ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನುಗಳನ್ನು ವಶಪಡಸಿಕೊಂಡು, ಅವರಿಗೆ ವ್ಯವಸಾಯಕ್ಕೆ ಭೂಮಿ ಇಲ್ಲದಂತೆ ಮಾಡುವುದು, ರೈತರು ಈ ಬಗ್ಗೆ ಜಾಗೃತರಾಗಬೇಕಿದೆ ಎಂದರು. ಆರ್‌ಬಿಐ ನೀತಿ ನಿಯಮ ಅನುಸರಿಸದ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿರುವ ಸುಗ್ರಿವಾಜ್ಞೆ ಮೀರುವ ಯಾವುದೇ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ತೆಗೆದುಕೊಂಡಿದ್ದರೆ ಮರುಪಾವತಿ ಮಾಡದೇ ಕಾನೂನು ಪ್ರಕಾರ ಇರುವ ಫೈನಾನ್ಸ್‌ಗಳಿಗೆ ಸಾಲ ಮರುಪಾವತಿಸಿ ಎಂದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ ಆರ್‌ಬಿಬಿ ನೀತಿ ನಿಯಮಗಳನ್ನು ಅನುಸರಿಸಿ ಸಾಲ ನೀಡಿದ್ದರೆ ನಮ್ಮದೇನು ಅಭ್ಯಂತರವಿಲ್ಲ, ಸಾಲ ವಸೂಲಿ ಹೆಸರಿನಲ್ಲಿ ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಕಿರುಕುಳ ನೀಡಿದರೆ ಗ್ರಾಮಗಳಿಗೆ ತೆರಳಿ ನೋಟಿಸ್ ನೀಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಶೇ.೧೬ಕ್ಕಿಂತ ಹೆಚ್ಚು ಬಡ್ಡಿ ಪಡೆಯುವ ಹಾಗಿಲ್ಲ. ಆದರೆ, ಶೇ.೨೦ಕ್ಕಿಂತ ಹೆಚ್ಚು ಬಡ್ಡಿ ವಿಧಿಸಿ ವಸೂಲಿ ಮಾಡಲಾಗುತ್ತಿದೆ. ಆರ್‌ಬಿಐ ಮಾರ್ಗಸೂಚಿಗಳನ್ವಯ ಕಾನೂನಿನಡಿ ಫೈನಾನ್ಸ್ ವ್ಯವಹಾರ ಮಾಡಬೇಕು. ಆದರೆ, ಅದನ್ನು ಉಲ್ಲಂಘಿಸಿ ಶೇ.೨೪, ಶೇ.೩೩ ಬಡ್ಡಿ ವಿಧಿಸಿ ವಸೂಲಿ ಮಾಡುತ್ತಿರುವುದು ಖಂಡನೀಯ ಎಂದರು. ಆರ್‌ಬಿಐ ಮಾರ್ಗಸೂಚಿಗಳನ್ನು ನೀಡದಿದ್ದರೆ ಪ್ರಕರಣ ದಾಖಲಿಸಬೇಕಾಗುತ್ತದೆ. ಅಲ್ಲದೇ ಕನ್ನಡದಲ್ಲಿ ವ್ಯವಹಾರ ಮಾಡದೇ ಇಂಗ್ಲೀಷ್‌ನಲ್ಲಿ ಎಲ್ಲ ಪತ್ರ ವ್ಯವಹಾರ ಮಾಡಲಾಗುತ್ತಿದ್ದು ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕನ್ನಡದಲ್ಲಿ ಪತ್ರವ್ಯವಹಾರ ಮಾಡಬೇಕು ಎಂದು ಎಚ್ಚರಿಸಿದರು. ಮುಖಂಡರಾದ, ಅಂಬಳೆ ಶಿವಕುಮಾರ್, ಬೆಟ್ಟದಪುರ ಬಸವಣ್ಣ, ಪುಟ್ಟಮಾದೇಗೌಡ, ಚಂಗಡಿ ಕರಿಯಪ್ಪ, ವೀರಭದ್ರಸ್ವಾಮಿ, ಸರಗೂರು ಚಂದ್ರು, ಪಾಪಣ್ಣ ಇತರರು ಭಾಗವಹಿಸಿದ್ದರು.