ಒತ್ತಡ ಮುಕ್ತ ಬದುಕಿಗೆ ಹಾಸ್ಯ ದಿವ್ಯೌಷಧ: ಮಿಮಿಕ್ರಿ ಗೋಪಿ

KannadaprabhaNewsNetwork |  
Published : Jan 06, 2025, 01:01 AM IST
5ಕೆಎಂಎನ್‌ಡಿ-2ಮಂಡ್ಯದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ನಡೆದ ಅಸೋಸಿಯೇಷನ್‌ ಆಫ್‌ ಅಲಯನ್ಸ್‌ ಸಂಸ್ಥೆ ಆಯೋಜಿಸಿದ್ದ ಪ್ರಾಂತೀಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷೆ ನೀನಾಪಟೇಲ್‌, ನಿವೃತ್ತ ವೈದ್ಯಾಧಿಕಾರಿ ಡಾ.ಸತೀಶ್‌ಚಂದ್ರ ಅವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಹಾಸ್ಯ ಕಲಾವಿದರಿಗೆ ವೇದಿಕೆ ಸಿಕ್ಕಿದೆ, ನಮ್ಮ ಸುತ್ತ ಮುತ್ತ ನಡೆಯುವ ಬದುಕಿನ ಘಟನೆಗಳಿಗೆ ಹಾಸ್ಯ ಲೇಪನ ಕೊಟ್ಟು ಹೇಳುವುದೇ ನಮ್ಮ ಉದ್ದೇಶವಾಗಿದೆ. ಬೇರೆ ಇನ್ನೇನೂ ಹೇಳಲು ಸಾಧ್ಯವಿಲ್ಲ, ನಮ್ಮ ಹಾಸ್ಯಗಳಿಗೆ ಜನರು ನಕ್ಕು ನಲಿದರೆ ಅಷ್ಟೇ ಸಾಕು ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಒತ್ತಡದ ಬದುಕಿನಲ್ಲಿರುವ ಮನುಷ್ಯರಿಗೆ ಹಾಸ್ಯ ದಿವ್ಯೌಷಧವಾಗಿದೆ ಎಂದು ಚಲನಚಿತ್ರ ಹಾಸ್ಯನಟ ಮಿಮಿಕ್ರಿ ಗೋಪಿ ಹೇಳಿದರು.

ನಗರದಲ್ಲಿರುವ ಕರ್ನಾಟಕ ಸಂಘದ ಕೆವಿಎಸ್‌ಎಸ್ ಭವನದಲ್ಲಿ ಅಸೋಷಿಯೇಷನ್ ಆಪ್‌ ಅಲಯನ್ಸ್ ಸಂಸ್ಥೆ ಇಂಟರ್ ನ್ಯಾಷನಲ್ ಜಿಲ್ಲೆ ಮಂಡ್ಯ ಆಯೋಜಿಸಿದ್ದ ಬದುಕಿಗೆ ಹಾಸ್ಯ ದಿವ್ಯೌಷಧ ಎಂದ ಘೋಷವಾಕ್ಯದೊಂದಿಗೆ ಪ್ರಾಂತೀಯ ಸಮ್ಮೇಳನ-೧ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇವತ್ತಿನ ಜನರಿಗೆ ಆರೋಗ್ಯಕರ ನಗು ಬೇಕಿದೆ, ಏಕೆಂದರೆ ನಮ್ಮದೇ ಜಂಜಾಟದಲ್ಲಿ ಮುಳುಗಿದ್ದೇವೆ, ಅದಕ್ಕೋಸ್ಕರ ಒಂದಷ್ಟು ಸಮಯದಲ್ಲಿ ನಗು, ನಡಿಗೆ, ವಿಶ್ರಾಂತಿಯ ಅಗತ್ಯವಿದೆ. ಉತ್ತಮ ಆರೋಗ್ಯಕ್ಕಾಗಿ ಆಯುಷ್ಯ ವೃದ್ಧಿಗಾಗಿ ಹಾಸ್ಯ-ಲಾಸ್ಯ ಬೇಕಾಗಿದೆ ಎಂದು ನುಡಿದರು.

ಹಾಸ್ಯ ಕಲಾವಿದರಿಗೆ ವೇದಿಕೆ ಸಿಕ್ಕಿದೆ, ನಮ್ಮ ಸುತ್ತ ಮುತ್ತ ನಡೆಯುವ ಬದುಕಿನ ಘಟನೆಗಳಿಗೆ ಹಾಸ್ಯ ಲೇಪನ ಕೊಟ್ಟು ಹೇಳುವುದೇ ನಮ್ಮ ಉದ್ದೇಶವಾಗಿದೆ. ಬೇರೆ ಇನ್ನೇನೂ ಹೇಳಲು ಸಾಧ್ಯವಿಲ್ಲ, ನಮ್ಮ ಹಾಸ್ಯಗಳಿಗೆ ಜನರು ನಕ್ಕು ನಲಿದರೆ ಅಷ್ಟೇ ಸಾಕು ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ ಎಂದರು.

ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ, ಜಿಲ್ಲೆಯಲ್ಲಿ ಅಲಯನ್ಸ್ ಸಂಸ್ಥೆ ಮೂಲಕ ೨ಪ್ರಾಂತೀಯ ಸಮ್ಮೇಳನಗಳು ಯಶಸ್ಸಿಯಾಗಿ ನಡೆದಿವೆ, ೧ನೇ ಪ್ರಾಂತ್ಯದಲ್ಲಿ ೧೨ ಅಲಯನ್ಸ್ ಸಂಸ್ಥೆಗಳು ಒಗ್ಗೂಡಿ ಪ್ರಾಂತೀಯ ಸಮ್ಮೇಳನ ಅಧ್ಯಕ್ಷೆ ಕೆ.ಎನ್.ನೀನಾಪಟೇಲ್ ನೇತೃತ್ವದಲ್ಲಿ ಸಮ್ಮೇಳವನ್ನು ಮಾಡಿ, ಜನಸೇವಾ ಕಾರ್ಯಗಳಿಗೆ ಮಹತ್ವ ನೀಡುತ್ತಿವೆ ಎಂದರು.

ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಕಳೆದ ೧೦ತಿಂಗಳಿಂದ ಅಲಯನ್ಸ್ ಸಂಸ್ಥೆಗಳು ಜನಸೇವಾ ಚಟುವಟಿಕೆ, ಪರಿಸರ, ಆರೋಗ್ಯ, ಅಗತ್ಯಯುಳ್ಳವರಿಗೆ ಆರ್ಥಿಕ ನೆರವು, ಪರಿಕರಗಳನ್ನು ನೀಡುವುದ ಮೂಲಕ ಸೇವಾಕಾರ್ಯ ಸಮರ್ಪಿಸುತ್ತಿವೆ ಎಂದರು.

ಪ್ರಾಂತೀಯ ಸಮ್ಮೇಳನ ಅಧ್ಯಕ್ಷೆ ಕೆ.ಎನ್.ನೀನಾಪಟೇಲ್ ನೇತೃತ್ವದಲ್ಲಿ ವಿವಿಧ ಸೇವಾಕಾರ್ಯಕ್ರಮಗಳು ನಡೆದವು. ಹಾಸ್ಯ, ಗೀತಗಾಯನ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು.

ಅಧ್ಯಕ್ಷತೆಯನ್ನು ಪ್ರಾಂತೀಯ ಸಮ್ಮೇಳನ ಅಧ್ಯಕ್ಷೆ ಕೆ.ಎನ್.ನೀನಾಪಟೇಲ್ ವಹಿಸಿದ್ದರು. ವೇದಿಕೆಯಲ್ಲಿ ಜೆಡಿಎಸ್ ಯುವ ಮುಖಂಡ ಸುರೇಶ್, ನಿವೃತ್ತ ವೈದ್ಯಾಧಿಕಾರಿ ಡಾ.ಸತೀಶ್‌ಚಂದ್ರ, ಸಮ್ಮೇಳನ ಅತಿಥೇಯ ಸಮಿತಿ ಅಧ್ಯಕ್ಷ ಕೆ.ಆರ್.ಶಶಿಧರ್‌ ಈಚಗೆರೆ, ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ಎಚ್.ಪಿ.ದಯಾನಂದ, ವಲಯಾಧ್ಯಕ್ಷರಾದ ಎಂ.ಲೋಕೇಶ್, ಪ್ರಮೀಳಕುಮಾರಿ, ಶಿಲ್ಪ, ಕೌಶಲ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ರಕ್ಷಿತ್‌ರಾಜ್, ಪ್ರತಿಭಾಂಜಲಿ ಪ್ರೊ.ಡೇವಿಡ್, ಮಂಜುನಾಥ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು