- ಬಡ ಕುಟುಂಬದ ಮಹಿಳೆಯ ಮನೆಗೆ ಮ್ಯಾಟ್ ಹಾಕುವ ಕಾರ್ಯಕ್ರಮ.
ನಾರಿ ಶಕ್ತಿ ಬಳಗ ಮಾನವೀಯತೆ ಮೀರಿಸುವಂತಹ ಅದ್ಭುತ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ತಾಲೂಕು ಪಂಚಾಯಿತಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಮ್ಮ ಹೇಳಿದರು.
ಸಂಜೀವಿನಿ ಮಹಿಳಾ ಒಕ್ಕೂಟ ಮತ್ತು ನಾರಿ ಶಕ್ತಿ ಬಳಗದಿಂದ ಸಮೀಪದ ನೇರಳೆಕೆರೆ ಗ್ರಾಪಂ ಆವರಣದಲ್ಲಿ ಬಡ ಕುಟುಂಬದ 75 ವರ್ಷಕ್ಕೂ ಹೆಚ್ಚು ವಯಸ್ಸಾದ ಹೆಣ್ಣು ಮಕ್ಕಳು ಮತ್ತು ಗಂಡ ಇಲ್ಲದ ಒಂಟಿ ಮಹಿಳೆಯ ಮನೆಯ ನೆಲಕ್ಕೆ ಮ್ಯಾಟ್ ಹಾಕಿಸಿ ಕೊಟ್ಟು ನಂತರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾರಿ ಶಕ್ತಿ ಬಳಗ ಸಂಜೀವಿನಿ ಒಕ್ಕೂಟ ಮತ್ತು ಸ್ಥಳೀಯ ಗ್ರಾಪಂ ಸದಸ್ಯರ ಮೂಲಕ ಈ ಗ್ರಾಮದ ಬಡ ಮಹಿಳೆಯನ್ನು ಗುರುತಿಸಿ ಆ ಮಹಿಳೆ ಮನೆಯ ನೆಲಕ್ಕೆ ಮ್ಯಾಟ್ ಹಾಕಿಸಿಕೊಡುವ ಮೂಲಕ 75 ವರ್ಷದ ಅಜ್ಜಿಗೆ ಚಳಿಯಿಂದ ರಕ್ಷಣೆ ಮಾಡಿದೆ ರಾತ್ರಿ ಮಲಗುವುದಕ್ಕೆ ಅನುಕೂಲವಾಗುವ ವ್ಯವಸ್ಥೆ ಮೂಲಕ ಅದ್ಭುತ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಮಾತನಾಡಿ, ಈ ನಾರಿ ಶಕ್ತಿ ಬಳಗ ಇಂತಹ ವಯಸ್ಸಾದ 75 ವರ್ಷ ದಾಟಿದ ಅಜ್ಜಿ ಮನೆಯಲ್ಲಿ ತೇವಾಂಶ ಇರುವ ನೆಲದ ಮೇಲೆ ಮಲಗುತ್ತಿತ್ತು. ಇದನ್ನು ಸ್ಥಳೀಯ ಸಂಘ, ಒಕ್ಕೂಟ ಹಾಗೂ ಪಂಚಾಯತಿ ಸದಸ್ಯರ ಮೂಲಕ ತಿಳಿದು ಮನೆಗೆ ಮ್ಯಾಟ್ ಹಾಕಿಸಿ ಅಜ್ಜಿ ನಮ್ಮ ನಾರಿ ಶಕ್ತಿ ಬಳಗ ನೆರವಾಗಿದೆ ಎಂದು ತಿಳಿದುಕೊಂಡಿದ್ದೇನೆ.ಇದು ಮಾನವೀಯತೆ ಮೀರಿ ಮಾಡಿದ ಒಂದು ಉತ್ತಮ ಕೆಲಸ. ವೃದ್ಧರನ್ನು ಚೆನ್ನಾಗಿ ನೋಡಿಕೊಂಡರೆ ದೇವರ ಪೂಜೆ ಗಿಂತಲೂ ಹೆಚ್ಚು. ಹಾಗಾಗಿ ನಮ್ಮ ನಾರಿ ಶಕ್ತಿ ಬಳಗ ಈ ಗ್ರಾಮದ ಅಜ್ಜಿಗೆ ಮಾನವೀಯತೆಯಿಂದ ಸಹಕರಿಸಿರುವುದು ತುಂಬ ಸಂತೋಷವಾಗುತ್ತಿದೆ ಎಂದರು.
ಬಳಗದ ಸದಸ್ಯರಾದ ಮತ್ತು ಹಾದಿಕೆರೆ ಗ್ರಾ.ಪಂ.ಅಧ್ಯಕ್ಷೆ ರೇಖಾ ಮಾತನಾಡಿ, ಪೂಜೆ ಪುನಸ್ಕಾರ ಮಾಡಿದ್ದಕ್ಕಿಂತಲೂ ವಯಸ್ಸಾದವರಿಗೆ ನೆರವಿನ ಹಸ್ತ ಚಾಚಿರುವುದು ಬಹಳ ಸಂತೋಷ ಎಂದು ಹೇಳಿದರು.ಬೋರನಾಳು ಗ್ರಾಪಂ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಅಜ್ಜಿಗೆ ನಾವು ಗೌರವಿಸಿರುವುದು ಮತ್ತು ಸಹಕಾರ ನೀಡಿರುವುದು ನನ್ನ ಜೀವನದಲ್ಲಿ ಇದೊಂದು ಅದ್ಭುತ ಕೆಲಸ ಮತ್ತು ಬಹಳ ಖುಷಿ ಕೊಟ್ಟಂತಹ ದಿನ ಎಂದರು.
ಯೂನಿಯನ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಜನಧನ್ ಬ್ಯಾಂಕ್ ಅಕೌಂಟ್ ಪ್ರಾಮುಖ್ಯತೆ ವಿವರಿಸಿ ಪ್ರಧಾನ ಮಂತ್ರಿ ಜೀವನ ಜ್ಯೋತಿ, ಸುರಕ್ಷಾ ಭೀಮಾ,ಅಟಲ್ ಪಿಂಚಣಿ ಬಗ್ಗೆ ಅಕೌಂಟಿನಲ್ಲಿರುವ ಹಣ ಫ್ರಾಡ್ ಮಾಡುವರರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದರು.ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಮತ್ತು ಸದಸ್ಯರು ಗ್ರಾಪಂ ಸದಸ್ಯರಾದ ಶೋಭಾ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
27ಕೆಕೆಡಿಯು1.ಸಂಜೀವಿನಿ ಮಹಿಳಾ ಒಕ್ಕೂಟ ಮತ್ತು ನಾರಿ ಶಕ್ತಿ ಬಳಗದಿಂದ ತರೀಕೆರೆ ಸಮೀಪದ ನೇರಳೆಕೆರೆ ಗ್ರಾ.ಪಂ. ಆವರಣದಲ್ಲಿ ಬಡ ಕುಟುಂಬದ 75 ವರ್ಷಕ್ಕೂ ಹೆಚ್ಚು ವಯಸ್ಸಾದ ಮಹಿಳೆಯ ಮನೆ ನೆಲಕ್ಕೆ ಮ್ಯಾಟ್ ಹಾಕಿಸಿಕೊಟ್ಟ ಮಾನಮೀಯತೆ ಮೆರೆದರು.