ನಾನು ನೆಪಮಾತ್ರಕ್ಕೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ: ಕುಮಾರ್ ಕೊಪ್ಪ

KannadaprabhaNewsNetwork |  
Published : Oct 08, 2026, 01:45 AM IST
7ಕೆಎಂಎನ್ ಡಿ13 | Kannada Prabha

ಸಾರಾಂಶ

ತಳಸಮುದಾಯಕ್ಕೆ ಸೇರಿದ ನಾನು ಜಿಲ್ಲೆಯ ಬಹುಸಂಖ್ಯಾತ ಒಕ್ಕಲಿಗರ ನಾಯಕತ್ವದಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ. ಎಲ್ಲಾ ಜಾತಿ ಜನಾಂಗಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ಒಂದು ಕುಟುಂಬವಿದ್ದಂತೆ ಕೆಲಸ ಮಾಡುತ್ತೇನೆ. ನಮ್ಮ ಕುಟುಂಬಕ್ಕೆ ಸೇರಿದ ನಾವೆಲ್ಲರೂ ನಮ್ಮೊಳಗಿನ ಆಂತರಿಕ ಅಸಹನೆ ದೂರಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜಿಲ್ಲಾ ಕಾಂಗ್ರೆಸ್ಸಿಗೆ ನಾನು ನೆಪ ಮಾತ್ರದ ಅಧ್ಯಕ್ಷ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ನನ್ನ ದೃಷ್ಟಿಯಲ್ಲಿ ಅಧ್ಯಕ್ಷನಿದ್ದಂತೆ. ಕಾರ್ಯಕರ್ತರು ಸಮರ್ಪಣಾ ಭಾವನೆಯಿಂದ ಪಕ್ಷ ಕಟ್ಟುವ ಕೆಲಸ ಮಾಡುವಂತೆ ನೂತನ ಜಿಲ್ಲಾಧ್ಯಕ್ಷ ಕುಮಾರ್ ಕೊಪ್ಪ ಮನವಿ ಮಾಡಿದರು.

ಪಟ್ಟಣದ ಟಿಎಪಿಸಿಎಂಎಸ್‌ನ ಎಸ್.ಎಂ.ಲಿಂಗಪ್ಪ ಸಮುದಾಯ ಭವನದಲ್ಲಿ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಕರೆಯಲಾಗಿದ್ದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಜಾತ್ಯತೀತ ತಳಹದಿಯ ಮೇಲೆ ನಂಬಿಕೆಯಿಟ್ಟಿರುವ ಪಕ್ಷ. ಶೋಷಿತ ತಳ ಸಮುದಾಯಗಳು, ಅಲ್ಪ ಸಂಖ್ಯಾತರು, ಮಹಿಳೆಯರು ಮತ್ತು ಯುವಕರನ್ನು ಒಗ್ಗೂಡಿಸಿ ಎಲ್ಲರಿಗೂ ಸಮಾನ ಅಧಿಕಾರ ತತ್ವದಡಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಶೋಪಿತ ಸಮುದಾಯದಿಂದ ಬಂದಿರುವ ನನಗೆ ಜಿಲ್ಲಾ ಅಧ್ಯಕ್ಷನ ಸ್ಥಾನ ನೀಡಿ ಪಕ್ಷ ಕಟ್ಟಲು ವೇದಿಕೆ ಕಲ್ಪಿಸಿಕೊಟ್ಟಿರುವುದೇ ಸಾಕ್ಷಿ ಎಂದರು.

ತಳಸಮುದಾಯಕ್ಕೆ ಸೇರಿದ ನಾನು ಜಿಲ್ಲೆಯ ಬಹುಸಂಖ್ಯಾತ ಒಕ್ಕಲಿಗರ ನಾಯಕತ್ವದಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ. ಎಲ್ಲಾ ಜಾತಿ ಜನಾಂಗಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ಒಂದು ಕುಟುಂಬವಿದ್ದಂತೆ ಕೆಲಸ ಮಾಡುತ್ತೇನೆ. ನಮ್ಮ ಕುಟುಂಬಕ್ಕೆ ಸೇರಿದ ನಾವೆಲ್ಲರೂ ನಮ್ಮೊಳಗಿನ ಆಂತರಿಕ ಅಸಹನೆ ದೂರಮಾಡಬೇಕು ಎಂದು ಸಲಹೆ ನೀಡಿದರು.

ಈ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು 14 ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನವರೆಗೂ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರಿಲ್ಲ ಎನ್ನುವ ಕೊರತೆ ಇಲ್ಲಿನ ಕಾರ್ಯಕರ್ತರಿಗಿದೆ. ಇಲ್ಲಿ ಕಾಂಗ್ರೆಸ್ ಸೋತಿರಬಹುದು. ಆದರೆ, ನಮ್ಮ ಮತದಾರರು ಸುಭದ್ರವಾಗಿದ್ದಾರೆ. ಮತದಾರರನ್ನು ಪುನಶ್ಚೇತನಗೊಳಿಸುವ ಮೂಲಕ ಸೋತ ನೆಲದಲ್ಲಿಯೇ ನಾವು ಗೆಲುವಿನ ಹೆಜ್ಜೆ ಹಾಕಬೇಕು. ಇದಕ್ಕಾಗಿ ಕಾರ್ಯಕರ್ತರು ಸಂಕಲ್ಪ ಮಾಡುವಂತೆ ಕರೆ ನೀಡಿದರು.

ದುಡಿಯುವ ಮನಸ್ಸು, ಸೇವಾ ಮನೋಭಾವನೆ ಹಾಗೂ ಕಾರ್ಯಕರ್ತರೊಂದಿಗೆ ಮಿಳಿತವಾಗುವ ಮನಸ್ಸಿರುವ ವ್ಯಕ್ತಿಗಳು ಅರ್ಜಿ ಹಾಕಿ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಲು ಮುಂದೆ ಬನ್ನಿ. ಅರ್ಹರ ಆಯ್ಕೆಯನ್ನು ಪಕ್ಷ ಮಾಡುತ್ತದೆ. ಅಧ್ಯಕ್ಷರಾದವರ ಜೊತೆ ಕಾರ್ಯಕರ್ತರು ಹೆಜ್ಜ ಹಾಕಿ 2028 ಕ್ಕೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಲ್ಲ ಎನ್ನುವ ಕೊರತೆಯನ್ನು ನೀಗಿಸಿ ಎಂದು ಕರೆ ನೀಡಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕೀಯ ಬೇಡ. ಕಾರ್ಯಕರ್ತರೊಂದಿಗಿದ್ದು, ಸ್ವಂತ ಹಣದಿಂದ ಪಕ್ಷ ಕಟ್ಟಲು ಶ್ರಮಿಸುವ ವ್ಯಕ್ತಿಗಳನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಪಕ್ಷದ ವೀಕ್ಷಕರುಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಪಕ್ಷದ ವೀಕ್ಷಕರಾದ ಲಕ್ಷ್ಮಣ್, ಗೋಪಿಕೃಷ್ಣ, ಮಾಜಿ ಶಾಸಕ ಬಿ.ಪ್ರಕಾಶ್, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಮುಖಂಡರಾದ ಬಿ.ಎಲ್.ದೇವರಾಜು, ಕಿಕ್ಕೇರಿ ಸುರೇಶ್, ಎಂ.ಡಿ.ಕೃಷ್ಣಮೂರ್ತಿ, ಎಲ್.ಕೆ.ದೇವರಾಜು, ಹರಳಹಳ್ಳಿ ವಿಶ್ವನಾಥ್, ಡಾ.ರಾಮಕೃಷ್ಣೇಗೌಡ, ಟಿ.ಎನ್.ದಿವಾಕರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಸದಸ್ಯರಾದ ಶಿವಮ್ಮ, ಶ್ಯಾಮಣ್ಣ, ದಲಿತ ಮುಖಂಡರಾದ ಬಸ್ತಿ ರಂಗಪ್ಪ, ಶಿವಣ್ಣ, ರಾಜಯ್ಯ ಸೇರಿ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ: ಖಂಡ್ರೆ
ಮೀನು ಹಿಡಿಯುವ ಕಾರ್ಯ ಟೆಂಡರ್ ಮೂಲಕ ನಡೆಸಿ