ಯಾಂತ್ರಿಕ ಜೀವನದಿಂದ ಹೊರಬರಲು ಹಾಸ್ಯ ಅಗತ್ಯ: ಡಾ. ಗುರುದೇವಿ

KannadaprabhaNewsNetwork |  
Published : Apr 13, 2025, 02:01 AM IST
11ಡಿಡಬ್ಲೂಡಿ4ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಆಯೋಜಿಸಿದ್ದ ಒಂದು ದಿನದ ಮಹಿಳಾ ಜಾಗೃತಿ ಸಮಾವೇಶ ಸಮಾರೋಪದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಮಹಿಳೆಯರು ತಮ್ಮ ಯಾಂತ್ರಿಕೃತ ಬದುಕಿನ ಏಕತಾನತೆಯಿಂದ ಹೊರಬರಲು ಹಾಸ್ಯ ಅವಶ್ಯವಾಗಿದೆ ಎಂದು ಬೆಳಗಾವಿಯ ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.

ಧಾರವಾಡ: ಮಹಿಳೆಯರು ತಮ್ಮ ಯಾಂತ್ರಿಕೃತ ಬದುಕಿನ ಏಕತಾನತೆಯಿಂದ ಹೊರಬರಲು ಹಾಸ್ಯ ಅವಶ್ಯವಾಗಿದೆ ಎಂದು ಬೆಳಗಾವಿಯ ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಆಯೋಜಿಸಿದ್ದ ಒಂದು ದಿನದ ಮಹಿಳಾ ಜಾಗೃತಿ ಸಮಾವೇಶ ಸಮಾರೋಪದಲ್ಲಿ ಮಹಿಳೆ ಮತ್ತು ಹಾಸ್ಯ ವಿಷಯದ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಇಂದಿನ ಜಾಗೃತ ಮಹಿಳೆ ಧೈರ್ಯ, ಸ್ವಾಭಿಮಾನ, ಸ್ವಾವಲಂಬನೆ ಮುಂತಾದ ಗುಣಗಳನ್ನು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.

ಸಮಾರೋಪ ಸಮಾರಂಭಕ್ಕಿಂತ ಮೊದಲು ಕಾಲೇಜು ವಿದ್ಯಾರ್ಥಿಗಳಿಗೆ ‘ನಾ ಮೆಚ್ಚಿದ ಮಹಿಳಾ ಸಾಧಕಿ’ಎನ್ನುವ ವಿಷಯದ ಮೇಲೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 24 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಜ್ಯೋತಿ ಭಾವಿಕಟ್ಟಿ ನಡೆಸಿಕೊಟ್ಟರು. ನಂತರ ನಡೆಸಲಾದ ವೇಷಭೂಷಣ ಸ್ಪರ್ಧೆಯಲ್ಲಿ ಸುಮಾರು 20 ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರೇಖಾ ಅಂತಕ್ಕನವರ ನಡೆಸಿಕೊಟ್ಟರು. ಡಾ. ಅರುಣಾ ಹಳ್ಳಿಕೇರಿ, ಮಂಗಳಾ ಚಿಗಟೇರಿ ನಿರ್ಣಾಯಕರಾಗಿದ್ದರು.

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು. ಗಂಗವ್ವ ಕೋಟಿಗೌಡರ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ಮಂಟಪದ ಸಂಚಾಲಕಿ ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಾರದಾ ಕೌದಿ ನಿರೂಪಿಸಿದರು. ಶಂಕರ ಕುಂಬಿ, ಡಾ. ವಿ. ಶಾರದಾ, ಸವಿತಾ ಕುಸುಗಲ್ಲ, ಸುಜಾತ ಹಡಗಲಿ, ವಿಜಯಾ ಲಿಂಬಣ್ಣದೇವರಮಠ, ಭಾಗ್ಯ ನಡಕಟ್ಟಿ, ಅನ್ನಪೂರ್ಣಮೋಟಗಿ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''