ನೂರು ಮೀಟರ್‌ ರಸ್ತೆಯಲ್ಲಿ ನೂರಾರು ಗುಂಡಿಗಳು

KannadaprabhaNewsNetwork |  
Published : Sep 30, 2025, 01:00 AM IST
ಚಿಕ್ಕಕೊಡಗಲಿ ಗವಿಯ ಕಡೆ ಹೋಗುವ ರಸ್ತೆಯಲ್ಲಿನ ಗುಂಡಿಗಳು. | Kannada Prabha

ಸಾರಾಂಶ

ನೇಕಾರರೇ ಹೆಚ್ಚಾಗಿ ವಾಸಿಸುವ ಈ ಸಂಚರಿಸಲು ಪರದಾಡುವಂತಾಗಿದೆ. ಅಧಿಕಾರಿಗಳು, ಜನಪ್ರತಿಧಿಗಳು ಈ ಕಡೆಗೆ ಗಮನ ಹರಿಸಿ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು

ಕನ್ನಡಪ್ರಭ ವಾರ್ತೆ ಇಳಕಲ್ಲ

ಮಳೆಗಾಲ ಬಂಂತೆಂದರೆ ರಸ್ತೆ ತುಂಬೆಲ್ಲ ಮಳೆನೀರು ಹಾಗೂ ನೀರು ತುಂಬಿಕೊಂಡ ಗುಂಡಿಗಳಿಂದ ವಾಹನ ಸವಾರರು, ಸಾರ್ವಜನಿಕರಿಗೆ ಸಂಚರಿಸುವುದೇ ದುಸ್ತರವಾಗಿದೆ.

ಇಳಕಲ್ಲ ನಗರದ ವಿಜಯ ಮಹಾಂತೇಶ್ವರ ಕರ್ತೃ ಗದ್ದುಗೆಯಿಂದ ಚಿಕ್ಕಕೊಡಗಲಿ ಗವಿಯ ಕಡೆ ಹೋಗುವ ರಸ್ತೆ ಸ್ಥಿತಿ ಕಂಡರೆ ಇದು ರಸ್ತೆಯೋ ಅಥವಾ ಕಾಲುದಾರಿಯೋ ಎಂಬ ಅನುಮಾನ ಮೂಡುತ್ತದೆ. ಕೇವಲ ನೂರು ಮೀಟರ್‌ ನಷ್ಟು ರಸ್ತೆಯಲ್ಲಿ ನೂರಾರು ಗುಂಡಿಗಳು ಕಣ್ಣಿಗೆ ರಾಚುತ್ತವೆ. ಇದು ಈ ಭಾಗಕ್ಕೆ ಹೋಗುವ ಪ್ರಮುಖ ರಸ್ತೆಯಾಗಿದೆ. ಈ ಭಾಗದಲ್ಲಿ ಸಿಬಿಎಸ್‌ಇ ಶಾಲೆ ಇದ್ದು, ನೂರಕ್ಕೂ ಅಧಿಕ ಮಕ್ಕಳು ಶಾಲೆಗೆ ಬರುತ್ತಾರೆ. ನಗರದ ಹೊರ ವಲಯದಲ್ಲಿರುವ ಕರ್ತೃ ಗದ್ದುಗೆಯ ಹತ್ತಿರದ ನೇಕಾರ ಮನೆಗಳಿರುವ ಕಾಲೋನಿಗೆ ಹೋಗಲು ನಿತ್ಯ ಯಾತನೆ ಅನುಭವಿಸಬೇಕಿದೆ.

ಶಾಲೆಯ ಮಕ್ಕಳನ್ನು ಶಾಲೆಗೆ ಕಳಿಸಿ ಕರೆದುಕೊಂಡು ಬರುವ ಪಾಲಕರು ಪ್ರತಿನಿಧ್ಯ ರಸ್ತೆಯ ದುಃಸ್ಥಿತಿಗೆ ಅಧಿಕಾರಿಗಳು ಹಾಗೂ ಜನಪ್ರನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ೨೦೦ಕ್ಕೂ ಹೆಚ್ಚು ನೇಕಾರ ಕುಟುಂಬಗಳು ವಾಸಿಸುತ್ತಿದ್ದು, ಪರ ಊರಿನಿಂದ ಬರುವ ನೆಂಟರು ರಸ್ತೆ ಕಂಡು ಊರಿಗೆ ಬರಲು ಹಿಂದೇಟು ಹಾಕುತ್ತಾರೆ. ಈ ಭಾಗದ ರೈತರು ಹೊಲಗಳಿಗೆ ಹೋಗ ಸರ್ಕಸ್ ಮಾಡಬೇಕಿದೆ. ಇಳಕಲ್ಲ ನಗರಸಭೆ ಹೊಂದಿದ್ದರೂ ಮತ್ತು ರಸ್ತೆ ಅಭಿವೃದ್ಧಿಗಾಗಿ ಸರ್ಕಾರ ಅನೇಕ ರೀತಿಯ ಸಹಾಯ ಧನ ಕೊಡುತ್ತಿದ್ದರು ಮತ್ತು ನಗರದ ಜನರ ಹೆಚ್ಚು ತೆರಿಗೆ ಪಡೆಯುವ ನಗರಸಭೆ ಹಾಗೂ ಸದಸ್ಯರು ಇತ್ತ ಕಡೆ ಗಮನ ಹರಿಸಿ ರಸ್ತೆಗುಂಡಿಗಳನ್ನು ಮುಚ್ಚಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಮಹಾಂತೇಶ್ವರ ಕರ್ತೃ ಗದ್ದುಗೆಯಿಂದ ಚಿಕ್ಕೊಕೊಡಗಲಿ ಗವಿಯ ಕಡೆಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದೆ. ಇಲ್ಲಿನ ಪ್ರತಿಷ್ಠಿತ ಸಿಬಿಎಸ್‌ಸಿ ಶಾಲೆಗೆ ಈ ಮಾರ್ಗದಲ್ಲೇ ಹೋಗಬೇಕು. ಶಾಲಾ ಮಕ್ಕಳು ಹಾಗೂ ಪಾಲಕರು ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ. ನೇಕಾರರೇ ಹೆಚ್ಚಾಗಿ ವಾಸಿಸುವ ಈ ಸಂಚರಿಸಲು ಪರದಾಡುವಂತಾಗಿದೆ. ಅಧಿಕಾರಿಗಳು, ಜನಪ್ರತಿಧಿಗಳು ಈ ಕಡೆಗೆ ಗಮನ ಹರಿಸಿ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಶರಣಪ್ಪ ಹೊಸ್ನೂರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ