ಇಂಡಿಯಲ್ಲಿ ಬೃಹತ್‌ ತಿರಂಗಾ ಯಾತ್ರೆ ಸಂಭ್ರಮ

KannadaprabhaNewsNetwork |  
Published : May 31, 2025, 12:07 AM IST
ಇಂಡಿ : | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ನಿಮಿತ್ತ ಇಂಡಿಯಲ್ಲಿ ಬೃಹತ್‌ ತಿರಂಗಾ ಯಾತ್ರೆ ನಡೆಯಿತು. ಪಟ್ಟಣದ ಶಿವಾಜಿ ವೃತ್ತದಲ್ಲಿ ತಿರಂಗ ಯಾತ್ರೆಗೆ ಅಭಿನವ ರಾಚೋಟೇಶ್ವರ ಅಭಿನವ ಮುರುಘೇಂದ್ರ, ಶಿವಾನಂದ ಶಿವಾಚಾರ್ಯರು, ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದರು. ಶಿವಾಜಿ ವೃತ್ತದಿಂದ ಆರಂಭಗೊಂಡು ಮಹಾವೀರ, ಅಂಬೇಡ್ಕರ ವೃತ್ತದ ಮೂಲಕ ನಡೆದು ಬಸವೇಶ್ವರ ವೃತ್ತ ತಲುಪಿತು.

ಕನ್ನಡಪ್ರಭ ವಾರ್ತೆ ಇಂಡಿ

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ನಿಮಿತ್ತ ಇಂಡಿಯಲ್ಲಿ ಬೃಹತ್‌ ತಿರಂಗಾ ಯಾತ್ರೆ ನಡೆಯಿತು. ಪಟ್ಟಣದ ಶಿವಾಜಿ ವೃತ್ತದಲ್ಲಿ ತಿರಂಗ ಯಾತ್ರೆಗೆ ಅಭಿನವ ರಾಚೋಟೇಶ್ವರ ಅಭಿನವ ಮುರುಘೇಂದ್ರ, ಶಿವಾನಂದ ಶಿವಾಚಾರ್ಯರು, ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದರು. ಶಿವಾಜಿ ವೃತ್ತದಿಂದ ಆರಂಭಗೊಂಡು ಮಹಾವೀರ, ಅಂಬೇಡ್ಕರ ವೃತ್ತದ ಮೂಲಕ ನಡೆದು ಬಸವೇಶ್ವರ ವೃತ್ತ ತಲುಪಿತು.

ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಿಲ್ಲುವವರೆಗೆ ಯುದ್ಧ ನಿಲ್ಲುವುದಿಲ್ಲ. ಯುದ್ಧ ತಾತ್ಕಾಲಿಕವಾಗಿ ವಿರಾಮವಾಗಿದೆ ವಿನಃ ಪೂರ್ಣವಾಗಿ ಮುಕ್ತಾಯಗೊಂಡಿರುವುದಿಲ್ಲ. ಭಾರತೀಯ ಸೈನಿಕರು ಪಾಕಿಸ್ತಾನದಲ್ಲಿನ ಭಯೋತ್ಪಾದಕರ ತಾಣಗಳನ್ನು ಉಡಾಯಿಸಿದ್ದಾರೆ ಅಲ್ಲದೆ ಭಯೋತ್ಪಾದಕರ ಹುಟ್ಟು ಅಡಗಿಸಿದ್ದಾರೆ. ಮಳೆ, ಗಾಳಿ, ಚಳಿ, ಬಿಸಿಲು ಲೆಕ್ಕಿಸದೇ ಕುಟುಂಬವನ್ನು ಬಿಟ್ಟು ತಾಯ್ನಾಡಿನ ರಕ್ಷಣೆಯಲ್ಲಿ ತೊಡಗಿರುವ ವೀರ ಯೋಧರಿಗೆ ಆತ್ಮಸ್ಥೈರ್ಯ ತುಂಬಲು ತಿರಂಗಾ ಯಾತ್ರೆ ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಭಯೋತ್ಪಾದನೆ ಮಟ್ಟಹಾಕಲು ಟೊಂಕಕಟ್ಟಿ ನಿಂತ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

ಯಾವುದೇ ದೇಶ ಭಾರತದ ತಂಟೆಗೆ ಬಂದರೆ ನಮ್ಮ ಸೈನಿಕರ ಶಕ್ತಿ ಏನು ಎಂಬುದನ್ನು ಜಗತ್ತಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ತೋರಿಸಿದ್ದಾರೆ. ದೇಶದ ರಕ್ಷಣೆ ವಿಷಯ ಬಂದಾಗ ನಾವೆಲ್ಲರೂ ಒಗ್ಗಟಿನಿಂದ ನಮ್ಮ ಸೈನಿಕರ ಹಾಗೂ ಪ್ರಧಾನಿ ಮೋದಿಯವರ ಜೊತೆಗೆ ನಿಲ್ಲಬೇಕು ಎಂದು ಹೇಳಿದರು.

ಅಭಿನವ ರಾಚೋಟೇಶ್ವರ ಶ್ರೀ, ಅಭಿನವ ಮುರುಘೇಂದ್ರ ಶಿವಾಚಾರ್ಯ ಮಾತನಾಡಿ, ಭಾರತೀಯ ಸೈನಿಕರು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಮೂಲಕ ಭಯೋತ್ಪಾದನೆಗೆ ಕಡಿವಾಣ ಹಾಕಿದ್ದಾರೆ. ಭಾರತ ದೇಶ ಸೌಮ್ಯ ಮತ್ತು ಪ್ರೀತಿಯ ದೇಶ. ಎಲ್ಲರನ್ನೂ ಗೌರವಿಸಿ, ಪ್ರೀತಿಸುತ್ತೇವೆ. ಆದರೆ ನಮ್ಮ ದೇಶಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದೇವೆ. ಇಂತಹ ದೇಶಭಕ್ತಿಯ ಕಾರ್ಯ ಪ್ರತಿಯೊಬ್ಬರಲ್ಲಿ ಬರಬೇಕಿದೆ ಎಂದರು.

ಬಿಜೆಪಿ ಜಿಲ್ಲಾ ಮುಖಂಡ ಕಾಸುಗೌಡ ಬಿರಾದಾರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಮಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣಿ, ಹಣಮಂತ್ರಾಯಗೌಡ ಪಾಟೀಲ, ಅನೀಲ ಜಮಾದಾರ, ದೇವೇಂದ್ರ ಕುಂಬಾರ, ಮಂಜು ದೇವರ, ರೂಗಿಮಠ, ಅನೀಲಗೌಡ ಬಿರಾದಾರ, ಬತ್ತುಸಾಹುಕಾರ ಹಾವಳಗಿ, ಸೋಮು ನಿಂಬರಗಿಮಠ, ಸಂಜೀವ ದಶವಂತ, ಬಾಳು ಮುಳಜಿ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಸಾಗರ ಬಿರಾದಾರ, ಭಾಗೇಶ ಮಲಘಾಣ, ಎಸ್‌.ಎಂ.ಬಿರಾದಾರ, ಎ.ಎಸ್.ಗಾಣಿಗೇರ, ವಕೀಲರ ಸಂಘದ ಅಜೀತ ಧನಶೆಟ್ಟಿ, ಗುರು ಜೋಶಿ, ರಮೇಶ ಕುಲಕರ್ಣಿ, ಶಾಂತು ನಿಂಬರಗಿಮಠ, ಎಸ್.ಜೆ.ವಾಲಿಕಾರ, ನಿವೃತ್ತ ಸೈನಿಕರಾದ ಬಸವರಾಜ ಬಂಕೂರ, ಎಂ.ಪಿ.ಬಿರಾದಾರ, ಎಸ್.ಬಿ.ಹಿರೇಮಾಳ, ಶ್ರೀಕಾಂತ ದೇವರ, ಚೆನ್ನುಗೌಡ ಪಾಟೀಲ, ರಾಮಸಿಂಗ ಕನ್ನೊಳ್ಳಿ, ಅನೀಲ ಪ್ರಸಾದ ಏಳಗಿ, ಎಸ್.ಟಿ.ಪಾಟೀಲ, ಅನುಸೂಯಾ ಮದರಿ, ಬೌರಮ್ಮ ನಾವಿ, ಸುನಂದಾ ಗಿರಣಿವಡ್ಡರ, ವೈದ್ಯರು, ಸಾಹಿತಿಗಳು ಮತ್ತಿತರಿದ್ದರು.

ತಿರಂಗಾ ಯಾತ್ರೆಯ ಉದ್ದಕ್ಕೂ ಭಾರತೀಯ ಸೈನಿಕರ ಕಾರ್ಯಕ್ಕೆ ಜೈಘೋಷ ಕೂಗಲಾಯಿತು. ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಸಾರ್ವಜನಿಕರು ಕೈಯಲ್ಲಿ ಭಾರತದ ಧ್ವಜವನ್ನು ಹಿಡಿದು ಮೆರವಣಿಗೆಯುದ್ದಕ್ಕೂ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌