ಭೂಮಿಯ ಏಕೈಕ ಶತ್ರು ಮಾನವ: ಕೇಶವ ಪೂಜಾರಿ

KannadaprabhaNewsNetwork |  
Published : Jul 21, 2026, 02:45 AM IST
20ಕೇಶವ | Kannada Prabha

ಸಾರಾಂಶ

ಪತ್ತೆಯಾಗಿರುವ ಗ್ರಹಗಳಲ್ಲಿ ಕೇವಲ ಭೂಮಿಯಲ್ಲಿ ಮಾತ್ರ ಜೀವಿಗಳು ನೆಲೆಸಿವೆ. ಇಲ್ಲಿ ಮನುಷ್ಯರಂತೆ ಪ್ರಾಣಿ, ಪಕ್ಷಿ, ಹಾವು, ಕೀಟ, ಮರ ಗಿಡಗಳು ಪ್ರಾಕೃತಿಕ ಸಮತೋಲನದಲ್ಲಿ ಭಾಗಿಯಾಗಿವೆ. ಅಧುನಿಕರಣದ ನೆಪದಲ್ಲಿ ಸ್ವಾರ್ಥಿ ಮನುಷ್ಯ ಮಾತ್ರ ಪರಿಸರದ ವಿರುದ್ಧ ಕೆಲಸ ಮಾಡುತಿದ್ದಾನೆ, ಪ್ರಾಣಿ ಪಕ್ಷಿಗಳಿಂದ ಈ ಭೂಮಿಗೆ ಆಪಾಯವಿಲ್ಲ ಎಂದು ಹಿರಿಯಡ್ಕದ ಅರಣ್ಯಧಿಕಾರಿ ಕೇಶವ ಪೂಜಾರಿ ಹೇಳಿದರು.

ಉಡುಪಿ: ಪತ್ತೆಯಾಗಿರುವ ಗ್ರಹಗಳಲ್ಲಿ ಕೇವಲ ಭೂಮಿಯಲ್ಲಿ ಮಾತ್ರ ಜೀವಿಗಳು ನೆಲೆಸಿವೆ. ಇಲ್ಲಿ ಮನುಷ್ಯರಂತೆ ಪ್ರಾಣಿ, ಪಕ್ಷಿ, ಹಾವು, ಕೀಟ, ಮರ ಗಿಡಗಳು ಪ್ರಾಕೃತಿಕ ಸಮತೋಲನದಲ್ಲಿ ಭಾಗಿಯಾಗಿವೆ. ಅಧುನಿಕರಣದ ನೆಪದಲ್ಲಿ ಸ್ವಾರ್ಥಿ ಮನುಷ್ಯ ಮಾತ್ರ ಪರಿಸರದ ವಿರುದ್ಧ ಕೆಲಸ ಮಾಡುತಿದ್ದಾನೆ, ಪ್ರಾಣಿ ಪಕ್ಷಿಗಳಿಂದ ಈ ಭೂಮಿಗೆ ಆಪಾಯವಿಲ್ಲ. ವಿದ್ಯೆ ಬುದ್ಧಿ ಇರುವ ಮಾನವನೇ ಭೂಮಿಗೆ ಶತ್ರುವಾಗಿ ಪರಿಣಮಿಸಿದ್ದಾನೆ. ಇದು ವಿಪರ್ಯಾಸ. ಮಕ್ಕಳು ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಮರ ಗಿಡಗಳನ್ನು ನೆಟ್ಟು ಬೆಳೆಸಿ, ಪ್ರಾಣಿ ಪಕ್ಷಿಗಳನ್ನು ಜೀವಿಸಲು ಬಿಡಿ ಎಂದು ಹಿರಿಯಡ್ಕದ ಅರಣ್ಯಧಿಕಾರಿ ಕೇಶವ ಪೂಜಾರಿ ಹೇಳಿದರು.

ಉಡುಪಿಯ ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರೊಫೆಸರ್ ಆರ್ಚಿಬಾಲ್ಡ್ ಪುರ್ಟಾಡೊ, ಪರಿಸರ ರಕ್ಷಣೆ ಪ್ರತಿ ನಾಗರಿಕನ ಕರ್ತವ್ಯವಾಗಿದೆ. ಆದುದರಿಂದ ಪ್ರಧಾನ ಮಂತ್ರಿ ‘ಏಕ್ ಪೇಡ್ ಮಾ ಕೇ ನಾಮ್’ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದಾರೆ. ನಿಮ್ಮ ತಾಯಿಯ ಹಾಗೆ ಮರ ಗಿಡಗಳನ್ನೂ ನೆಟ್ಟು ಪ್ರೀತಿಸಿ ಎಂದು ಕರೆ ನೀಡಿದರು. ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಮಾತನಾಡಿ, ಮಂತ್ರದಿಂದ ಫಲ ಉದುರುವುದಿಲ್ಲ. ಹಾಗೆನೇ ಕೇವಲ ಪ್ರಾರ್ಥನೆ ಮಾಡಿದರೆ ಮಳೆ ಬರುವುದಿಲ್ಲ, ಬದಲಿಗೆ ಮರ ಗಿಡಗಳ ಪೋಷಣೆಯಲ್ಲಿ ನೆಲ ಜಲ ವಾಯುವನ್ನು ಶುದ್ಧವಾಗಿ ಪಡೆಯಬಹುದು ಎಂದು ಹೇಳಿದರು. ವಿದ್ಯಾರ್ಥಿಗಳಾದ ಮನ್ವೀತ್ ಹಾಗೂ ಮಾನ್ವಿ ಶುದ್ಧ ಪರಿಸರದ ಮಹತ್ವದ ಬಗ್ಗೆ ವಿವರಣೆ ನೀಡಿದರು. ವಿದ್ಯಾರ್ಥಿಗಳಿಂದ ಪರಿಸರ ಗೀತೆ, ನಾಟಕ, ನೃತ್ಯಗಳು ಪ್ರದರ್ಶನಗೊಂಡವು. ಆಡೆಲ್ ಸ್ವಾಗತಿಸಿ, ಸ್ನೇಹಲ್ ವಂದಿಸಿದರು. ವಿದ್ಯಾರ್ಥಿಗಳಾದ ಆದ್ವಿತ್ ಮತ್ತು ಆಭೀಶಾ ನಿರೂಪಿಸಿದರು. ಸಂಸ್ಥೆಯ ಆವರಣದಲ್ಲಿ ಜೌಷಧೀಯ ಗಿಡಗಳನ್ನು ನೆಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಸಿತ ಭಾರತ ಅಭಿಯಾನ: 5 ಕೋಟಿ ಯುವಕರ ನೋಂದಣಿ ಗುರಿ: ಲೋಕೇಶ್ ಕುಮಾರ್
ನಾಮಧಾರಿ ಸಮುದಾಯ ಭವನ ಪೂರ್ಣಗೊಳಿಸಲು ಸಹಕಾರ ನೀಡಿ: ಕೆ.ಜಿ. ನಾಯ್ಕ ಹಣಜೀಬೈಲ್