ದೇವನಹಳ್ಳಿ: ರಾಜಕೀಯ ಜೀವನಕ್ಕೆ ಕಾಲಿಟ್ಟಾಗಿಂದಲೂ ಜೆಡಿಎಸ್ ಪರಿವಾರದೊಂದಿಗೆ ಇದ್ದೇನೆ. ಇತರೆ ಪಕ್ಷಗಳ ಜೊತೆ ವಿಶ್ವಾಸದಿಂದ ಇರುವುದರಿಂದ ಈ ಗೆಲುವಿಗೆ ಬೇರೆ ಪಕ್ಷದ ಜೊತೆ ಕೈಜೊಡಿಸಿದ್ದಾರೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಬಿಡಿಸಿಸಿ ಬ್ಯಾಂಕ್ ನೂತನ ನಿದೇರ್ಶಕ ಕಾಮೇನಹಳ್ಳಿ ರಮೇಶ್ ಹೇಳಿದರು.
ಈ ಗೆಲುವಿಗೆ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಂಪೂರ್ಣ ಬೆಂಬಲ ನೀಡಿದರು. ಬ್ಯಾಂಕ್ ನಿದೇರ್ಶಕನಾಗಿ ನನ್ನ ಪಕ್ಷಾತೀತ ಸೇವೆ ಈ ಗೆಲುವು ಬಂದಿರಬಹುದು. ಏನೇ ಆದರೂ ನನ್ನ ಈ ಅದೃಷ್ಠದ ಗೆಲುವಿಗೆ ಆಭಾರಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ಪ್ರದಾನ ಕಾರ್ಯದರ್ಶಿ ಜಿ.ಎ ರವೀಂದ್ರ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಹುರಳಗುರ್ಕಿ ಶ್ರೀನಿವಾಸ್, ಚನ್ನಕೃಷ್ಣಪ್ಪ, ಲಕ್ಷ್ಮಣ್, ಜಗದೀಶ್ ನರಗನಹಳ್ಳಿ ಶ್ರೀನಿವಾಸ್ ಮುಂತಾದವರಿದ್ದರು.೧೭ ದೇವನಹಳ್ಳಿ ಚಿತ್ರಸುದ್ದಿ: ೦೧
ಬಿಡಿಸಿಸಿ ಬ್ಯಾಂಕ್ ನಿದೇರ್ಶಕರಾಗಿ ಲಾಟರಿ ಮೂಲಕ ವಿಜೇತರಾದ ಕಾಮೇನಹಳ್ಳಿ ರಮೇಶ್ ರವರನ್ನು ಜೆಡಿಎಸ್ ಕಚೇರಿಯಲ್ಲಿ ಸನ್ಮಾನಿಸಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ ಇತರರು.