ಸಾವಿರಾರು ಮಂದಿ ಭೇಟಿ, ವಿವಿಧ ಉತ್ಪನ್ನ ಖರೀದಿ । ಖಾದಿ, ಅಲಂಕಾರಿಕ ವಸ್ತು, ಆಟಿಕೆ, ಪುಸ್ತಕ, ಕೃಷಿ ಉಪಕರಣ ಮಳಿಗೆ ಸ್ಥಾಪನೆಆಹಾರ ಪ್ರಿಯರಿಗೆ ದೇಶಿ ತಿನಿಸು ಲಭ್ಯ । ಮನರಂಜನಾ ಆಟಕ್ಕೆ ಜೈಂಟ್‌ವ್ಹೀಲ್, ಸೀಸಾ ಬೋಟ್ । ಸಾರ್ವಜನಿಕರಿಗೆ ಉಚಿತ ಪ್ರವೇಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗನಗರದ ಫ್ರೀಡಂ ಪಾರ್ಕ್‌ನಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಡಿ.10ರವರೆಗೆ ಆಯೋಜಿಸಿರುವ ಬೃಹತ್ ಸ್ವದೇಶಿ ಮೇಳಕ್ಕೆ ಮೊದಲ ದಿನ ಉತ್ತಮ ಸ್ಪಂದನೆ ದೊರಕಿದ್ದು, ಸಾವಿರಾರು ಮಂದಿ ಸ್ವದೇಶಿ ಮೇಳಕ್ಕೆ ಭೇಟಿ ನೀಡಿ ವಿವಿಧ ವಸ್ತುಗಳು, ಉತ್ಪನ್ನಗಳನ್ನು ಖರೀದಿಸಿ, ಬಗೆ ಬಗೆಯ ಖಾದ್ಯ ಸವಿದರು.
ಪ್ರವೇಶ ದ್ವಾರದಲ್ಲಿ ಬೃಹತ್ ರಂಗೋಲಿ ಸ್ವಾಗತಿಸಲಿದೆ. ದೇಶಿಯ ತಳಿಯ ಗೋವುಗಳನ್ನು ಇರಿಸಲಾಗಿದೆ. ಬೃಹತ್ ಪೆಂಡಾಲ್‌ನ ಒಳಾಂಗಣದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಮಾಹಿತಿ ಕೌಂಟರ್ ಸ್ಥಾಪಿಸಲಾಗಿದೆ. ಬೃಹತ್ ಪೆಂಡಾಲ್‌ನ ಅಡಿ ವಿವಿಧ ಖಾದಿ ಉತ್ಪನ್ನಗಳು, ಅಲಂಕಾರಿಕ ವಸ್ತುಗಳು, ಆಟಿಕೆ, ಪುಸ್ತಕ, ಆಯುರ್ವೇದ ಔಷಧ, ಕೃಷಿ ಉಪಕರಣಗಳು ಸೇರಿದಂತೆ ವಿವಿಧ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಜನ ಸರಾಗವಾಗಿ ಓಡಾಡಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.ಬೃಹತ್ ಪೆಂಡಾಲ್‌ನ ಪಕ್ಕದಲ್ಲಿ ತಿಂಡಿ, ತಿನಿಸುಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ವಿವಿಧ ದೇಶೀಯ ತಿಂಡಿ, ತಿನಿಸು, ಚಾಟ್ಸ್ ಇಲ್ಲಿ ಲಭ್ಯ. ಸ್ಥಳದಲ್ಲೇ ಅಡುಗೆ ಸಿದ್ಧಪಡಿಸಿ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆಯು ಇಲ್ಲಿದೆ. ತಿಂಡಿ, ತಿನಿಸು ಸವಿಯುವವರಿಗೆ ಟೇಬಲ್ ಮತ್ತು ಚೇರುಗಳ ವ್ಯವಸ್ಥೆಯೂ ಇದೆ.
ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಗೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ವಿವಿಧ ಪ್ರದರ್ಶನ ಆಯೋಜಿಸಲಾಗಿದೆ. ಕೀಟ ಪ್ರಪಂಚ, ವಿವಿಧ ತಳಿಯ ಭತ್ತ, ಅಡಕೆ ಸಂಶೋಧನ ಕೇಂದ್ರ, ಮೀನು ಸಾಕಾಣಿಕೆ ಸೇರಿದಂತೆ ವಿವಿಧ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಮಾಹಿತಿ ನೀಡಲು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ನಿಯೋಜನೆ ಮಾಡಲಾಗಿದೆ.ಮಕ್ಕಳು ಆಟವಾಡಲು ಮನರಂಜನಾ ವಿಭಾಗವಿದೆ. ಜೈಂಟ್‌ವ್ಹೀಲ್, ಸೀಸಾ ಬೋಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಹಾಕಲಾಗಿದೆ.
ಸ್ವದೇಶಿ ಮೇಳದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಆಸಕ್ತರು ಇವುಗಳಲ್ಲಿ ನಿತ್ಯ ಪಾಲ್ಗೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಮೇಳದ ಕುರಿತು ಮಾಹಿತಿ ಒದಗಿಸಲು ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗಿದೆ.- - -
7ಎಸ್‌ಎಂಜಿಕೆಪಿ01ಶಿವಮೊಗ್ಗದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದ ಪ್ರವೇಶ ದ್ವಾರದಲ್ಲಿ ಹಾಕಿರುವ ಬೃಹತ್ ರಂಗೋಲಿ.
- - -7ಎಸ್‌ಎಂಜಿಕೆಪಿ02
ಶಿವಮೊಗ್ಗದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದಲ್ಲಿ ಖಾದಿ ಉತ್ಪನ್ನಗಳನ್ನು ಖರೀದಿಸುತ್ತಿರುವ ಜನರು.