ವಿಜಯಪುರ: 2027-28ನೇ ಶೈಕ್ಷಣಿಕ ಸಾಲಿಗೆ ವಿಜಯಪುರ ಸೈನಿಕ ಶಾಲೆಯ 6ನೇ ಮತ್ತು 9ನೇ ತರಗತಿಗಳ ಪ್ರವೇಶಾತಿಗಾಗಿ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ ಎಐಎಸ್ಎಸ್ ಇಇ-2027 ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಅರ್ಜಿ ಆಹ್ವಾನಿಸಿದೆ.
ವಿಜಯಪುರ: 2027-28ನೇ ಶೈಕ್ಷಣಿಕ ಸಾಲಿಗೆ ವಿಜಯಪುರ ಸೈನಿಕ ಶಾಲೆಯ 6ನೇ ಮತ್ತು 9ನೇ ತರಗತಿಗಳ ಪ್ರವೇಶಾತಿಗಾಗಿ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ ಎಐಎಸ್ಎಸ್ ಇಇ-2027 ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಅರ್ಜಿ ಆಹ್ವಾನಿಸಿದೆ. ಅರ್ಹ ವಿದ್ಯಾರ್ಥಿಗಳು ಡಿ.2ರ ರಾತ್ರಿ 11.50ರ ವರೆಗೆ https://nta.ac.in ಅಥವಾ https:exams.nta.nic.in /sainik-school-society ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯು 2027ರ ಜ.31ರಂದು ನಡೆಯಲಿದೆ. 6ನೇ ತರಗತಿಗೆ 2015ರ ಏಪ್ರಿಲ್ 1ರಿಂದ 2017ರ ಮಾರ್ಚ್ 31ರ ನಡುವೆ ಹಾಗೂ 9ನೇ ತರಗತಿಗೆ 2012ರ ಏಪ್ರಿಲ್ 1ರಿಂದ 2014ರ ಮಾರ್ಚ್ 31ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅರ್ಹ ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಪಡೆದು ಅರ್ಜಿ ಸಲ್ಲಿಸುವಂತೆ ವಿಜಯಪುರ ಸೈನಿಕ ಶಾಲೆಯ ಪ್ರಾಂಶುಪಾಲೆ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
