ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಪಟ್ಟಣದ ಶಿವರಾಜ ಘೋರ್ಪಡೆ ನಿವಾಸದಲ್ಲಿ ರೋಣ, ನರೇಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗುರುವಾರ ನಡೆದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಾಗೂ ಭಾರತ ಜೋಡೋ ಯುವಕರ ಸಂಘ ಸ್ಥಾಪನೆ ಮತ್ತು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪಶ್ಚಿಮ ಪದವೀಧರರ ಕ್ಷೇತ್ರ ವಿಚಿತ್ರವಾದದ್ದು. ಯಾರೂ ಸಹ ಬಿಜೆಪಿ ಪಾಲಾಗಬಹುದು ಎಂದು ಭಾವಿಸಿರಲಿಲ್ಲ. ಆದರೆ ೨೦೦೮ರಲ್ಲಿ ಚುನಾವಣೆಯಲ್ಲಿ ನಿಂತು ಎಲ್ಲ ಪದವೀಧರರ, ಶಿಕ್ಷಕರ, ಶಿಕ್ಷಕೇತರ ಪದವೀಧರರ ಹಾಗೂ ನಿರುದ್ಯೋಗಿ ಪದವೀಧರರನ್ನು ಸಂಪರ್ಕ ಮಾಡಿ, ಅವರ ಮನಸ್ಸನ್ನು ಗೆದ್ದು ವಿಧಾನಪರಿಷತ್ ಒಳಗೆ ಹೋದೆ. ಆತ್ಮಸಾಕ್ಷಿ ವಿರುದ್ಧವಾಗಿ ಇರಬಾರದು ಎಂದು ಅಧಿಕಾರ ಅವಧಿ ಇದ್ದರೂ ಸಹ ರಾಜಿನಾಮೆ ನೀಡಿ ಬಂದಿದ್ದೆ. ಅಧಿಕಾರ ಮುಖ್ಯವಲ್ಲ ಎಂದು ಭಾವಿಸಿದ್ದೇನೆ. ಕ್ಷೇತ್ರ ದೊಡ್ಡದಿದ್ದು ಒಟ್ಟು ೨೪ ಶಾಸಕರು ಬರುತ್ತಾರೆ. ಅದರಲ್ಲಿ ೧೭ ಶಾಸಕರು ನಮ್ಮವರು, ಇನ್ನುಳಿದ ೭ ಶಾಸಕರು ಬಿಜೆಪಿಗರು. ಅದರಲ್ಲಿ ಬಿಜೆಪಿಯ ಶಿವರಾಮ ಹೆಬ್ಬಾರ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದರು.ಎಲ್ಲರೂ ಸಂಘಟಿತವಾಗಿ ಕೆಲಸ ಮಾಡಿದರೆ ಅಭ್ಯರ್ಥಿ ಗೆಲ್ಲುವುದರಲ್ಲಿ ಸಂಶಯವಿಲ್ಲ. ಅಭ್ಯರ್ಥಿಗೆ ಪಕ್ಷ ಅನಿವಾರ್ಯವಾಗಬೇಕು ಹೊರತು ಪಕ್ಷಕ್ಕೆ ಅಭ್ಯರ್ಥಿ ಅನಿವಾರ್ಯವಾಗಬಾರದು. ನಾನು ಆರಿಸಿ ಬಂದ ನಂತರ ಎಂತವರನ್ನು ಆರಿಸಿ ತಂದೇವು ಎಂದು ಕಾರ್ಯಕರ್ತರು ಮುಖತಳಗಾಗುವಂತೆ ಎಂದಿಗೂ ನಾನು ನಡೆದುಕೊಳ್ಳುವದಿಲ್ಲ ಎಂದರು.
ವಕೀಲ ಶ್ರೀಕಾಂತ್ ಅವಧೂತ ಮಾತನಾಡಿದರು. ಮುಖಂಡರಾದ ಅಶೋಕ ಬಾಗಮಾರ, ಪ್ರಶಾಂತ ರಾಠೋಡ, ಶಿವರಾಜ ಘೋರ್ಪಡೆ, ಬಿ.ಎಸ್. ಶೀಲವಂತರ, ಶಶಿಧರ ಹೂಗಾರ, ಎ.ಡಿ. ಕೋಲಕಾರ, ಎಸ್.ಆರ್. ರಾಮಜಿ ಮಾತನಾಡಿದರು.