ಕುಣಿಗಲ್‌ ತಾಲೂಕಿನಲ್ಲಿ ನೂರಾರು ಕೋಟಿ ನರೇಗಾ ಅವ್ಯವಹಾರ

KannadaprabhaNewsNetwork |  
Published : Jul 01, 2025, 12:47 AM IST
ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ  ಕರೆದಿದ್ದ ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ಡಿ ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ಭ್ರಷ್ಟಾಚಾರ ನರೇಗಾ ಸೇರಿದಂತೆ ಎಲ್ಲ ಇತರ ಯೋಜನೆಗಳಲ್ಲಿ ನಡೆದಿದೆ ಎಂದು ಬಹುತೇಕ ದೂರುಗಳನ್ನು ನೀಡಲಾಗಿದೆ.

ಕನ್ನಡ ಪ್ರಭ ವಾರ್ತೆ ಕುಣಿಗಲ್

ಕುಣಿಗಲ್ ತಾಲೂಕಿನಲ್ಲಿ ಬಾಗೇನಹಳ್ಳಿ ಪಿಡಿಒ ಅವರನ್ನು ಅಮಾನತು ಮಾಡಿದ್ದು ಸರಿ. ಅದೇ ರೀತಿ ಡಿ ಹೊಸಹಳ್ಳಿಯಲ್ಲಿ ಹಲವಾರು ಕೋಟಿ ಅವ್ಯವಹಾರ ನಡೆದಿದೆ. ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಆತನ ರಕ್ಷಣೆ ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರ ಪಿಡಿಒ ಇಂದ ಹಿಡಿದು ಕಮಿಷನರ್‌ವರೆಗೂ ಎಲ್ಲರೂ ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬಿಎನ್ ಜಗದೀಶ್ ಆರೋಪಿಸಿದ್ದಾರೆ.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ಭ್ರಷ್ಟಾಚಾರ ನರೇಗಾ ಸೇರಿದಂತೆ ಎಲ್ಲ ಇತರ ಯೋಜನೆಗಳಲ್ಲಿ ನಡೆದಿದೆ ಎಂದು ಬಹುತೇಕ ದೂರುಗಳನ್ನು ನೀಡಲಾಗಿದೆ. ಆದರೂ ಕೂಡ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ.ಡಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿದ್ದು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾಬೀತಾಗಿದೆ. ದೊಡ್ಡಕಲ್ಲಯ್ಯ ಜಮೀನಿನಲ್ಲಿ ಕಟ್ಟೆ ಅಭಿವೃದ್ಧಿ, ಮಾದಪ್ಪನಹಳ್ಳಿ ಕಟ್ಟೆ ಅಭಿವೃದ್ಧಿ, ಡಿ ಹೊಸಹಳ್ಳಿ ಗ್ರಾಮದ ಚಿಕ್ಕಮಾವತ್ತೂರು ಕಟ್ಟೆ ಅಭಿವೃದ್ಧಿ, ಗೋಕಟ್ಟೆ ನಿರ್ಮಾಣ ಹೀಗೆ ಹಲವಾರು ಕಾಮಗಾರಿಗಳಲ್ಲಿ ಒಂದೇ ಫೋಟೊವನ್ನು ಬಳಸಿ ಅಕ್ರಮ ಮಾಡಿದ್ದಾರೆ. ಕೂಲಿಗಾರರ ಹೆಸರು ಪ್ರತ್ಯೇಕ ಫೋಟೋದಲ್ಲಿ ಇರುವವರೇ ಪ್ರತ್ಯೇಕ ಇಂತಹ ಹಲವಾರು ಭ್ರಷ್ಟಾಚಾರಗಳನ್ನು ಮಾಡಿದ್ದು, ಏಕಕಾಲದಲ್ಲಿ ಒಬ್ಬ ಕೂಲಿ ಕಾರ್ಮಿಕ ನಾಲ್ಕು ಕಾಮಗಾರಿಗಳಲ್ಲೂ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇಂತಹ ಹಲವಾರು ಭ್ರಷ್ಟಾಚಾರಗಳು ಪಂಚಾಯಿತಿಯಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಸಾಕ್ಷಿಯಾಗಿದೆ ಎಂದು ಅಲ್ಲಿನ ಲೆಕ್ಕಪರಿಶೋಧನ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಯಾವುದೇ ತಪ್ಪು ನಡೆದಿಲ್ಲ ಎಂದು ಒಂಬಡ್ಸ್‌ಮನ್ ಅಧಿಕಾರಿಗಳು ವರದಿ ನೀಡಿ ತಮ್ಮ ಪಾಲಿನ ಕಮಿಷನ್ ತೆಗೆದುಕೊಂಡು ಹೋಗಿದ್ದಾರೆ ಎಂದರು.

ಪಿಡಿಒ ಜಿಪಂ ಸಿಇಒ ಸೇರಿದಂತೆ ಎಲ್ಲಾ ಅಧಿಕಾರಿಗಳು ಇದರಲ್ಲಿ ಪಾಲುದಾರರಾಗಿದ್ದಾರೆ. ತಮ್ಮದೇ ಆದ ಕಮಿಷನ್ ಫಿಕ್ಸ್ ಮಾಡಿಕೊಂಡು ಕಾಮಗಾರಿಗಳ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಹಲವಾರು ನಕಲಿ ಬಿಲ್‌ಗಳನ್ನು ತಯಾರು ಮಾಡಿ ಪಿಡಿಒಗಳಿಂದ ಬಿಲ್ ಮಾಡುತ್ತಿದ್ದಾರೆ. ಇದಕ್ಕೆ ಹಲವಾರು ಅಧಿಕಾರಿಗಳ ಮತ್ತು ಶಾಸಕರ ಆಶೀರ್ವಾದ ಬೆಂಬಲ ಇದೆ ಎಂದರು.

ಕುಣಿಗಲ್ ತಾಲೂಕಿನ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಒಟ್ಟಾರೆ ನೂರಾರು ಕೋಟಿ ಅಂದಾಜು ವೆಚ್ಚ ಎಂದು ಉದ್ದೇಶಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಕ್ಷಣ ದೂರು ನೀಡಬೇಕೆಂದು ತೀರ್ಮಾನಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಮಾಜಿ ಜೆಡಿಎಸ್ ಅಧ್ಯಕ್ಷ ಕೆ ಎಲ್ ಹರೀಶ್, ಪುರಸಭಾ ಸದಸ್ಯ ಶ್ರೀನಿವಾಸ್, ಮಾಜಿ ಪುರಸಭಾ ಸದಸ್ಯ ಈ ಮಂಜು ಡಿ ಹೊಸಳ್ಳಿ ಜೆಡಿಎಸ್ ಮುಖಂಡ ಜಯರಾಮಯ್ಯ ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಇದ್ದರು.ಪೋಟೋ ಇದೆ : 30 ಕೆಜಿಎಲ್ 1 : ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ