ಕನ್ನಡಪ್ರಭ ವಾರ್ತೆ ಕೊಲ್ಹಾರ
ದಾರಿ ಮಧ್ಯ ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾಗಿದ್ದರಿಂದ ಭಾಗ್ಯಶ್ರೀ ಗಂಡ ತೆಲಗಿ ಗ್ರಾಪಂ ಸದಸ್ಯ ನಿಂಗರಾಜ ಭಜಂತ್ರಿ ಪೆಟ್ರೋಲ್ ತರಲೆಂದು ಆಲಮಟ್ಟಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಆಗ ಭಾಗ್ಯಶ್ರೀ ತನ್ನ ಮಕ್ಕಳನ್ನು ನಾಲೆಗೆ ಎಸೆದು ಬಳಿಕ ತಾನು ಹಾರಿದ್ದಾಳೆ. ಗಂಡ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಬನದ ಹುಣ್ಣಿಮೆಯ ಪ್ರಯುಕ್ತ ಬೂದಿಹಾಳ ಯಲ್ಲಮ್ಮನ ದರ್ಶನ ಪಡೆದು ತವರೂರಾದ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಕಸಬಾ ಗ್ರಾಮಕ್ಕೆ ಬೈಕ್‌ನಲ್ಲಿ ಹೊರಟಿದ್ದರು.ಈ ವೇಳೆ ಮಾರ್ಗಮಧ್ಯೆ ಬೇನಾಳ-ಆರ್‌ಎಸ್ ಗ್ರಾಮದ ಪಾರ್ವತಿ ಕಟ್ಟಾ ಸೇತುವೆ ಬಳಿ ಪೆಟ್ರೋಲ್ ಖಾಲಿಯಾಗಿದ್ದು, ಆತ ಪೆಟ್ರೋಲ್ ತರಲು ತೆರಳಿದ್ದ. ಈ ಘಟನೆಯನ್ನು ಕಣ್ಣಾರೆ ಕಂಡಿರುವ ಪ್ರತ್ಯಕ್ಷದರ್ಶಿಗಳು ಕೂಡಲೇ ಸ್ಥಳಕ್ಕೆ ದೌಡಾಯಿಸಿ ತಾಯಿ ಭಾಗ್ಯಶ್ರೀಯನ್ನು ರಕ್ಷಿಸಿದ್ದಾರೆ. ಪೆಟ್ರೋಲ್ ತರಲೆಂದು ಆಲಮಟ್ಟಿಗೆ ಹೋಗಿದ್ದ ಪತಿ ನಿಂಗರಾಜ್ ಮರಳಿ ಬರುವಷ್ಟರಲ್ಲಿ ಪತ್ನಿ, ಮಕ್ಕಳು ಕಾಲುವೆಗೆ ಹಾರಿದ ಸುದ್ದಿ ತಿಳಿದು ಹೌಹಾರಿದ್ದಾನೆ. ಏತನ್ಮಧ್ಯೆ ಸೋಮವಾರ ಸಂಜೆವರೆಗೂ ಮೃತ ಮಕ್ಕಳ ಶವ ತೆಗೆಯಲು ಪ್ರಯತ್ನ ಮುಂದುವರೆಸಿದ್ದರು.ಘಟನಾ ಸ್ಥಳಕ್ಕೆ ವಿಜಯಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಅಶೋಕ ಚವ್ಹಾಣ, ಪಿಎಸ್‌ಐ ಶಿವಾನಂದ ಪಾಟೀಲ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
------------ಬಾಕ್ಸ್
ಗ್ರಾಮದಲ್ಲಿ ಸ್ಮಶಾನ ಮೌನಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರಾದ ತೆಲಗಿ ಗ್ರಾಮದಲ್ಲಿ ನಾಲ್ವರು ಮಕ್ಕಳು ಏಕ ಕಾಲದಲ್ಲಿಯೇ ಜಲಸಮಾಧಿಯಾದ ಸುದ್ದಿ ತಿಳಿದು ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಶಾಂತಿ-ಸೌಹಾರ್ಧತೆಗೆ ಹೆಸರಾಗಿರುವ ಈ ತೆಲಗಿ ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ಸಮಯದಲ್ಲಿ ಇಡೀ ಗ್ರಾಮಸ್ಥರನ್ನೇ ಬೆಚ್ಚಿ ಬೀಳಿಸಿದೆ. ಮಕ್ಕಳು ಮೃತಪಟ್ಟಿದ್ದಕ್ಕೆ ಇಡೀ ಗ್ರಾಮವೇ ಮಮ್ಮಲ ಮರುಗುತ್ತಿದೆ.