ಕನ್ನಡಪ್ರಭ ವಾರ್ತೆ ಉಡುಪಿ ನಾಲ್ಕು ದಶಕಗಳಿಂದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ನೂರಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ಇಲ್ಲಿನ ಕಾಡುಬೆಟ್ಟು ನಿವಾಸಿ, ಸಂಪ್ರಾದಾಯಕ ಹುಲಿ ವೇಷಧಾರಿ ಅಶೋಕ್ ರಾಜ್ ಹೃದಯಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹುಲಿಕುಣೆತದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಅಶೋಕ್ ರಾಜ್ ಕಳೆದ 10 ದಿನಗಳಿಂದ ಕೇರಳ, ಹುಬ್ಬಳ್ಳಿ, ತುಮಕೂರು ಮತ್ತು ಬೆಂಗಳೂರಿನ ಗಣೇಶನ ಹಬ್ಬದ ಮೆರವಣಿಗೆಗಳಲ್ಲಿ ತಮ್ಮ ತಂಡದೊಂದಿಗೆ ಹುಲಿವೇಷ ಧರಿಸಿ ಕುಣಿದಿದ್ದರು. ಬುಧವಾರ ಬೆಂಗಳೂರಿನಲ್ಲಿ ರಾತ್ರಿ ಹೊಟೇಲಿನಲ್ಲಿ ಊಟ ಮಾಡುತ್ತಿದ್ದಾಗ ಹೃದಯಘಾತಕ್ಕೊಳಗಾಗಿ ಕುಸಿದುಬಿದ್ದು ಅವರನ್ನು ತಕ್ಷಣ ಸ್ವರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಕೋಮಕ್ಕೆ ಜಾರಿದ ಅವರನ್ನು ದಯಾನಂದ ಸಾಗರ ಆಸ್ವತ್ರೆಯಗೆ ವರ್ಗಾಯಿಸಲಾಗಿದ್ದು, ತ್ರೀವ್ರ ನೀಗಾ ಘಟಕದಲ್ಲಿ ಚಿಕಿತ್ತೆ ಪಡೆಯುತ್ತಿದ್ದಾರೆ. 36 ವರ್ಷಗಳ ಹಿಂದೆ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಪ್ರಥಮ ಬಾರಿಗೆ ಸಾಂಪ್ರದಾಯಿಕ ಹುಲಿವೇಷ ಧರಿಸಿದ್ದ ಅವರು 28 ವರ್ಷಗಳ ಹಿಂದೆ ತಮ್ಮದೇ ಹುಲಿವೇಷ ತಂಡ ಕಟ್ಟಿದರು. ಹುಲಿವೇಷ ಹಾಕಿ ಅಕ್ಕಿ ಮುಡಿಯನ್ನು ಹಲ್ಲಿನಿಂದ ಕಚ್ಚಿ ಒಗೆಯುವಂತಹ ಸಾಹಸ ಪ್ರದರ್ಶಿಸುತ್ತಿದ್ದ ಅವರು, ತಮ್ಮಂತೆ ನೂರಾರು ಮಂದಿ ಯುವಕರಿಗೆ ಹುಲಿಕುಣಿತದ ತರಬೇತಿ ನೀಡಿದ್ದು, ಗುರುಸ್ಥಾನ ಪಡೆದಿದ್ದರು. ಮಣಿಪಾಲದ ಮಾಹೆಯಲ್ಲಿ ಇವರ ಹುಲಿವೇಷ ಕುಣಿದ ಬಗ್ಗೆ ಅಧ್ಯಯನ ದಾಖಲೀಕರಣ ಮಾಡಲಾಗಿದೆ. ಬಿ.ಬಿ.ಸಿ ವಾಹಿನಿಯು ಅವರ ಬಗ್ಗೆ ಸಾಕ್ಷ್ಯಚಿತ್ರವನ್ನೂ ತಯಾರಿಸಿದೆ. ಫೋಟೋ ಃ ಆಶೋಕ್ ರಾಜ್