ನಾನು ರೋಟರಿ ಕ್ಲಬ್ ಸದಸ್ಯ ಎಂದು ಹೇಳಲು ಹೆಮ್ಮೆ: ಶಾಸಕ ಶ್ರೀನಿವಾಸ್‌

KannadaprabhaNewsNetwork | Published : Oct 9, 2023 12:46 AM

ಸಾರಾಂಶ

ನಾನು ರೋಟರಿ ಕ್ಲಬ್ ಸದಸ್ಯ ಎಂದು ಹೇಳಲು ಹೆಮ್ಮೆ: ಶಾಸಕ ಶ್ರೀನಿವಾಸ್‌ರೋಟರಿ ಜಿಲ್ಲಾಮಟ್ಟದ ರೋಟರಿ ಅಕಾಡೆಮಿ ಅತ್ಯುನ್ನತ ನಾಯಕತ್ವ ಪ್ರಶಸ್ತಿ ವಿತರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ತರೀಕೆರೆ ರೋಟರಿ ಕ್ಲಬ್ ಸದಸ್ಯ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ನುಡಿದರು. ಅವರು, ಭಾನುವಾರ ಪಟ್ಟಣದ ಯು.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ಅಂತಾರಾಷ್ಟ್ರೀಯ ರೋಟರಿ 3182ರ ಜಿಲ್ಲಾಮಟ್ಟದ ರೋಟರಿ ಅಕಾಡೆಮಿ ಅತ್ಯುತ್ತಮ ನಾಯಕತ್ವ ಪ್ರಶಸ್ತಿ 2023 ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಪೋಲಿಯೋ ಮುಕ್ತಗೊಳಿಸಲು ರೋಟರಿ ಕ್ಲಬ್ ನೀಡಿದ ಕೊಡುಗೆ ಆಪಾರವಾಗಿದೆ. ರೋಟರಿ ಕ್ಲಬ್‌ಗಳಲ್ಲಿ ಸೇವೆಯೇ ಬಹಳ ಮುಖ್ಯ, ರೋಟರಿ ಸದಸ್ಯರು. ಯಾವಾಗಲೂ ಒಂದಿಲ್ಲೊಂದು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ, ರೋಟರಿ ಕ್ಲಬ್ ಮತ್ತು ರೋಟರಿ ಶಾಲೆ ಅಭಿವೃದ್ಧಿಗೆ ತಾವು ನೆರವು ನೀಡುವುದಾಗಿ ತಿಳಿಸಿದರು. ರಾಹಿಲಾ ಕಾರ್ಯಕ್ರಮದ ಚೇರ್ಮನ್ ರೋ. ಕಲ್ಯಾ ಸುರೇಶ್ ಶಣೈ ಮಾತನಾಡಿ, ರೋಟರಿ ಕ್ಲಬ್ ಸದಸ್ಯರು ಶಾಸಕರಾಗಿ ಆಯ್ಕೆಯಾಗಿರುವುದು ಮಾದರಿಯಾಗಿದೆ. ಎಲ್ಲರಲ್ಲೂ ನಾಯಕತ್ವದ ಗುಣ ಇರುತ್ತದೆ, ಹಂತ ಹಂತವಾಗಿ ತಲುಪಿ ಯಶಸ್ವಿಯಾಗಬೇಕು. ತರೀಕೆರೆಯಲ್ಲಿ ಇಂತಹ ಕಾರ್ಯಕ್ರಮ ನೆಡೆಯುತ್ತಿರುವುದು ಸಂತೋಷ ತಂದಿದೆ. ಉತ್ತಮ ನಾಯಕರಾಗಿ ದೇಶಸೇವೆ ಮಾಡಬೇಕು ಎಂದು ಹೇಳಿದರು. ಕೋಲಾರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾದ ಸಯದ್ ಅನ್ಸರ್ ಖಲೀಂ ನಾಯಕತ್ವ ವಿಷಯ ಕುರಿತು ಮಾತನಾಡಿ, ರೋಟರಿ ಕ್ಲಬ್ ಪ್ರಪಂಚದ ಒಂದು ದೊಡ್ಡ ಸಂಘಟನೆಯಾಗಿದೆ. ನಾಯಕತ್ವಕ್ಕೆ ಗುರಿ ಇರಬೇಕು. ತ್ಯಾಗ ಮತ್ತು ಸೇವೆ ಹೊಂದಿ, ಇನ್ನೊಬ್ಬರಿಗಾಗಿ ಬದುಕಬೇಕು. ಸಕಾರಾತ್ಮಕವಾಗಿ ಯೋಚಿಸಬೇಕು ಎಂದು ಹೇಳಿದರು. ಶಿವಮೊಗ್ಗ ಡಯಟ್‌ನ ಉಪನ್ಯಾಸಕ ಜಿ.ವಿ. ಹರಿಪ್ರಸಾದ್ ಅವರು ಶಾಂತಿ ಮತ್ತು ಸೌಹಾರ್ದತೆ ಕುರಿತು ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷರು ಶಶಿಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗವರ್ನರ್ ಡಿ.ಸಿ. ಗೀತಾ, ಡಿ.ಎಸ್. ರವಿ, ರೋಟರಿ ಜಿಲ್ಲಾ ಡಿಸ್ಟ್ರಿಕ್ಟ್ ಕೌನ್ಸಿಲರ್ ಗಳಾದ ಪಿಡಿಜಿ ಡಿ.ಎಸ್. ರವಿ ರೋ. ಸಿ.ಎ. ದೇವ ಆನಂದ ಉಡುಪಿ, ಪಿಎಜಿ ರೋ. ಬಿ.ವಿ.ದಿನೇಶ್ ಕುಮಾರ್, ಡಿಜಿಎನ್ ಪಾಲಾಕ್ಷ ಕೆ., ಸಹಾಯಕ ಗವರ್ನರ್ ಕೆ.ಬಿ. ಅನಂತೇಗೌಡ, ವಲಯಾಧಿಕಾರಿ ಕೆ.ಎಲ್. ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಡಾ.ಪ್ರೀತಿ, ರೋಟರಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕೋರನಹಳ್ಳಿ, ಟಿ.ಆರ್. ಶ್ರೀಧರ್, ಜಿ.ಸಿ. ಶರತ್, ಬಿ.ರಾಜಪ್ಪ, ರೋಟರಿ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಿಎಜಿ ರೋ. ಬಿ.ವಿ. ದಿನೇಶ್ ಕುಮಾರ್ ಸ್ವಾಗತಿಸಿದರು. ರೋಟರಿ ಸದಸ್ಯರು ವಿ.ಇ. ಪ್ರವೀಣ್ ನಿರೂಪಿಸಿದರು. - - - 8ಕೆಟಿಆರ್ ಕೆ-2ಃ ತರೀಕೆರೆಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ರೋಟರಿ 3182ರ ಜಿಲ್ಲಾಮಟ್ಟದ ರೋಟರಿ ಅಕಾಡೆಮಿ ಅತ್ಯುತ್ತಮ ನಾಯಕತ್ವ ಪ್ರಶಸ್ತಿ 2023 ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ನೆರವೇರಿಸಿದರು. ರೋಟರಿ ಕ್ಲಬ್ ಅಧ್ಯಕ್ಷರು ಪಿ.ಶಶಿಕುಮಾರ್ ಮತ್ತಿತರರು ಇದ್ದರು. - - -

Share this article