ನಿವೃತ್ತ ಯೋಧರು ಹಾಗೂ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಕಚೇರಿ ಆವರಣದಲ್ಲಿ ತಿರಂಗಾ ಹಿಡಿದ ಶಾಲಾ, ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ದೇಶದ ಪರ ಘೋಷಣೆ ಕೂಗಿ ರಾಷ್ಟ್ರಭಕ್ತಿ ಪ್ರದರ್ಶಿಸಿದರು. ಪೆಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಪಾತಕಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎನ್ನುವುದು ಕೋಟಿ ಕೋಟಿ ಭಾರತೀಯರ ಬಯಕೆಯಾಗಿತ್ತು. ಇದನ್ನು ಮನಗಂಡ ಸೇನೆ ಆಪರೇಷನ್ ಸಿಂದೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ತೋರಿದ ರಾಜಕೀಯ ಜಾಣ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆನಿವೃತ್ತ ಯೋಧರು ಹಾಗೂ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಕಚೇರಿ ಆವರಣದಲ್ಲಿ ತಿರಂಗಾ ಹಿಡಿದ ಶಾಲಾ, ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ದೇಶದ ಪರ ಘೋಷಣೆ ಕೂಗಿ ರಾಷ್ಟ್ರಭಕ್ತಿ ಪ್ರದರ್ಶಿಸಿದರು.
ತೆರದ ಜೀಪಿನಲ್ಲಿ ಭಾರತ ಮಾತೆ ಭಾವಚಿತ್ರ ಇರಿಸಿ ಪುಷ್ಪ ನಮನ ಸಲ್ಲಿಸಿ ದೇಶಪ್ರೇಮ ಮೆರದಿದ್ದು ವಿಶೇಷವಾಗಿತ್ತು. ಪ್ರವಾಸಿ ಮಂದಿರದ ಬಳಿ ಮೆರವಣಿಗೆ ಸಂಪನ್ನಗೊಂಡಿತು. ತಾಲೂಕು ಸೈನಿಕರ ಸಂಘದ ಕಾರ್ಯದರ್ಶಿ ಹಬ್ಬನಘಟ್ಟ ನವೀನ್ ಕುಮಾರ್ ಮಾತನಾಡಿ, ಪೆಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಪಾತಕಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎನ್ನುವುದು ಕೋಟಿ ಕೋಟಿ ಭಾರತೀಯರ ಬಯಕೆಯಾಗಿತ್ತು. ಇದನ್ನು ಮನಗಂಡ ಸೇನೆ ಆಪರೇಷನ್ ಸಿಂದೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ತೋರಿದ ರಾಜಕೀಯ ಜಾಣ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಭಾರತೀಯರ ಸಹನೆ ಪರೀಕ್ಷೆಗೆ ಮುಂದಾದ ಪಾಕ್ ಪ್ರಚೋದಿತ ಉಗ್ರರನ್ನು ಸೇನೆ ಸದೆಬಡಿಯದೇ ಬಿಡುವುದಿಲ್ಲ ಎಂದು ಹೇಳಿದರು.ಜಿಲ್ಲಾ ನಿರ್ದೇಶಕರಾದ ಮಹೇಶ್, ರಮೇಶ್, ಹೋಬಳಿ ನಿರ್ದೇಶಕರಾದ ಮಂಜುನಾಥ್, ಮಲ್ಲಿಕಪ್ಪ, ಅಶೋಕ್ ಸಂಘಟನಾ ಕಾರ್ಯದರ್ಶಿ ನಾಗಭೂಷಣ್, ಮಾಜಿ ಸೈನಿಕರಾದ ಅಣ್ಣೇಗೌಡ, ಸೋಮಶೇಖರ್, ಸುರೇಶ್ ದೇವರಾಜ್, ಯೋಗೀಶ್, ಕಲ್ಯಾಣಪ್ಪ , ಹೊನ್ನೇಗೌಡ, ಪ್ರವೀಣ್, ಬೋರೇಗೌಡ, ಪುರುಷೋತ್ತಮ್, ಪ್ರಕಾಶ್, ಪರಮೇಶ್ವರಪ್ಪ, ಕರುಣಾಕರ್, ಜಗದೀಶ್, ಚಂದ್ರ ನಾಯಕ್, ಸೈನಿಕರಾದ ಜಗದೀಶ್, ಧನಪಾಲನಾಯಕ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪರಿಸರವಾದಿ ಉಮಾಪತಿ ಮೊದಲಿಯಾರ್ ಸೇರಿದಂತೆ ಸಂಘಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಪಾಲ್ಗೊಂಡಿದ್ದರು._
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.