ಕಾರ್ಯಪಾಲಕ ಅಭಿಯಂತರ ಪ್ರೀತಂ, ತಾಪಂ ಮಾಜಿ ಅಧ್ಯಕ್ಷ ಬಸವರಾಜು, ಮಾಜಿ ಉಪಾಧ್ಯಕ್ಷ ಬಂಗಾರನಾಯಕ, ಮಾಜಿ ಸದಸ್ಯ ನೀಲಕಂಠಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಬಸವನಾಯಕ, ಫ್ಯಾಕ್ಸ್ ಮಾಜಿ ಅಧ್ಯಕ್ಷ ತಮ್ಮಯ್ಯಪ್ಪ ತಗ್ಗಲೂರು, ಕೆ.ಬಸವಣ್ಣ, ಬಿ.ಸಿ. ಮಹದೇವಸ್ವಾಮಿ, ರಂಗಸ್ವಾಮಿ, ಬೇಗೂರು ಫ್ಯಾಕ್ಸ್ ಉಪಾಧ್ಯಕ್ಷ ಸದಾ, ಮುಖಂಡರಾದ ಸುರೇಶ್ ಈಡಿಗ್, ವೆಂಕಟೇಶನಾಯಕ,ಮಲ್ಲಿಕ್ ಸೆಸ್ಕಾಂ ಎಇಇ ಸಂದ್ಯಾ, ಗುತ್ತಿಗೆದಾರ ಅನಿಲ್ ಕುಮಾರ್, ಜೆಇ ಜಯಪ್ರಕಾಶ್, ಮೇಲ್ವಿಚಾರಕ ರಾಮಚಂದ್ರಯ್ಯ ಹಲವರಿದ್ದರು.