ರಾಮನಗರ: ನಂದಿನಿ ಉತ್ಪನ್ನಗಳಿಗೆ ಬೇರೆ ಯಾರೂ ಅಲ್ಲ, ನಾನೇ ಬ್ರ್ಯಾಂಡ್ ಅಂಬಾಸಿಡರ್ ಎಂದು ಬಮೂಲ್ ಅಧ್ಯಕ್ಷರಾದ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ನಾಡಿನ ರೈತರ ಹೆಮ್ಮೆಯ ನಂದಿನಿಯನ್ನು ಬಳಸಿ ಬೆಳೆಸಬೇಕಿದೆ. ರೈತರು ಮತ್ತು ಗ್ರಾಹಕರನ್ನು ಉಳಿಸಲು ನಂದಿನಿ ಹಾಲು, ತುಪ್ಪಾ ಹಾಗೂ ಉತ್ಪನ್ನಗಳನ್ನೇ ಬಳಕೆ ಮಾಡಬೇಕು. ಪ್ರತಿ ಮನೆಗಳಲ್ಲಿ ಸಮೃದ್ಧಿಯಾಗಿ ನಂದಿನಿ ಉತ್ಪನ್ನಗಳನ್ನು ಖರೀದಿಸಿ ರೈತರನ್ನು ಉಳಿಸುವ ಕೆಲಸ ಮಾಡಬೇಕು. ನಾನೊಬ್ಬ ನಂದಿನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮನವಿ ಮಾಡುತ್ತಿದ್ದೇನೆ ಎಂದರು.
ನನ್ನನ್ನು ಕೆಲವರು ಯಾರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡುತ್ತೀರಾ ಅಂತ ಕೇಳುತ್ತಿದ್ದರು. ಅದಕ್ಕೆ ನಾನೇ ಇದೀನಲ್ಲ, ಬೇರೆಯವರನ್ನು ಏಕೆ ಬ್ರ್ಯಾಂಡ್ ಅಂಬಾಸಿಡರ್ ಮಾಡಲಿ. ಆದ್ದರಿಂದ ನಂದಿನಿಯನ್ನು ಉಳಿಸಿ, ಬೆಳೆಸಿ, ರಕ್ಷಿಸುವ ಕೆಲಸ ಮಾಡುವಂತೆ ಡಿ.ಕೆ.ಸುರೇಶ್ ಮನವಿ ಮಾಡಿದರು.