ಕೊಪ್ಪಳ: ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ದಸರಾ ಮಹೋತ್ಸವ ಅಂಗವಾಗಿ ಅ. 3ರಿಂದ ಅ. 12ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅ. 3ರಂದು ಸಂಜೆ 6.30ಕ್ಕೆ ಘಟಸ್ಥಾಪನೆ ಅಂಗವಾಗಿ ದೇವಸ್ಥಾನದ ಸಿಬ್ಬಂದಿಯಿಂದ ಮಂಗಳವಾದ್ಯ ಹಾಗೂ ಹೊಸಪೇಟೆಯ ಮೀರಾ ಹಾಗೂ ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿವೆ.ಅ. 4ರ ಸಂಜೆ 6.30ಕ್ಕೆ ಹುಲಿಗಿಯ ಗೀತಪ್ರಿಯ ಮತ್ತು ಅಂಜಲಿ ಭರತನಾಟ್ಯ ಕಲಾ ಕೇಂದ್ರದಿಂದ ಭರತನಾಟ್ಯ ಹಾಗೂ ಕೆಂಚಟನಹಳ್ಳಿಯ ಶ್ಯಾಮ್ ಬಿ. ಅವರಿಂದ ಯೋಗ ಕಾರ್ಯಕ್ರಮ ನಡೆಯಲಿವೆ.
ಅ. 5ರಂದು ಸಂಜೆ 6.30ಕ್ಕೆ ಹುಲಿಗಿ ನಾಟ್ಯನಾದ ಕಲಾ ಕೇಂದ್ರದ ಶಾಲಿನಿ ಹೆಬ್ಬಾರ್ ಅವರಿಂದ ಭರತನಾಟ್ಯ, ತೆಗ್ಗಿಹಾಳದ ಶಿವರಾಯಪ್ಪ ಬಸಪ್ಪ ಚೌಡ್ಕಿ ಅವರಿಂದ ಚೌಡ್ಕಿ ಪದಗಳು, ಹುಲಿಗಿಯ ಸಂಗೀತ ಕಲಾವಿದೆ ಕೃತಿ ಹ್ಯಾಟಿ ಅವರಿಂದ ಸುಗಮ ಸಂಗೀತ, ಭಾಗ್ಯನಗರದ ಶಕುಂತಲಾ ಬೆನ್ನಾಳ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿವೆ.ಅ. 6ರಂದು ಸಂಜೆ 6.30ಕ್ಕೆ ಸಿಂಧನೂರಿನ ಕರ್ನಾಟಕ ಜಾನಪದ ಸಾಂಸ್ಕೃತಿಕ ಕಲಾ ತಂಡದ ನಾರಾಯಣಪ್ಪ ಯಾಡ, ಶಿರಿವಾರ ಅವರಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಅ. 7ರಂದು ಸಂಜೆ 6.30ಕ್ಕೆ ಮೈಸೂರಿನ ರಾಮಚಂದ್ರಾಚಾರ್ಯರು ಅವರಿಂದ ಭಕ್ತಿಗೀತ ದರ್ಶನ, ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯರಿಗೆ ಶಾರ್ದೂಲ ವಾಹನ ಪೂಜೆ ನಡೆಯಲಿದೆ.
ಅ. 8ರಂದು ಸಂಜೆ 6.30 ಗಂಟೆಗೆ ಹುಬ್ಬಳ್ಳಿಯ ಶ್ರೀಕಾಂತ ಬಾಕಳೆ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ, ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಸಿಂಹ ವಾಹನ ಪೂಜೆ ನಡೆಯಲಿದೆ. ಅ. 9ರಂದು ಸಂಜೆ 6.30 ಗಂಟೆಗೆ (ಸರಸ್ವತಿ ಆವಾಹನೆ) ಉಡುಪಿ ಜಿಲ್ಲೆಯ ಅಂಗಾರಕಟ್ಟೆಯ ಯಕ್ಷಗಾನ ಕಲಾ ಕೇಂದ್ರದ ರಾಜಶೇಖರ್ ಹೆಬ್ಬಾರ್ ಅವರಿಂದ ಯಕ್ಷಗಾನ ಪ್ರದರ್ಶನ, ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಮಯೂರ ವಾಹನ ಪೂಜೆ ನಡೆಯಲಿದೆ.ಅ. 10ರಂದು ಸಂಜೆ 6.30 ಗಂಟೆಗೆ ಸರಸ್ವತಿ ಪೂಜೆ, ದುರ್ಗಾಷ್ಟಮಿ, ಕನ್ನಡ ರಾಜ್ಯ ಪ್ರಶಸ್ತಿ ಪುರಸ್ಕೃತ ಜಗದೀಶ್ ಪುತ್ತೂರು ಅವರಿಂದ ಸಂಗೀತಗಾನ ಸಂಭ್ರಮ ಮತ್ತು ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಅಶ್ವ ವಾಹನ ಪೂಜೆ ನಡೆಯಲಿದೆ. ಅ. 11ರಂದು ಸಂಜೆ 6.30ಕ್ಕೆ ಮಹಾನವಮಿ, ಆಯುಧ ಪೂಜೆ, ಬೆಂಗಳೂರಿನ ಡಾ. ಬೇಲೂರು ರಘುನಂದನ್ ಅವರ ನಿರ್ದೇಶನದ ''''''''ಮಾತಾ " ನಾಟಕ ಪ್ರದರ್ಶನ ಮತ್ತು ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಗಜವಾಹನ ಪೂಜೆ ನಡೆಯಲಿದೆ.
ಅ. 12ರಂದು ವಿಜಯದಶಮಿಯ ಪ್ರಯುಕ್ತ ಮಧ್ಯಾಹ್ನ 3 ಗಂಟೆಯಿಂದ ಶ್ರೀ ದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷಕ್ಕೆ ತೆರಳಿ, ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಲಾಗುವುದು. ಆನಂತರ ದೇವಸ್ಥಾನದಲ್ಲಿ ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರಪುಷ್ಪದೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳುತ್ತವೆ ಎಂದು ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಂ.ಎಚ್. ಪ್ರಕಾಶ್‌ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಾಲಿಬಾಲ್ ಪಂದ್ಯ: ಅ. 7ರಿಂದ 9ರ ವರೆಗೆ ಹುಲಿಗಿಯ ಹಳೇ ತುಂಗಭದ್ರಾ ಪ್ರೌಢಶಾಲೆಯಲ್ಲಿ ಪುರುಷರ ಹಾಗೂ ಮಹಿಳೆಯರ ರಾಜ್ಯಮಟ್ಟದ ಮುಕ್ತ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.