ಭಾರತವು ಪ್ರಾಚೀನ ಇತಿಹಾಸ, ಪೌರತ್ವ ಹೊಂದಿರುವ ದೇಶ

KannadaprabhaNewsNetwork |  
Published : May 18, 2024, 01:34 AM IST
53 | Kannada Prabha

ಸಾರಾಂಶ

ಮನುಷ್ಯನ ದೇಹಕ್ಕೆ ಹೇಗೆ ಪ್ರತಿಯೊಂದು ಅಂಗಾಂಗಗಳಿವೆ ಅದೇ ರೀತಿಯಲ್ಲಿ ದೇವಸ್ಥಾನಕ್ಕೂ ಅದರದೇ ಆದ ವಾಸ್ತು ವಿಭಾಗಗಳಿವೆ,

ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ

ನಮ್ಮ ಭಾರತ ದೇಶವು ಪ್ರಾಚೀನ ಇತಿಹಾಸ ಮತ್ತು ಪೌರತ್ವವನ್ನು ಹೊಂದಿರುವ ದೇಶ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರಾಚೀನ ಇತಿಹಾಸ ಮತ್ತು ಪೌರತ್ವ ಅಧ್ಯಯನದ ಮುಖ್ಯಸ್ಥ ಡಾ. ಶಲ್ವಪಿಳ್ಳೆ ಅಯ್ಯಂಗಾರ್ ಹೇಳಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ವಿಭಾಗಿಯ ಪತ್ರಗಾರ ಕಚೇರಿ ಮೈಸೂರು ಹಾಗೂ ಹುಲ್ಲಹಳ್ಳಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ನಂಜನಗೂಡು ತಾಲೂಕಿನ ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ಉಪನ್ಯಾಸ ನೀಡಿದರು.

ಮನುಷ್ಯನ ದೇಹಕ್ಕೆ ಹೇಗೆ ಪ್ರತಿಯೊಂದು ಅಂಗಾಂಗಗಳಿವೆ ಅದೇ ರೀತಿಯಲ್ಲಿ ದೇವಸ್ಥಾನಕ್ಕೂ ಅದರದೇ ಆದ ವಾಸ್ತು ವಿಭಾಗಗಳಿವೆ, ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಾಲಯ ಕರ್ನಾಟಕದಲ್ಲಿ ಬಹು ದೊಡ್ಡ ದೇವಾಲಯ ಸಾಮಾನ್ಯವಾಗಿ ದೇವಾಲಯಗಳನ್ನು ಕಲ್ಲಿನಿಂದ ಹಾಗೂ ಗಾರೆ ಗಚ್ಚಿನಿಂದ ನಿರ್ಮಿಸಿದಂತಹ ದೇವಾಲಯಗಳು ಸುಮಾರು 600 ವರ್ಷಗಳಿಗೂ ಹೆಚ್ಚು ಕಾಲ ಸುಸ್ಥಿತಿಯಲ್ಲಿ ಇರುತ್ತವೆ, ಆದ್ದರಿಂದ ನಮ್ಮ ಪೂರ್ವಜರು ಕಲ್ಲು ಮತ್ತು ಗಾರೆಗಳನ್ನು ದೇವಸ್ಥಾನದಲ್ಲಿ ಹೆಚ್ಚಾಗಿ ಬಳಸಿ ದೇವಾಲಯಗಳನ್ನು ವೈಜ್ಞಾನಿಕವಾಗಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು

ಗ್ರಾಮೀಣ ಪ್ರದೇಶದಲ್ಲಿ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸುವುದು ಅತ್ಯಂತ ಅವಶ್ಯಕ, ಇಲ್ಲಿನ ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸದ ಬಗ್ಗೆ ಹೆಚ್ಚು ಗಮನ ಹರಿಸುವುದಕ್ಕೆ ಸಾಧ್ಯವಾಗುತ್ತದೆ, ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಿ ಉದ್ಯೋಗ ಪಡೆಯುವುದಕ್ಕೆ ಸಹಕಾರಿ ಆಗುತ್ತದೆ ನಮ್ಮ ಸ್ಥಳೀಯ ಸಂಸ್ಕೃತಿಯನ್ನು ತಿಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯು ಮೂಡುತ್ತದೆ, ಪೂರ್ವಜರ ಬಗ್ಗೆ ಅಭಿಮಾನ ಉಂಟಾಗುತ್ತದೆ, ಆದ್ದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ದೇವಾಲಯಗಳ ಮಹತ್ವವನ್ನು ಅರಿಯುವುದು ಅವಶ್ಯಕ ಎಂದು ಅವರು ತಿಳಿಸಿದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎಂ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಡಾ. ರವಿಕುಮಾರ್, ಡಾ. ಸಂಧ್ಯಾ ರಾಣಿ, ಡಾ. ಬಿಂದು, ಡಾ. ಶಿವರಾಜು, ಎಂ.ಎನ್. ಲೋಕೇಶ್, ಐಕ್ಯೂಎಸಿ ಸಂಚಾಲಕ ಡಾ. ಜಯಕುಮಾರ್ ಹಾಗೂ ಡಾ. ಪರಶಿವಮೂರ್ತಿ, ಡಾ. ಶಾಮಸುಂದರ್, ಡಾ. ಮಂಜುನಾಥ್, ಡಾ. ತಿಮ್ಮೇಗೌಡ, ಹೊನ್ನೇಗೌಡ, ಸಂತೋಷ್ ಇದ್ದರು. ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಪ್ರಮಾಣಪತ್ರ ವಿತರಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ