ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾವು ಆಯೋಜಿಸುವ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ೬೦ರಿಂದ ೭೦ ಕಂಪನಿಗಳು ಭಾಗವಹಿಸಲಿವೆ. ಎಸ್.ವಿ.ಪಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಎಸ್.ಕೆ. ರಾಜಶೇಖರ್ ಅಧ್ಯಕ್ಷತೆಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಪಡೆಯಲು ಬಯಸುವ ಯುವಕರು, ಅಭ್ಯರ್ಥಿಗಳು ಜ.೨೦ನೇ ತಾರೀಖಿನೊಳಗೆ ಸ್ವ ವಿವರದ ಮಾಹಿತಿಯನ್ನು ನಗರದ ಕೆ.ಆರ್.ಬಡಾವಣೆಯಲ್ಲಿರುವ ನಮ್ಮ ಗೃಹ ಕಚೇರಿಗೆ ತಲುಪಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಮತಿಘಟ್ಟ ಶಿವಸ್ವಾಮಿ, ರಾಜಶೇಖರ್, ಶ್ರೀನಿವಾಸ್, ಗುರುಗದಹಳ್ಳಿ ನಟರಾಜು, ಮೋಹನ್ ಜಕ್ಕನಹಳ್ಳಿ, ಕುಪ್ಪೂರಪ್ಪ, ನಟರಾಜು, ಸುದರ್ಶನ್, ಆಲದಹಳ್ಳಿ ಚೆನ್ನೇಗೌಡ ಮತ್ತಿತರರು ಇದ್ದರು.