ಕ್ಷೇತ್ರದ ಜನರ ಅಹವಾಲಿಗೆ ದನಿಯಾಗುವೆ

KannadaprabhaNewsNetwork |  
Published : Aug 30, 2025, 01:00 AM IST
ತಾಲ್ಲೋಕಿನ ಶೆಟ್ಟಿಕೆರೆ ಹೋಬಳಿಯ  ಗೋಡೆಕೆರೆ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ 14ನೇ ವಾರದ ಮನೆಬಾಗಿಲಿಗೆ ಮನೆ ಮಗ ಶೀರ್ಷಿಕೆ ಯ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಮನವಿಗಳನ್ನು ಸ್ವೀಕರಿಸಿದರು. | Kannada Prabha

ಸಾರಾಂಶ

ನನ್ನ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ವಿವಿಧ ಇಲಾಖೆಗಳಲ್ಲಿನ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನೇರವಾಗಿ ಜನರ ಮನೆ ಬಾಗಿಲಿಗೆ ಮನೆ ಮಗನಾಗಿ ಬಂದಿದ್ದು ನಿಮ್ಮ ಸಮಸ್ಯೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸುವ ಮೂಲಕ ನಿಮ್ಮ ಸಮಸ್ಯೆಗಳಿಗೆ ದನಿಯಾಗುವೆ ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ನನ್ನ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ವಿವಿಧ ಇಲಾಖೆಗಳಲ್ಲಿನ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನೇರವಾಗಿ ಜನರ ಮನೆ ಬಾಗಿಲಿಗೆ ಮನೆ ಮಗನಾಗಿ ಬಂದಿದ್ದು ನಿಮ್ಮ ಸಮಸ್ಯೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸುವ ಮೂಲಕ ನಿಮ್ಮ ಸಮಸ್ಯೆಗಳಿಗೆ ದನಿಯಾಗುವೆ ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ತಿಳಿಸಿದರು. ತಾಲೂಕಿನ ಗೋಡೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ 14ನೇ ವಾರದ ಮನೆಬಾಗಿಲಿಗೆ ಮನೆ ಮಗ ಶೀರ್ಷಿಕೆ ಯ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಇಂದು ನಿಮ್ಮ ಗ್ರಾಮಗಳಿಗೆ ಬಂದಿದ್ದು ನಿಮ್ಮ ಯಾವುದೇ ವೈಯಕ್ತಿಕ ಇಲ್ಲವೇ ಸಾಮಾಜಿಕ ಸಮಸ್ಯೆಗಳಿದ್ದರು. ಲಿಖಿತದ ಮೂಲಕ ಅರ್ಜಿ ನೀಡಿ ಅದರಲ್ಲಿ ನಿಮ್ಮ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ ನಿಮ್ಮ ಅರ್ಜಿಗಳ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ತಿಳಿಸಲಾಗುವುದು ಎಂದರು.

ಪಿಡಿಒ ಪ್ರತಿ ಗ್ರಾಮಗಳಿಗೆ ಭೇಟಿ ನೀಡಬೇಕು. ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅಗತ್ಯವಿರುವಂತಹ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದ ಅವರು ಗೋಡೆಕೆರೆ ಗ್ರಾಮಪಂಚಾಯಿತಿಯು ಗಣಿಭಾದಿತ ಪ್ರದೇಶದಲ್ಲಿ ಸೇರಿರುವುದರಿಂದ ಈ ಭಾಗದ ಪ್ರತಿಹಳ್ಳಿಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಇದರೊಂದಿಗೆ ಮನೆಗಳನ್ನು ನೀಡುವುದು ಸೇರಿದಂತೆ ಪ್ರತಿಮನೆಗೊಂದು ಹಸುಗಳನ್ನು ನೀಡುವಂತಹ ಯೋಜನೆಯ ಬಗ್ಗೆ ಕ್ರಮಕೈಗೊಳ್ಳಲಾಗುವುದೆಂದರು. ಯಾವುದಾದರು ಕೈ ತಪ್ಪಿದ್ದರೆ ಅಂತಹ ರಸ್ತೆಗಳನ್ನು ಮುಂದಿನಗಳಲ್ಲಿ ಮಾಡಲಾಗುವುದು. ಸೊಂಡೆನಹಳ್ಳಿಯ ಅಂಗನವಾಡಿ ಕಟ್ಟಡಕ್ಕೆ ಈಗಾಗಲೇ 23ಲಕ್ಷ ಅನುದಾನ ನೀಡಿದ್ದು ಅದು ಟೆಂಡರ್ ಹಂತದಲ್ಲಿದೆ ಅದೇ ರೀತಿ ಸಮುದಾಯ ಭವನಕ್ಕೆ ಸರ್ಕಾರದಿಂದ ಅನುದಾನ ಬಂದರೆ 50ಲಕ್ಷ ನೀಡುವ ಭರವಸೆ ನೀಡಿದರು. ಗೋಡೆಕೆರೆ ಸೇರಿದಂತ ಪ್ರತಿ ಪಿಎಚ್ ಸಿಗೂ ಶಾಶ್ವತವಾಗಿ ವೈದ್ಯರ ನೇಮಕಾತಿಯನ್ನು ಮಾಡಲಾಗುತ್ತಿದೆ. ಇನ್ನು ಮುಂದೆ ವೈದ್ಯರ ಸೇವೆ ದೊರೆಯಲಿದೆ ಹಾಗೂ ಗೋಡೆಕೆರೆ ಗ್ರಾಮಕ್ಕೆ ಮೈಸೂರು ಕಡೆಗೆ, ಬೆಂಗಳೂರು ಕಡೆಗೆ ಹೋಗುವಂತಹ ಹಾಗೂ ಬರುವಂತಹ ಕೆಎಸ್ ಆರ್ ಟಿ ಸಿ ಬಸ್ ಗಳನ್ನು ಬಂದುಹೋಗುವಂತೆ ಬಸ್ ವ್ಯವಸ್ಥೆ ಯನ್ನು ಮಾಡುವುದಾಗಿ ತಿಳಿಸದ ಅವರು ಈ ಕಾರ್ಯಕ್ರಮವನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಡೆಕೆರೆ ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ಮಾತನಾಡಿ, ಇಂತಹ ಜನಪಯೋಗಿ ಕಾರ್ಯಕ್ರಮ ಸಾರ್ವಜನಿಕರಿಗೆ ಸಹಕಾರಿಯಾಗಿದೆ ಕಳೆದ 14ವಾರಗಳಿಂದ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳನ್ನು ಭೇಟಿ ಮಾಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕರು ನೇರವಾಗಿ ಅರ್ಜಿಗಳನ್ನು ಪಡೆದು ಕೆಲವನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ನೀಡಿ ಪರಿಹರಿಸುವಂತೆ ಸೂಚನೆ ನೀಡಿದ್ದು ಇದು ಅಧಿಕಾರಿಗಳು ಹಾಗೂ ಜನರ ನಡುವೆ ಉತ್ತಮ ಬಾಂಧ್ಯವ್ಯ ಮೂಡುತ್ತದೆ ಜನರು ಅಧಿಕಾರಿಗಳನ್ನು ಹುಡುಕಿಕೊಂಡು ಅಲೆದಾಡುವುದು ತಪ್ಪುತ್ತದೆ ಇದು ಒಳ್ಳೆಯ ಕಾರ್ಯಕ್ರಮ ಎಂದರು.

ಕಾರ್ಯಕ್ರಮದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್.ಶಶಿಧರ್, ಶಿರಸ್ತೇದಾರ್ ರಂಗನಾಥ್, ಇಒ ದೊಡ್ಡಸಿದ್ದಯ್ಯ, ಗೋಡೆಕೆರೆ ಗ್ರಾ.ಪಂ.ಉಪಾಧ್ಯಕ್ಷೆ ಯಶೋಧಮ್ಮ, ಸದಸ್ಯರುಗಳಾದ ಮಲ್ಲಿಕಯ್ಯ, ತೋಂಟಾರಾಧ್ಯ, ಕೃಷ್ಣಮೂರ್ತಿ, ರೂಪಾ, ಸಂಗಮೇಶ್, ಮಂಗಳಗೌರಮ್ಮ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್ ಕುಮಾರ್, ಸಿಡಿಪಿಒ ಹೊನ್ನಪ್ಪ, ಲೋಕೊಪಯೋಗಿ ಇಲಾಖೆ ಎಇಇ ತಿಮ್ಮಪ್ಪ, ಜಿ.ಪಂ. ಎಇಇ ಮೋಹನ್, ಮಾರುತಿ, ವಲಯ ಅರಣ್ಯಾಧಿಕಾರಿ ಅಮಿತ್, ಪಿಡಿಒ ಸಂತೋಶ್ , ಕಾರ್ಯದರ್ಶಿ ನಟರಾಜ್ ಟಿ ಸೇರಿದಂತೆ ಇತರರು ಇದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ