ಹಾಸಿಗೆ ಹಿಡಿದ ಪತ್ನಿಯ ಕೊಂದು ಆತ್ಮ*ತ್ಯೆ ಮಾಡಿಕೊಂಡ ಪತಿ

KannadaprabhaNewsNetwork |  
Published : Dec 05, 2025, 04:30 AM IST
Wife

ಸಾರಾಂಶ

ಅನಾರೋಗ್ಯ ಪೀಡಿತ ತಮ್ಮ ಪತ್ನಿಯನ್ನು ಕೊಂದು ಬಳಿಕ ಬಿಎಂಟಿಸಿ ನಿವೃತ್ತ ಚಾಲಕರೊಬ್ಬರು ಆತ್ಮ*ತ್ಯೆ ಶರಣಾಗಿರುವ ದಾರುಣ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು :  ಅನಾರೋಗ್ಯ ಪೀಡಿತ ತಮ್ಮ ಪತ್ನಿಯನ್ನು ಕೊಂದು ಬಳಿಕ ಬಿಎಂಟಿಸಿ ನಿವೃತ್ತ ಚಾಲಕರೊಬ್ಬರು ಆತ್ಮ*ತ್ಯೆ ಶರಣಾಗಿರುವ ದಾರುಣ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಕೃತ್ಯ

ಚಿಕ್ಕೆಗೌಡನಪಾಳ್ಯದ ನಿವಾಸಿ ಬೇಬಿ (65) ಕೊಲೆಯಾದ ದುರ್ದೈವಿ. ಈ ಹತ್ಯೆ ಬಳಿಕ ಕುತ್ತಿಗೆ ಹಗ್ಗ ಜೀರಿಕೊಂಡು ಮನೆಯಲ್ಲಿ ಮೃತರ ಪತಿ ವೆಂಕಟೇಶನ್‌ (65) ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಯಾರು ಇಲ್ಲದ ವೇಳೆ ವೆಂಕಟೇಶನ್ ಈ ಕೃತ್ಯ ಎಸಗಿದ್ದಾರೆ. ಕೆಲ ಹೊತ್ತಿನ ಬಳಿಕ ಮೃತರ ಕುಟುಂಬದವರು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದ ಪತ್ನಿ

ಬಿಎಂಟಿಸಿಯಲ್ಲಿ ಚಾಲಕರಾಗಿ ನಿವೃತ್ತರಾದ ಬಳಿಕ ವೆಂಕಟೇಶನ್ ಅ‍ವರು, ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಚಿಕ್ಕೆಗೌಡನಪಾಳ್ಯದಲ್ಲಿ ನೆಲೆಸಿದ್ದರು. ಐದು ವರ್ಷಗಳ ಹಿಂದೆ ಅವರ ಪತ್ನಿ ಬೇಬಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದರು. ಈ ಆರೋಗ್ಯ ಸಮಸ್ಯೆಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪತ್ನಿ ಸುಧಾರಣೆ ಕಾಣಲಿಲ್ಲ. ಕೈ ಸ್ವಾಧೀನ ಕಳೆದುಕೊಂಡು ಗಾಲಿ ಕುರ್ಚಿಯಲ್ಲಿ ಓಡಾಡುತ್ತಿದ್ದರು.  

ಮಾತು ಸಹ ಆಡುತ್ತಿರಲಿಲ್ಲ. ಬಹಳ ಅಕ್ಕರೆಯಿಂದ ಪತ್ನಿಯನ್ನು ಕ್ಷೇಮ ನೋಡಿಕೊಂಡಿದ್ದ ವೆಂಕಟೇಶನ್ ಅವರಿಗೆ ಪತ್ನಿಯ ಪರಿಸ್ಥಿತಿ ನೋವುಂಟು ಮಾಡಿದೆ. ಈ ಯಾತನೆಯಲ್ಲೇ ನಿನ್ನನ್ನು ಈ ಸ್ಥಿತಿಯಲ್ಲಿ ನನ್ನಿಂದ ನೋಡಲಾಗುತ್ತಿಲ್ಲ. ನಿನ್ನನ್ನು ಕೊಂದು ತಾನು ಸಾಯುವುದಾಗಿ ವೆಂಕಟೇಶ್‌ ಹೇಳುತ್ತಿದ್ದರು. ಆಗ ಅವರಿಗೆ ಮಕ್ಕಳು  ಸಮಾಧನಪಡಿಸಿದ್ದರು. ಈ ನೋವಿನಲ್ಲೇ ಅವರು ಮಂಗಳವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಪತ್ನಿಯನ್ನು ಕೊಂದು ಆ ಬಳಿಕ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ
ರಾಜ್ಯ ರಾಜಕೀಯ ವಿಚಾರ : ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ