ಹುದಿಕೇರಿ ಮಡ್ ಕೋಡ್ ಮಂದ್‌: ಪುತ್ತರಿ ಕೋಲ್ ಮಂದ್

KannadaprabhaNewsNetwork |  
Published : Nov 29, 2026, 03:00 AM IST
ಹುದಿಕೇರಿ    ಮಡ್ ಕೋಡ್  ಮಂದ್ ನಲ್ಲಿ   ವಿಜೃಂಭಣೆಯಿಂದ   ನಡೆದ  ಪುತ್ತರಿ  ಕೋಲ್  ಮಂದ್ | Kannada Prabha

ಸಾರಾಂಶ

ಪೊನ್ನಂಪೇಟೆ ತಾಲೂಕಿನ ಹುದಿಕೇರಿಯ ಐತಿಹಾಸಿಕ ಮಡ್ ಕೋಡ್ ಮಂದ್ ನಲ್ಲಿ ಪುತ್ತರಿ ಕೋಲ್ ಮಂದ್ ವಿಜೃಂಭಣೆಯಿಂದ ನಡೆಯಿತು.

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಹುದಿಕೇರಿಯ ಐತಿಹಾಸಿಕ ಮಡ್ ಕೋಡ್ ಮಂದ್ ನಲ್ಲಿ ಪುತ್ತರಿ ಕೋಲ್ ಮಂದ್ ವಿಜೃಂಭಣೆಯಿಂದ ನಡೆಯಿತು.

ಕೊಣಗೇರಿ ಗ್ರಾಮದ ನಾಡು ತಕ್ಕರಾದ ಅಜ್ಜಿಕುಟ್ಟಿರ ಸುಬ್ಬಯ್ಯ ಹಾಗೂ ಚೆಕ್ಕೇರ ರಾಜೇಶ್ ನೇತೃತ್ವದಲ್ಲಿ ಕೋಣಗೇರಿ ಗ್ರಾಮದಿಂದ ಸಾಂಪ್ರದಾಯಿಕ ಉಡುಪಿನಲ್ಲಿ ಗ್ರಾಮಸ್ಥರು ವಡ್ಡೋಲಗ ಗಳೊಂದಿಗೆ ಹುದಿಕೇರಿ ಮುಖ್ಯರಸ್ತೆಯ ಮೂಲಕ ಮಂದ್ ಗೆ ಆಗಮಿಸಿದರು. ಹುದಿಕೇರಿ ಗ್ರಾಮದ ಊರು ತಕ್ಕರಾದ ಬೊಳ್ಳಜ್ಜಿರ ಕೇಸು ಬೋಪಯ್ಯರವರ ನೇತೃತ್ವದಲ್ಲಿ ದುಡಿ ಕೊಟ್ಟ್ ಪಾಟ್ ನೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಗ್ರಾಮಸ್ಥರೊಂದಿಗೆ ಹುದಿಕೇರಿ ಮಡ್ ಕೋಡ್ ಮಂದ್ ಬಂದು ಸೇರಿ ವಾಡಿಕೆಯಂತೆ ಸಾಂಪ್ರದಾಯಿಕ ಪದ್ಧತಿಗಳ ಆಚರಣೆ ನಂತರ ನಾಡು ತಕ್ಕರು ಹಾಗೂ ಊರು ತಕ್ಕರ ನೇತೃತ್ವದಲ್ಲಿ ಕೋಲಾಟ್ , ತಿಂಗಕೋರ್ ಮೊಟ್ಟ್ ಸಂಘಟನೆಯವರಿಂದ ಪುತ್ತರಿ ಕೋಲಾಟ್ , ಬೊಳಕಾಟ್, ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಲಿಟಲ್ ಫ್ಲವರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಿಂದ ಉಮ್ಮತ್ತಾಟ್ , ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಪರೆಯಕಳಿ, ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಮಂದ್ ಸಮಿತಿಯ ಕಾರ್ಯದರ್ಶಿ ಚಂಗುಲಂಡ ಸೂರಜ್, ಗ್ರಾಮದ ಮುಖಂಡರಾದ ಬಾನಂಗಡ ಅರುಣ್, ಕೊಡವ ಸಮಾಜದ ಅಧ್ಯಕ್ಷರಾದ ಮೀದೇರಿರ ಸವೀನ್. ಪೊಮ್ಮಕ್ಕಡ ಕೂಟದ ಪ್ರಮುಖರಾದ ತೀತಿರ ಊರ್ಮಿಳ ಸೋಮಯ್ಯ, ಇಟ್ಟೀರ ಕಾಶಿ, ಹಿರಿಯರಾರ ಬೊಳ್ಳಜ್ಜಿರ ನಂಜಪ್ಪ, ಭೀಮಯ್ಯ, ಹುದಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿಯವರು, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿಯವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕ್ಕರೆ ಕನಿಷ್ಠ ಮಾರಾಟ ಬೆಲೆ ಕೆ.ಜಿ.ಗೆ ₹60ಕ್ಕೆ ಹೆಚ್ಚಿಸಿ
ಸೈನಿಕ ಶಾಲೆ ಪ್ರವೇಶಾತಿಗೆ ಜ.31ರಂದು ಪರೀಕ್ಷೆ