ನಂಬಿ ಬಂದ ರೋಗಿಗಳ ಆರೈಕೆ ಮಾಡುವ ವೈದ್ಯರ ಸೇವೆ ಅನನ್ಯ

KannadaprabhaNewsNetwork |  
Published : Jan 14, 2025, 01:03 AM IST
ಕಮತಗಿ ಪಟ್ಟಣದಲ್ಲಿನ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಹುನಗುಂದ ತಾಲೂಕು ಘಟಕ ಹಾಗೂ ಕಮತಗಿಯ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಪಿ. ರಕ್ಕಸಗಿ ಅವರಿಗೆ ಶುಭಕೋರುವ ಹಾಗೂ ಗೌರವ ಸನ್ಮಾನ ಸಮಾರಂಭವನ್ನು ಶಾಸಕ ಎಚ್.ವೈ.ಮೇಟಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಆಸ್ಪತ್ರೆಗಳಿಗೆ ನಂಬಿ ಬಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕವಾಗಿದ್ದು, ಓರ್ವ ಆದರ್ಶ ವೈದ್ಯ ತನ್ನ ಕುಟುಂಬದ ನೋವು ನಲಿವುಗಳನ್ನು ಬದಿಗಿರಿಸಿ ರೋಗಿಗಳ ಪ್ರಾಣವನ್ನು ಉಳಿಸಿಕೊಳ್ಳಲು ಶ್ರಮಪಡುವ ವೈದ್ಯರ ಸೇವೆ ಅನನ್ಯವಾಗಿದೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಮತಗಿ

ಆಸ್ಪತ್ರೆಗಳಿಗೆ ನಂಬಿ ಬಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕವಾಗಿದ್ದು, ಓರ್ವ ಆದರ್ಶ ವೈದ್ಯ ತನ್ನ ಕುಟುಂಬದ ನೋವು ನಲಿವುಗಳನ್ನು ಬದಿಗಿರಿಸಿ ರೋಗಿಗಳ ಪ್ರಾಣವನ್ನು ಉಳಿಸಿಕೊಳ್ಳಲು ಶ್ರಮಪಡುವ ವೈದ್ಯರ ಸೇವೆ ಅನನ್ಯವಾಗಿದೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.

ಪಟ್ಟಣದಲ್ಲಿನ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಹುನಗುಂದ ತಾಲೂಕು ಘಟಕ ಹಾಗೂ ಕಮತಗಿಯ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಪಿ ರಕ್ಕಸಗಿ ಅವರಿಗೆ ಶುಭಕೋರುವ ಹಾಗೂ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,

ಸರ್ಕಾರಿ ಆಯುಷ್ ಆಸ್ಪತ್ರೆಯ ವೈದ್ಯರಾಗಿ ಸುಧೀರ್ಘ 28 ವರ್ಷಗಳ ಸೇವೆ ಸಲ್ಲಿಸಿರುವ ಡಾ.ಚಂದ್ರಕಾಂತ ಪಿ.ರಕ್ಕಸಗಿ ಅವರ ಸೇವೆ ಅನನ್ಯವಾದುದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವೈದ್ಯರಾಗಿ ಸಾರ್ಥಕ ಸೇವೆ ಸಲ್ಲಿಸಿರುವ ಇವರು ತಾವು ನಿವೃತ್ತಿಯಾದರು ಕೂಡಾ ತಮ್ಮ ಸೇವೆಯನ್ನು ಇನ್ನೂ ಮುಂದುವರೆಸಿ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅವರ ಸೇವೆ ನಿರಂರವಾಗಿ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಬಾಗಲಕೋಟೆ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರಗೇಶ ಐ.ಕಡ್ಲಿಮಟ್ಟಿ ಮಾತನಾಡಿ, ವೈದ್ಯರು ನಿಜವಾಗಿಯೂ ಕಣ್ಣಿಗೆ ಕಾಣುವ ದೇವರೆ. ನಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಸುಸ್ಥಿತಿಗೆ ತರುವಲ್ಲಿ ವೈದ್ಯರ ಪಾತ್ರ ಗಣನೀಯವಾದುದು. ವೈದ್ಯರ ನಿಷ್ಠೆ,ಶ್ರಮ ಹಾಗೂ ನಿಸ್ವಾರ್ಥ ಭಾವದ ಸೇವೆ ರೋಗಿಗೆ ಮರು ಜನ್ಮವನ್ನು ನೀಡಿದಂತೆ ಎಂದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಕಮತಗಿ ಹೊಳೆ ಹುಚ್ಚೇಶ್ವರ ಮಹಾಸ್ವಾಮೀಜಿ, ಹಿರೇಮಠದ ಶಿವಕುಮಾರ ಮಹಾಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ರಮೇಶ ಎಸ್.ಜಮಖಂಡಿ, ಪಟ್ಟಣ ಪಂಚಾಯತಿ ಸದಸ್ಯ ದೇವಿಪ್ರಸಾದ ನಿಂಬಲಗುಂದಿ, ಡಾ.ಸುಮಾ ಸಿ.ರಕ್ಕಸಗಿ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಹುನಗುಂದ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಹೆಜ್ಜೆ ಸಂಸ್ಥೆಯ ಅಧ್ಯಕ್ಷ ವಿ.ಸಿ.ಮುರಾಳ, ಸದಸ್ಯರಾದ ನಾಗಪ್ಪ ಅಚನೂರ, ಜಂಪಣ್ಣ ಶಿರಗುಂಪಿ, ಕಾಶಿನಾಥ ತಂಬುರಿ, ಶಂಕರ ವನಕಿ, ರವಿ ಬಳ್ಳಾ ಇದ್ದರು.

ಸರ್ಕಾರಿ ಆಯುಷ್ ಆಸ್ಪತ್ರೆಯ ವೈದ್ಯರಾಗಿ ಸುಧೀರ್ಘ 28 ವರ್ಷಗಳ ಸೇವೆ ಸಲ್ಲಿಸಿರುವ ಡಾ.ಚಂದ್ರಕಾಂತ ಪಿ.ರಕ್ಕಸಗಿ ಅವರ ಸೇವೆ ಅನನ್ಯವಾದುದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವೈದ್ಯರಾಗಿ ಸಾರ್ಥಕ ಸೇವೆ ಸಲ್ಲಿಸಿರುವ ಇವರು ತಾವು ನಿವೃತ್ತಿಯಾದರು ಕೂಡಾ ತಮ್ಮ ಸೇವೆಯನ್ನು ಇನ್ನೂ ಮುಂದುವರೆಸಿ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅವರ ಸೇವೆ ನಿರಂರವಾಗಿ ಸಿಗುವಂತಾಗಲಿ.

-ಎಚ್.ವೈ.ಮೇಟಿ,

ಶಾಸಕರು.

ಉತ್ತಮ ಆರೋಗ್ಯಕ್ಕಿಂತ ಉನ್ನತ ಆಸ್ತಿ ಮತ್ತೊಂದಿಲ್ಲ ಎಂಬ ಅರಿವು ಮೂಡಿಸುವಲ್ಲಿ ವೈದ್ಯರ ಪಾತ್ರ ಅತ್ಯಮೂಲ್ಯವಾಗಿದ್ದು, ಡಾ.ಚಂದ್ರಕಾಂತ ಪಿ.ರಕ್ಕಸಗಿ ಅವರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ನಿಸ್ವಾರ್ಥ ಭಾವನೆಯಿಂದ ಸೇವೆಸಲ್ಲಿಸುವುದರ ಜತೆಗೆ ಸಾಮಾಜಿಕ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ತಮ್ಮ ವೈದ್ಯಕೀಯ ಸೇವೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು.

-ಮುರಗೇಶ ಐ.ಕಡ್ಲಿಮಟ್ಟಿ,

ಬಾಗಲಕೋಟೆ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ