ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕಾಟ್ರಕೊಲ್ಲಿಯ ಅಕ್ಕಳತಂಡ ಎ. ಶಫೀಕ್ ಪ್ರಥಮ, ಹಳ್ಳಿಗಟ್ಟಿನ ಚಿಮ್ಮಿಚ್ಚಿರ ಜಲೀಲ್ ದ್ವಿತೀಯ ಹಾಗೂ ಅಂಬಟ್ಟಿಯ ಕರ್ತೊರೆರ ಹ್ಯಾರಿಸ್ ತೃತೀಯ ಸ್ಥಾನ ಪಡೆದರು. 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕಾಟ್ರಕೊಲ್ಲಿಯ ಆಲೀರ ನವಾಜ್ ಪ್ರಥಮ, ಕಂಡಂಗಾಲದ ಮಂದಮಾಡ ಶಮ್ನಾಜ್ ದ್ವಿತೀಯ ಹಾಗೂ ಅಂಬಟ್ಟಿಯ ಕರ್ತೊರೆರ ಅಫ್ವಾನ್ ತೃತೀಯ ಬಹುಮಾನ ಪಡೆದರು.
ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧೆಯನ್ನು ಗುಂಡು ಹೊಡೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಮಂದಮಾಡ ಕುಟುಂಬದ ಹಿರಿಯರಾದ ಹಸನ್, ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವುದಕ್ಕಿಂತ ಭಾಗವಹಿಸುವುದು ಅತಿ ಮುಖ್ಯ. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಕಂಡಂಗಾಲ ಜುಮಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಂದಮಾಡ ಎ. ಮುನೀರ್ ಮೊದಲಾದವರು ಭಾಗವಹಿಸಿದ್ದರು.ಮಂದಮಾಡ ರಫೀಕ್ (ಮುನ್ನಾ), ಕರ್ತೊರೆರ ಎಸ್. ಸರ್ಫುದ್ದೀನ್ ಮೊದಲಾದವರು ಸ್ಪರ್ಧೆಯ ಉಸ್ತುವಾರಿ ವಹಿಸಿಕೊಂಡಿದ್ದರು.