ಬಾನು ಮುಷ್ತಾಕ್ ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ವಿರೋಧಿಸುತ್ತಿಲ್ಲ: ಪ್ರತಾಪ್ ಸಿಂಹ

KannadaprabhaNewsNetwork |  
Published : Aug 29, 2025, 01:00 AM IST
32 | Kannada Prabha

ಸಾರಾಂಶ

ಬಾನು ಮುಷ್ತಾಕ್ ಅವರಿಗೆ ನೇರವಾಗಿ ಪ್ರಶ್ನೆ ಕೇಳ್ತೀನಿ, ಸಾಹಿತ್ಯ ಭಾಷಣದಲ್ಲಿ ನಿಮ್ಮ ಭಾಷಣ ಏನಿತ್ತು? ಮುಸ್ಲಿಮರು ಕನ್ನಡ ಕಲಿಯಲು ಭುವನೇಶ್ವರಿ ತಾಯಿ ಮೂರ್ತಿ ಅಡ್ಡಿಯಾಯಿತು ಎಂದು ಬಾನು ಮುಷ್ತಾಕ್ ಹೇಳಿದ್ದಾರೆ. ಭುವನೇಶ್ವರಿಗೆ ಅರಿಶಿನ ಕುಂಕುಮ ಇಟ್ಟಿದ್ದರಿಂದ ಮುಸ್ಲಿಮರು ಕನ್ನಡ ಕಲಿಯಲು ಆಗಿಲ್ಲ ಎಂದು ಮುಷ್ತಾಕ್ ಹೇಳಿದ್ದು ಸತ್ಯ ತಾನೇ?.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬಾನು ಮುಷ್ತಾಕ್ ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ವಿರೋಧಿಸುತ್ತಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಮಾಡಿ ಎಂದು ಮುಸ್ಲಿಮರು ಕೇಳಿರಲಿಲ್ಲ. ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಗಾಗಿ ಟಿಪ್ಪು ಜಯಂತಿ ಮಾಡಿದರು. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಿರಿ ಎಂದು ಯಾವ ಮುಸ್ಲಿಂ ಕೇಳಿರಲಿಲ್ಲ. ಆದರೂ ಸಿದ್ದರಾಮಯ್ಯ ಮಾಡಿದರು ಎಂದರು.

ಬಾನು ಮುಷ್ತಾಕ್ ಅವರಿಗೆ ನೇರವಾಗಿ ಪ್ರಶ್ನೆ ಕೇಳ್ತೀನಿ, ಸಾಹಿತ್ಯ ಭಾಷಣದಲ್ಲಿ ನಿಮ್ಮ ಭಾಷಣ ಏನಿತ್ತು? ಮುಸ್ಲಿಮರು ಕನ್ನಡ ಕಲಿಯಲು ಭುವನೇಶ್ವರಿ ತಾಯಿ ಮೂರ್ತಿ ಅಡ್ಡಿಯಾಯಿತು ಎಂದು ಬಾನು ಮುಷ್ತಾಕ್ ಹೇಳಿದ್ದಾರೆ. ಭುವನೇಶ್ವರಿಗೆ ಅರಿಶಿನ ಕುಂಕುಮ ಇಟ್ಟಿದ್ದರಿಂದ ಮುಸ್ಲಿಮರು ಕನ್ನಡ ಕಲಿಯಲು ಆಗಿಲ್ಲ ಎಂದು ಮುಷ್ತಾಕ್ ಹೇಳಿದ್ದು ಸತ್ಯ ತಾನೇ? ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಬಾನು ಮುಷ್ತಾಕ್ ನಾಡದೇವಿ ರೂಪದಲ್ಲಿನ ಚಾಮುಂಡಿಯನ್ನು ಒಪ್ಪುತ್ತಾರಾ ಎಂದು ಅವರು ಪ್ರಶ್ನಿಸಿದರು.

ಅರಿಶಿನ, ಕುಂಕುಮದ ಬಗ್ಗೆ ಯಾಕೆ ಬಾನು ಮುಷ್ತಾಕ್ ಗೆ ತಕಾರರು, ಕಿರಿಕಿರಿ ಇದೆ. ಹಿಂದೂಗಳ ಮನೆಯಲ್ಲಿ ಯಾರೇ ಸುಮಂಗಲಿ ಹೋದರು ಕುಂಕುಮ ಕೊಡುತ್ತಾರೆ. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದವಾಗಿ ಕೊಡುತ್ತಾರೆ. ಇಂತಹ ಕುಂಕುಮವೇ ಬಾನು ಮುಷ್ತಾಕ್ ಗೆ ಕಿರಿಕಿರಿ ಉಂಟು ಮಾಡಿದೆ. ಅರಿಶಿನ, ಕುಂಕುಮದ ಬಗ್ಗೆ ಬಾನು ಮುಷ್ತಾಕ್ ಗೆ ದ್ವೇಷದ ಭಾವನೆ ಇದೆ ಎಂದು ಅವರು ದೂರಿದರು.

ನೀವು ನಂಬಿರುವ ನಿಮ್ಮ‌ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳುವುದಿಲ್ಲ. ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತಾರೆ?

ತಮಿಳುನಾಡಿನಲ್ಲಿ ಮುಸ್ಲಿಮರಿಗೆ ಮಾತೃ ಭಾಷೆ ತಮಿಳು. ಕರ್ನಾಟಕದಲ್ಲಿ ಯಾಕೆ ಮುಸ್ಲಿಮರಿಗೆ ಮಾತೃ ಭಾಷೆ ಕನ್ನಡ ಆಗಲ್ಲ? ತಲೆ ಮಾಸಿದ ಕಾಂಗ್ರೆಸ್ ನಾಯಕರು ನನಗೂ ಪ್ರಶ್ನೆ ಮಾಡಿದ್ದಾರೆ. ಇಸ್ಲಾಂ, ಕಿಶ್ಚಿಯನ್ ಅಕ್ರಮಣಕಾರಿ ಆಗಿ ಭಾರತಕ್ಕೆ ಬಂದವರು. ನಮ್ಮ‌ ಆಚಾರ, ವಿಚಾರ, ಸಂಸ್ಕೃತಿ ಒಡೆದು ಹಾಕಲು ಯತ್ನಿಸಿದ್ದು, ಘಜ್ನಿ, ಮೊಘಲರು. ಇದೇ ರೀತಿ ನಮ್ಮ ನಂಬಿಕೆಯನ್ನು ಬಾನು ಮುಷ್ತಾಕ್ ಒಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಜನರೇ ಹೇಳಲಿ:

ಬಾನು ಮುಷ್ತಾಕ್ ಆಯ್ಕೆ ಸ್ವಾಗತಿಸಿದ ಸಂಸದ ಯದುವೀರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಏನು ಮಾತಾಡ್ತಾರೋ ಅದೇ ನಮ್ಮ ಮಾತು, ಅದೇ ನಮ್ಮ ನಿಲುವು.

ನಮ್ಮ ಪಕ್ಷದ ನಿಲುವನ್ನೇ ನಾನು ಮಾತಾಡಿದ್ದೇನೆ. ಮೈಸೂರಿಗರಿಗೆ ಒಂದು ಪ್ರಶ್ನೆ ಕೇಳ್ತೀನಿ, ಭುವನೇಶ್ವರಿಯ ಬಗ್ಗೆ ಅವಮಾನಕಾರಿಯಾಗಿ ಮಾತ‌ನಾಡಿದ ಬಾನು ಮುಷ್ತಾಕ್ ದಸರಾ ಉದ್ಘಾಟಿಸಬೇಕಾ? ಎಂಬುದನ್ನು ಜನರೆ ಹೇಳಲಿ ಎಂದರು.ಡಿಕೆಶಿ ಹೇಳಿಕೆಗೆ ಪ್ರತಾಪ್ ತಿರುಗೇಟು

ಚಾಮುಂಡಿಬೆಟ್ಟ ಹಿಂದೂಗಳದ್ದಲ್ಲ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಶಿವನ ಕಪಾಲಿ ಬೆಟ್ಟವನ್ನೇ ಏಸು ಬೆಟ್ಟ ಮಾಡಲು ಹೊರಟ ಡಿ.ಕೆ. ಶಿವಕುಮಾರ್ ಅವರಿಂದ ನಮಗೆ ಧರ್ಮದ ಪಾಠ ಬೇಡ. ಅನ್ಯ ಧರ್ಮದವರನ್ನು ಬರೀ ಓಲೈಕೆಗಾಗಿ ಬ್ರದರ್ಸ್ ಎಂದು ಕರೆಯುವ ಡಿ.ಕೆ. ಶಿವಕುಮಾರ್ ನಮಗೆ ಧರ್ಮದ ಬಗ್ಗೆ ತಿಳುವಳಿಕೆ ಹೇಳುವುದು ಬೇಡ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ತಂತ್ರ ಕಾಂಗ್ರೆಸ್ ಮೂರ್ಖರಿಗೆ ಅರ್ಥವಾಗುತ್ತಿಲ್ಲ. ಮುಸ್ಲಿಮರನ್ನು ತಮ್ಮ ಬೆನ್ನ ಹಿಂದೆ ಇಟ್ಟುಕೊಳ್ಳಲು ಸಿದ್ದರಾಮಯ್ಯ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆದಿದ್ದಾರೆ. ನಾಳೆ ಸಿಎಂ ಕುರ್ಚಿಗೆ ಕಂಟಕ ಬಂದಾಗ ಮುಸ್ಲಿಂ ಶಕ್ತಿ ತಮ್ಮ ಹಿಂದೆ ನಿಲ್ಲಿಸಿಕೊಳ್ಳಲು ಸಿದ್ದರಾಮಯ್ಯ ಹೆಣೆದಿರುವ ತಂತ್ರ ಇದು. ಕಾಂಗ್ರೆಸ್ ಅನ್ನು ಬ್ಲಾಕ್ ಮೇಲ್ ಮಾಡಲು ಸಿದ್ದರಾಮಯ್ಯ ಮಾಡಿರುವ ಪ್ಲಾನ್ ಕಾಂಗ್ರೆಸ್ ನವರಿಗೆ ಅರ್ಥವಾಗುತ್ತಿಲ್ಲ ಎಂದರು.

ಆರ್ ಎಸ್ಎಸ್ ಗೀತೆ ಹಾಡಿದ್ದಕ್ಕೆ ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮಸ್ತೆ ಸದಾ ವತ್ಸಲೆ ಅರ್ಥ ಮಾತೃ ಭೂಮಿಗೆ ವಂದಿಸು ಅಂತಾ. ಈ ಗೀತೆ ಹಾಡಿದ್ದಕ್ಕೆ ಡಿ.ಕೆ. ಶಿವಕುಮಾರ್ ಗೆ ಕ್ಷಮೆ ಕೇಳುವ ಸ್ಥಿತಿ ಬಂದಿದೆ ಎಂದರೆ ಕಾಂಗ್ರೆಸ್ ಗೆ ಮಾತೃಭೂಮಿ ಮೇಲೆ ಎಷ್ಟು ಗೌರವವಿದೆ ನೋಡಿ ಎಂದು ಹರಿಹಾಯ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!