ಮನುಷ್ಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು

KannadaprabhaNewsNetwork |  
Published : Oct 26, 2026, 03:15 AM IST
ರಾಣಿಬೆನ್ನೂರು ನಗರದಲ್ಲಿ ವಿಶ್ವ ಸಂಧಿವಾತ ದಿನದ ಅಂಗವಾಗಿ ಮಂಡಿಚಿಪ್ಪು ಶಸ್ತçಚಿಕಿತ್ಸೆಗೆ ಒಳಗಾದವರಿಂದ ವಾಕಥಾನ್ ಜರುಗಿತು.  | Kannada Prabha

ಸಾರಾಂಶ

ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ರಾಣಿಬೆನ್ನೂರು: ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ನಗರದ ಪೋಸ್ಟ್ ಸರ್ಕಲ್ ಬಳಿ ಲಕ್ಷ್ಮಿ ಸರ್ಜಿಕಲ್ ಆಸ್ಪತ್ರೆ ವತಿಯಿಂದ ಭಾನುವಾರ ವಿಶ್ವ ಸಂಧಿವಾತ ದಿನಾಚರಣೆ ಅಂಗವಾಗಿ ಪೋಸ್ಟ್ ಸರ್ಕಲ್ ಬಳಿಯಿಂದ ಬಸ್‌ನಿಲ್ದಾಣ ರಸ್ತೆಯ ಅನಂತ ಹೋಟೆಲ್‌ವರೆಗೆ ಏರ್ಪಡಿಸಿದ್ದ ಮಂಡಿಚಿಪ್ಪು ಶಸ್ತ್ರಚಿಕಿತ್ಸೆಗೆ ಒಳಗಾದವರ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. ಸಾಕಷ್ಟು ಜನರಲ್ಲಿ ವಯಸ್ಸಾದಂತೆ ಸಂಧಿವಾತ ತುಂಬಾ ಬಾಧಿಸುತ್ತದೆ. ಅದಕ್ಕಾಗಿ ಸೂಕ್ತ ಜೀವನ ಶೈಲಿ ಮತ್ತು ಚಿಕಿತ್ಸೆಯಿಂದ ಇದನ್ನು ನಿಯಂತ್ರಣದಲ್ಲಿಡಬಹುದು ಎಂದರು.

ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಗೆ ಒಳಗಾದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು ನೂರಕ್ಕೂ ಹೆಚ್ಚು ಜನರು ಆಗಮಿಸಿ ವಾಕ್‌ಥಾನದಲ್ಲಿ ಪಾಲ್ಗೊಂಡಿದ್ದರು. ಡಾ. ಸಂಜೀವ ಮುದ್ರಿ, ಡಾ. ಬಸವರಾಜ ಕೆಂಗೊಂಡ, ಡಾ. ಸುಮುಖ ಮುದ್ರಿ, ಡಾ. ಗೌರಿ ಮುದ್ರಿ, ಡಾ. ವಿ.ಎಂ.ಜೋಷಿ, ಕೆ.ಎನ್. ಪಾಟೀಲ, ಸಂಕಪ್ಪ ಮಾರನಾಳ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಗಳು ಆತ್ಮವಿಶ್ವಾಸ ಮೂಡಿಸುತ್ತವೆ: ಆರ್.ವಿ. ಚಿನ್ನೀಕಟ್ಟಿ
ಅವನತಿಯತ್ತ ಗ್ರಾಮೀಣ ಕುಡಿಯುವ ನೀರಿನ ಕೆರೆಗಳು