ಹಳೇಯ ಫೆನಲ್‌ನಿಂದ ಅದ್ಧೂರಿ ನಾಮಪತ್ರ ಸಲ್ಲಿಕೆ

KannadaprabhaNewsNetwork |  
Published : Jan 12, 2025, 01:17 AM IST
ತಾಳಿಕೋಟೆ 1 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಪಟ್ಟಣದ ತಾಳಿಕೋಟಿ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಆಯ್ಕೆ ಚುನಾವಣೆ ತೀವ್ರ ತುರುಸಿನಿಂದ ಕೂಡಿದ್ದು, ಶನಿವಾರ ಹಳೆ ಫೆನಲ್‌ನ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಮೂಲಕ ಒಟ್ಟು ೩೭ ಕ್ಕೂ ಅಧಿಕ ನಾಮಪತ್ರ ಸಲ್ಲಿಕೆಯಾಗಿವೆ. ಹಳೆಯ ಫೆನಲ್ ಸದಸ್ಯರು ಪಟ್ಟಣದಲ್ಲಿ ಭರ್ಜರಿ ರೋಡ ಶೋ ನಡೆಸುವ ಮೂಲಕ ಬ್ಯಾಂಕ್‌ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ತಾಳಿಕೋಟಿ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಆಯ್ಕೆ ಚುನಾವಣೆ ತೀವ್ರ ತುರುಸಿನಿಂದ ಕೂಡಿದ್ದು, ಶನಿವಾರ ಹಳೆ ಫೆನಲ್‌ನ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಮೂಲಕ ಒಟ್ಟು ೩೭ ಕ್ಕೂ ಅಧಿಕ ನಾಮಪತ್ರ ಸಲ್ಲಿಕೆಯಾಗಿವೆ. ಹಳೆಯ ಫೆನಲ್ ಸದಸ್ಯರು ಪಟ್ಟಣದಲ್ಲಿ ಭರ್ಜರಿ ರೋಡ ಶೋ ನಡೆಸುವ ಮೂಲಕ ಬ್ಯಾಂಕ್‌ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

೧೩ ಜನ ನಿರ್ದೇಶಕರ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರದಿಂದ ೭ ಜನ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ೧, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ೧, ಹಿಂದುಳಿದ ವರ್ಗ ಪ್ರವರ್ಗ(ಎ) ಮೀಸಲು ಕ್ಷೇತ್ರದಿಂದ ೧, ಹಿಂದುಳಿದ ವರ್ಗ ಪ್ರವರ್ಗ (ಬಿ) ೧, ಮಹಿಳಾ ಮೀಸಲು ಕ್ಷೇತ್ರದಿಂದ ೨ ಆಯ್ಕೆಯಾಗಬೇಕಿದೆ. ಹಳೆಯ ಫೆನಲ್‌ನ ಸಾಮಾನ್ಯ ಕ್ಷೇತ್ರದಿಂದ ದತ್ತಾತ್ರೇಯ ಹೆಬಸೂರ, ಕಾಶಿನಾಥ ಸಜ್ಜನ(ಬಿದರಕುಂದಿ), ಈಶ್ವರಪ್ಪ ಬಿಳೇಭಾವಿ, ಮುರಿಗೆಪ್ಪ ಸರಶೆಟ್ಟಿ, ಚಿಂತಪ್ಪಗೌಡ ಯಾಳಗಿ, ನಾಗಪ್ಪ ಚಿನಗುಡಿ, ದ್ಯಾಮನಗೌಡ ಪಾಟೀಲ, ಹಿಂದುಳಿದ ವರ್ಗ(ಅ) ಮೀಸಲು ಕ್ಷೇತ್ರದಿಂದ ಅಮರಸಿಂಗ್ ಹಜೇರಿ(ಬಾಬು), ಮಹಿಳಾ ಮೀಸಲು ಕ್ಷೇತ್ರದಿಂದ ಗಿರಿಜಾಬಾಯಿ ಕೊಡಗಾನೂರ, ಶೈಲಾ ಬಡದಾಳಿ, ಹಿಂದುಳಿದ ವರ್ಗ(ಬ) ಕ್ಷೇತ್ರದಿಂದ ಸುರೇಶ ಪಾಟೀಲ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಮಪ್ಪ ಕಟ್ಟಿಮನಿ, ಪರಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸಂಜೀವಪ್ಪ ಬರದೇನಾಳ ಸೇರಿದಂತೆ ಶನಿವಾರ ಪ್ರತ್ಯೇಕವಾಗಿ ೮ ಜನರು ಸೇರಿ ಒಟ್ಟು ೨೧ ಜನರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಪ್ರತಿ ಭಾರಿ ಅವಿರೋಧ ಆಯ್ಕೆಯೇ ಹೆಚ್ಚಾಗಿತ್ತು. ಈ ಬಾರಿ ಚುನಾವಣೆ ನಡೆಯುತ್ತಿದ್ದು, ಚುನಾವಣೆ ತುರುಸಿನಿಂದ ನಡೆದಿದೆ. ಜ.೧೨ರಂದು ಪರಿಶೀಲನೆ ನಡೆಯಲಿದ್ದು, ಜ.೧೩ರಂದು ನಾಮಪತ್ರ ಹಿಂತೆಗೆದುಕೊಳ್ಳಬಹುದು.

ಈ ವೇಳೆ ಮುಖಂಡರಾದ ವಾಸುದೇವ ಹೆಬಸೂರ, ಕಾಶಿನಾಥ ಮುರಾಳ, ರಾಜಶೇಖರಯ್ಯ ಹಿರೇಮಠ, ಈರಯ್ಯ ಕೊಡಗಾನೂರ, ಪ್ರಭು ಬಿಳೇಭಾವಿ, ರಾಜಶೇಖರ ಕೊಡಗಾನೂರ, ಹಣಮಂತ್ರಾಯ ಬಾಗೇವಾಡಿ, ರಾಜು ಪಾಟೀಲ, ಪ್ರಕಾಶ ಹಜೇರಿ, ಹರಿಸಿಂಗ್ ಮೂಲಿಮನಿ, ಮಾನಸಿಂಗ್ ಕೊಕಟನೂರ, ರಮೇಶ ಗೌಡಗೇರಿ, ಜಗದೀಶ ಬಿಳೇಭಾವಿ, ಚೆನ್ನಣ್ಣ ಮಾಳಿ, ನಾನಾಗೌಡ ಬಸರಡ್ಡಿ, ಬಿ.ಎಸ್.ಇಸಾಂಪೂರ, ಎಚ್.ಎಸ್.ಗೂಗಲ್ಲ, ಶರಣಗೌಡ ಇಬ್ರಾಹಿಂಪೂರ, ಆರ್.ಸಿ.ಪಾಟೀಲ, ಜಿ.ಕೆ.ಬಿರಾದಾರ, ಎಚ್.ಬಿ.ಬಾಗೇವಾಡಿ, ಶಶಿದರ ಬೆಣ್ಣೂರ, ಕಿರಣ ಬಡಿಗೇರ, ಶಿವು ಯಳಮೇಲಿ, ಬಿ.ಕೆ.ಯಡ್ರಾಮಿ, ಸಿ.ಬಿ.ದೊಡಮನಿ, ಚನ್ನಬಸ್ಸು ದೇಸಾಯಿ, ಶಿವಶಂಕರ ಹಿರೇಮಠ, ಅಪ್ಪು ಸರೂರ, ಭೀಮು ಸೂಳಿಭಾವಿ, ವ್ಹಿ.ಸಿ.ಹಿರೇಮಠ, ಪ್ರಕಾಶ ಮನಗೂಳಿ, ಬಾಬು ಕಾರ್ಜೋಳ, ರಮೇಶ ಸಾಲಂಕಿ, ಸುಭಾಸ ಹೂಗಾರ, ಘವಿಸಂಗಯ್ಯ ಪಂಜಗಲ್ಲ, ಚನಬಸ್ಸು ಸರಶೆಟ್ಟಿ, ಡಿ.ವ್ಹಿ.ಪಾಟೀಲ ಇತರರು ಹಾಜರಿದ್ದರು________

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!