ಕನ್ನಡಪ್ರಭ ವಾರ್ತೆ ಉಡುಪಿ
ಬಳಿಕ ಮಾತನಾಡಿದ ಅವರು, ಇಂದು ಲಕ್ಷಾಂತರ ಜನ ಒಂದು ಹೊತ್ತು ಊಟಕ್ಕಿಲ್ಲದವರು ನಮ್ಮ ದೇಶದಲ್ಲಿ ಇದ್ದಾರೆ. ಇಂತಹವರ ಹಸಿವು ನೀಗಿಸುವುದು ಬಹಳ ದೊಡ್ಡ ಪುಣ್ಯದ ಕೆಲಸ. ಅಂತಹ ಸಮಾಜಮುಖಿ ಕಾರ್ಯವನ್ನು ಮಲಬಾರ್ ಗೋಲ್ಡ್ ಮಾಡುತ್ತಿರುವುದು ಮಾದರಿ ಎನಿಸಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ನಮ್ಮ ನಾಡ ಒಕ್ಕೂಟದ ಕರ್ನಾಟಕ ಪರ್ಯಾವರಣ ಸಂರಕ್ಷಣಾ ಸಮಿತಿ ಅಧ್ಯಕ್ಷ ಶೇಕ್ ವಾಹೀದ್ ದಾವೂದ್ ಮಾತನಾಡಿದರು.ನಮ್ಮ ನಾಡ ಒಕ್ಕೂಟ ರಾಜ್ಯಾಧ್ಯಕ್ಷ ಸಲೀಂ, ವಕೀಲ ರಫೀಕ್ ಖಾನ್, ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ಸ್ಟೋರ್ ಸೇಲ್ಸ್ ಮೆನೇಜರ್ ಮುಸ್ತಫಾ ಎ.ಕೆ., ಸ್ಟೋರ್ ಮ್ಯಾನೇಜರ್ ಪುರಂದರ ತಿಂಗಳಾಯ, ಜಿಆರ್‌ಎಂ ರಾಘವೇಂದ್ರ ನಾಯಕ್, ಮಾರುಕಟ್ಟೆ ವ್ಯವಸ್ಥಾಪಕ ತಂಝಿಮ್ ಶಿರ್ವ ಉಪಸ್ಥಿತರಿದ್ದರು. ಸಿಬ್ಬಂದಿ ಯದು ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಘ್ನೇಶ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.