-ಗೊರಗುಂಟೆಪಾಳ್ಯದದಿಂದ ಸಂಪಿಗೆ ರಸ್ತೆಯ ಮಂತ್ರಿಸ್ಕೈರ್ಗೆ ರವಾನೆ
ನಮ್ಮ ಮೆಟ್ರೋ ಕೇವಲ ಕಚೇರಿ, ನ್ಯಾಯಾಲಯದ ಕೆಲಸಗಳಿಗೆ, ನಮ್ಮ ವೈಯಕ್ತಿಕ ಕೆಲಸಗಳಿಗೆ ಸಂಚಾರದಿಂದ ಮುಕ್ತಿಗೊಳಿಸುತ್ತಿಲ್ಲ. ಮತ್ತೊಂದು ಜೀವ ಉಳಿಸುವ ಮಾನವ ಹೃದಯವನ್ನೂ ಗೊರಗುಂಟೆ ಪಾಳ್ಯದ ಆಸ್ಪತ್ರೆಯಿಂದ ಶೇಷಾದ್ರಿಪುರಂ ಅಸ್ಪತ್ರೆಗೆ ಸಾಗಿಸಲು ನೆರವಾಗಿದೆ.
ಬುಧವಾರ ಮಧ್ಯಾಹ್ನ 2.22ರಲ್ಲಿ ವೈಜ್ಞಾನಿಕ ಸಲಕರಣೆಗಳಿಂದ ಪ್ಯಾಕ್ ಮಾಡಲಾದ ಮಾನವ ಹೃದಯವನ್ನು ಗೊರಗುಂಟೆ ಪಾಳ್ಯದ ಸಮೀಪದಲ್ಲಿಯೇ ಇದ್ದ ಸ್ಪರ್ಶ ಆಸ್ಪತ್ರೆಯಿಂದ ತಂದರು. ಕೂಡಲೆ ಆ ಬಾಕ್ಸ್ ಅನ್ನು ವೈದ್ಯರು ಹಾಗೂ ಸಿಬ್ಬಂದಿ ಎಸ್ಕಲೇಟರ್ ಮೂಲಕ ಬಹಳ ಜಾಗರೂಕತೆಯಿಂದ ಮೆಟ್ರೋ ರೈಲಿನಲ್ಲಿ ಇರಿಸಿಕೊಂಡರು. ಕೇವಲ 18 ನಿಮಿಷಗಳಲ್ಲಿ ಅಂದರೆ ಮಧ್ಯಾಹ್ನ 2.40ಕ್ಕೆ ನಗರದ ಸಂಪಿಗೆ ರಸ್ತೆಯ ಮಂತ್ರಿಸ್ಕೈರ್ ಮಟ್ರೋ ನಿಲ್ದಾಣ ತಲುಪಿತು. ಕೂಡಲೆ ಅಲ್ಲಿಯೇ ಆ್ಯಂಬುಲೆನ್ಸ್ ನಲ್ಲಿ ಸಿದ್ಧರಾಗಿದ್ದ ಸಿಬ್ಬಂದಿ ಮಾನವ ಹೃದಯವಿದ್ದ ಬಾಕ್ಸ್ ಅನ್ನು ಪಡೆದು ಸ್ವಲ್ಪ ದೂರದಲ್ಲಿದ್ದ ಶೇಷಾದ್ರಿಪುರಂ ಅಪೋಲೊ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.ಗೊರಗಟೆುಂಟೆ ಪಾಳ್ಯದಿಂದ ಶೇಷಾದ್ರಿಪುರಂ ಆಸ್ಪತ್ರೆ ಅಂದಾಜು 8 ಕಿಲೋಮೀಟರ್ ದೂರವಿದೆ. ತುಂಬಾ ಟ್ರಾಫಿಕ್ ಇದ್ದು ಇಷ್ಟು ದೂರವನ್ನು ಕೇವಲ 18 ನಿಮಿಷಗಳಲ್ಲಿ ತಲುಪುವುದು ಅಸಾಧ್ಯ ಎಂದು ಅರಿತ ಆಸ್ಪತ್ರೆ ಸಿಬ್ಬಂದಿ ಮೆಟ್ರೋ ಸಿಬ್ಬಂದಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದರು.
ಇದುವರೆಗೆ ಮೆಟ್ರೋ ಮೂಲಕ 3 ಹೃದಯ ರವಾನೆ: