ಹರಪನಹಳ್ಳಿಗೆ 2 ವರ್ಷದಲ್ಲಿ ₹500 ಕೋಟಿ ಅನುದಾನ ತಂದಿದ್ದೇನೆ: ಎಂ.ಪಿ. ಲತಾ

KannadaprabhaNewsNetwork |  
Published : Jun 08, 2025, 01:16 AM ISTUpdated : Jun 08, 2025, 01:17 AM IST
ಹರಪನಹಳ್ಳಿ: ತಾಲೂಕಿನ ಅಡವಿಮಲ್ಲಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಾಗಾರಿಗೆ ಶಾಸಕಿ ಎಂ.ಪಿ.ಲತಾ ಭೂಮಿ ಪೂಜೆ ನೆರವೇರಿಸಿದರು.  | Kannada Prabha

ಸಾರಾಂಶ

ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಎರಡು ವರ್ಷದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಅಂದಾಜು ₹500 ಕೋಟಿ ಅನುದಾನ ತಂದಿದ್ದೇನೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಎರಡು ವರ್ಷದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಅಂದಾಜು ₹500 ಕೋಟಿ ಅನುದಾನ ತಂದಿದ್ದೇನೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.

ತಾಲೂಕಿನ ಅಡವಿಹಳ್ಳಿ ಸೇರಿದಂತೆ ವಿವಿಧೆಡೆ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನರೇಗಾದಲ್ಲಿಯೇ ₹110 ಕೋಟಿ ಕೆಲಸವಾಗಿದೆ. ನರೇಗಾದಲ್ಲಿ ಕುರಿಶೆಡ್, ದನದ ಕೊಟ್ಟಿಗೆ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅವಕಾಶವಿದೆ. ಸದುಪಯೋಗಪಡಿಸಿಕೊಳ್ಳಿ ಎಂದು ಅವರು ಜನರಿಗೆ ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಆಶ್ರಯ ಮನೆ, ಸಮುದಾಯ ಭವನ, ರಸ್ತೆ, ಕುಡಿಯುವ ನೀರು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಕ್ಷೇತ್ರದಲ್ಲಿ ಕೈಗೊಂಡಿದ್ದಾರೆ. ಮಾಜಿ ಶಾಸಕ ಎಂ.ಪಿ. ರವೀಂದ್ರ ಮಾಡಿದ ಪ್ರಯತ್ನದಿಂದ 371 ಜೆಗೆ ಒಳಪಟ್ಟಿದ್ದರಿಂದ ತಾಲೂಕಿಗೆ ನೂರಾರು ಕೋಟಿ ಅನುದಾನ ಬರುತ್ತಿದೆ ಎಂದು ಹೇಳಿದರು.

ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಬಂದಿರುವ ಅನುದಾನ ಎಲ್ಲಿಗೆ ಹೋಗುತ್ತಿತ್ತು ಎಂಬುದು ಗೊತ್ತಿರಲಿಲ್ಲ. ಈಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ ಎಂದು ಹೇಳಿದರು.

ಪಟ್ಟಣದ ಬಾಲಕಿಯರ ಪ್ರೌಢಶಾಲೆ, ಉಪ್ಪಾರಗೇರಿ, ಕುರಬಗೇರಿ ಶಾಲಾ ಕೊಠಡಿ ನಿರ್ಮಾಣಕ್ಕೆ ಹಾಗೂ ತಾಲೂಕಿನ ಕಂಚಿಕೇರೆ, ಅಡವಿಮಲ್ಲಾಪುರ ಆಲದಹಳ್ಳಿ, ಗ್ರಾಮಗಳ ಎಸ್ಟಿ ಕಾಲನಿಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಂತರ ಕುಮಾರನಹಳ್ಳಿ ಅಡವಿಹಳ್ಳಿ, ಮೈದೂರು, ಹಗರಿ ಗಜಾಪುರ, ಕನ್ನಕಟ್ಟಿ, ಕುಣೇಮಾದಿಹಳ್ಳಿ, ಬಳಿಗನೂರು, ಕೆಸರಳ್ಳಿ ಬಸವನಾಳು, ಗೌರಿಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಕೆ. ಕಲ್ಲಹಳ್ಳಿ ಸತ್ತೂರು, ಯಡಿಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿ, ನಂತರ ಬೆಂಡಿಗೇರಿ ದೊಡ್ಡತಾಂಡ, ಚಿರಸ್ತಹಳ್ಳಿ, ರಾಗಿಮಸಲವಾಡ, ಕಂಚೀಕೆರೆ, ಯಡಿಹಳ್ಳಿಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ನಂತರ ಅಣಿಮೇಗಳ ತಾಂಡಾ, ಹಾರಕನಾಳು ದೊಡ್ಡ ತಾಂಡಾದಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟಿಸಿದರು.

ಚಿಗಟೇರಿ ಬ್ಲಾಕ್ ಅಧ್ಯಕ್ಷ ಕೆ. ಕುಬೇರಪ್ಪ, ತಾಪಂ ಮಾಜಿ ಸದಸ್ಯ ಮೈದೂರು ರಾಮಪ್ಪ, ಮುತ್ತಿಗಿ ಜಂಬಣ್ಣ, ಉದಯಕುಮಾರ್, ಯೋಗೇಶಗೌಡ, ಎಇಇ ಕುಬೇಂದ್ರನಾಯ್ಕ್, ಅಡವಿಹಳ್ಳಿ ದಕ್ಷಣ ಮೂರ್ತಿ, ನಿಚ್ಚಾಪುರ ಸಿದ್ದಲಿಂಗಸ್ವಾಮಿ, ದೇವೇಂದ್ರಗೌಡ, ಮತ್ತೂರು ಬಸವರಾಜ ಕಾರ್ಯಕರ್ತರು ಇದ್ದರು.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ