ಕನ್ನಡಪ್ರಭ ವಾರ್ತೆ, ಮಂಡ್ಯ
ಅವರ ಹೊಂದಾಣಿಕೆ ಏನಿದೆಯೋ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಇತಿಹಾಸವನ್ನು ನೋಡಿದರೆ ಅಕ್ಕ- ಪಕ್ಕದಲ್ಲಿರೋರೇ ಕೈಕೊಟ್ಟಿರೋದು. ಅದೇ ರೀತಿ ಬಂದ್‌ಗೆ ಬೆಂಬಲವಿಲ್ಲ ಎನ್ನುವವರು ನನಗೆ ಕೈಕೊಟ್ಟಿದ್ದಾರೆಂದು ಹೇಳೋಲ್ಲ. ಅವರಿಗವರೇ ಕೈಕೊಟ್ಟಿಕೊಂಡಿದ್ದಾರೆ. ನಾವು ಕರೆ ನೀಡಿರುವ ಬಂದ್‌ಗೆ ಒಂದೂವರೆ ಕೋಟಿ ಜನ ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ನಮ್ಮ ಕರ್ನಾಟಕ ಬಂದ್‌ಗೆ ವಿದ್ಯಾರ್ಥಿಗಳು, ಯುವಕರೇ ಶಕ್ತಿ. ಅವರೆಲ್ಲರೂ ಒಗ್ಗಟ್ಟಿನಿಂದ ಬಂದ್‌ಗೆ ಬೆಂಬಲ ಕೊಡಬೇಕು. ವಿದ್ಯಾರ್ಥಿಗಳು ಬಂದ್‌ನಲ್ಲಿ ಭಾಗವಹಿಸಲು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ರಜೆ ಕೊಡಬೇಕು. ಈ ಬಂದ್ ಕೇವಲ ಕಾವೇರಿ ನೀರನ್ನು ಮಾತ್ರ ಒಳಗೊಂಡಿಲ್ಲ. ಮಹದಾಯಿ, ಕಾವೇರಿ, ಕಳಸಾ- ಬಂಡೂರಿ, ಮೇಕೆದಾಟು ಅಣೆಕಟ್ಟು ಸೇರಿದಂತೆ ನಾಡಿನ ನೆಲ- ಜಲ, ಭಾಷೆ- ಗಡಿ ಸೇರಿದಂತೆ ಎಲ್ಲಾ ವಿಷಯಗಳೆಲ್ಲವನ್ನೂ ಒಳಗೊಂಡು ಕರ್ನಾಟಕ ಬಂದ್ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.ಸಮಗ್ರ ಕರ್ನಾಟಕದ ಪರಿಸ್ಥಿತಿ ಕಣ್ಣೀರಿನ ಕಥೆಯಾಗಿದೆ. ಇದನ್ನು ಕಂಡೂ ಬೆಂಬಲ ಕೊಡೋಲ್ಲ ಎಂದರೆ ಬೇಡ ಬಿಡಿ. ಈ ರಾಜ್ಯ ಏನು ಅವರ ಕೈಯ್ಯಲ್ಲಿದೆಯೇ. ಜನರು ಅವರು ಹೇಳಿದಂತೆ ಕೇಳುವರೇ. ಜನರು ನಮ್ಮ ಜೊತೆಗಿದ್ದರೆ ಅಷ್ಟೇ ಸಾಕು ಎಂದರು.