ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಹುಲಿಬೆಲೆ ಗ್ರಾಮ ಪಂಚಾಯಿತಿಯಲ್ಲಿ ಎರಡೂ ರಾಜಕೀಯ ಪಕ್ಷಗಳ ಮುಖಂಡರು ಪರಸ್ಪರ ಮಾತುಕತೆ ಮೂಲಕ ಸ್ಥಾನಗಳನ್ನು ಹಂಚಿಕೊಂಡು ಸಹಕಾರ ಸಂಘದಲ್ಲಿ ರಾಜಕೀಯ ಬೇಡವೆಂದು ನಿರ್ಧರಿಸಿದ್ದರು.
ಆದರೆ ಎನ್‌ಡಿಎ ಮೈತ್ರಿ ಕೂಟದ ಮುಖಂಡರು ಹೊಂದಾಣಿಕೆಗೆ ಸಹಕಾರ ನೀಡದೆ ಸಹಕಾರ ಸಂಘದ ಆಡಳಿತ ಚುಕ್ಕಾಣಿ ಹಿಡಿಯುವ ಹುಮ್ಮಸ್ಸಿನಿಂದ ಚುನಾವಣೆ ಎದುರಿಸಿದರು. ಆದರೆ ಚುನಾವಣೆಗೂ ಮೊದಲೇ ಎರಡು ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾದರು. ಉಳಿದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 10 ಸ್ಥಾನಗಳಲ್ಲೂ ಕೂಡ ಕಾಂಗ್ರೆಸ್ ಬೆಂಬಲಿತರೇ ಚುನಾಯಿತರಾದರು.ವೆಂಕಟೇಶಪ್ಪ.ಬಿ.ಅಶ್ವತ್ಥಪ್ಪ, ಜನಾರ್ದನ್, ರಾಮಕೃಷ್ಣಪ್ಪ, ರಾಜಪ್ಪ, ಮಂಜುನಾಥ್.ಬಿ.ವೆಂಕಟೇಶಪ್ಪ, ಅಪ್ಪಾಲಪ್ಪ, ಜಯಂತಿ ಮತ್ತು ಬಿ.ಕೆ.ಮಂಜುನಾಥ್ ಚುನಾವಣೆಯಲ್ಲಿ ಆಯ್ಕೆಯಾದರೆ, ಜಿ.ವಿ.ರಾಮಪ್ಪ ಮತ್ತು ನಾರಾಯಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಭೂ ಬ್ಯಾಂಕಿನ ಮಾಜಿ ಅಧ್ಯಕ್ಷ ಎಚ್.ಕೆ.ನಾರಾಯಣಸ್ವಾಮಿ, ನಿರ್ದೇಶಕ ಚಿಕ್ಕಹೊಸಹಳ್ಳಿ ಮಂಜುನಾಥಗೌಡ, ವೆಂಕಟೇಶ್ ಬಿ,. ಭೂ ಬ್ಯಾಂಕಿನ ಅಧ್ಯಕ್ಷ ರಘುನಾಥ್ ಇತರರು ಇದ್ದರು.
ಚುನಾವಣಾಧಿಕಾರಿಯಾಗಿ ಎನ್.ವೆಂಕಟೇಶಬಾಬು ಕಾರ್ಯನಿರ್ವಹಿಸಿದರು, ಹುಲಿಬೆಲೆ ಸಹಕಾರ ಸಂಘದ ಕಾರ್ಯದರ್ಶಿ ಮಂಜುನಾಥ್ ಇದ್ದರು.