ನಿಮ್ಮನ್ನೇ ನಂಬಿ ಬಂದಿದ್ದೇನೆ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork | Published : Nov 10, 2024 1:46 AM

ಸಾರಾಂಶ

ಚನ್ನಪಟ್ಟಣ: ನನ್ನ ಎರಡು ಸೋಲು, ನನ್ನ ಸೋಲಲ್ಲ, ಜನ ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಎರಡು ಬಾರಿ ಪೆಟ್ಟು ತಿಂದು‌ ಮತ್ತೆ ನಿಮ್ಮನ್ನು ನಂಬಿ ಬಂದು ನಿಂತಿದ್ದೇನೆ ಎಂದು ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.

ಚನ್ನಪಟ್ಟಣ: ನನ್ನ ಎರಡು ಸೋಲು, ನನ್ನ ಸೋಲಲ್ಲ, ಜನ ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಎರಡು ಬಾರಿ ಪೆಟ್ಟು ತಿಂದು‌ ಮತ್ತೆ ನಿಮ್ಮನ್ನು ನಂಬಿ ಬಂದು ನಿಂತಿದ್ದೇನೆ ಎಂದು ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.

ಚನ್ನಪಟ್ಟಣ ಕ್ಷೇತ್ರದ ಚಕ್ಕರೆ ಗ್ರಾಮದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ಚುನಾವಣೆಗಳ ಕುತಂತ್ರ ರಾಜಕಾರಣದಲ್ಲಿ ನಾನು ಸೋತಿದ್ದೆ. ಚುನಾವಣಾ ರಾಜಕೀಯದಿಂದ ದೂರ ಇರಬೇಕು ಅಂದುಕೊಂಡಿದ್ದೆ. ಆದರೆ, ಬಹಳಷ್ಟು ಕಾರ್ಯಕರ್ತರ ಪ್ರೀತಿಗೆ ಮತ್ತೆ ವಾಪಸ್ ಚುನಾವಣೆ ಬಂದಿದ್ದೇನೆ ಎಂದರು.

ಈ ಚುನಾವಣೆ ನನಗೆ ಅನಿರೀಕ್ಷೀತ ಕೊನೆ ಹಂತದ ತೀರ್ಮಾನ. ಎರಡೂ ಪಕ್ಷ ತೀರ್ಮಾನದ ಮೇರೆಗೆ ಸ್ಪರ್ಧೆ ಮಾಡಿದ್ದೇನೆ. ಇಡೀ ಸಚಿವ ಸಂಪುಟ ಆದಿಯಾಗಿ ಚನ್ನಪಟ್ಟಣ ತಾಲೂಕಿನಲ್ಲಿ ಬಂದು ನಿಂತಿದ್ದಾರೆ. ಶಕ್ತಿ ಮಹಿಳೆಯರು, ತಾಯಂದಿರು ಮನಸ್ಸು ಮಾಡಿದರೆ ಚನ್ನಪಟ್ಟಣ ಬದಲಾವಣೆ ಮಾಡಬಹುದು. ನಾನು ಶಾಸಕನಾಗಬೇಕು ಅಂತ ಚುನಾವಣೆಗೆ ಸ್ಪರ್ಧಿಸಿಲ್ಲ. ನಿಮ್ಮ ಮನೆಯ ಮಕ್ಕಳು ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ನನಗೆ ನನ್ನ ಜಾವಾಬ್ದಾರಿಯ ಅರಿವಿದೆ. ಪ್ರತಿಯೊಬ್ಬರ ಭವಿಷ್ಯ ರೂಪಿಸುವ ಕಾರಣಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಇಷ್ಟು ದಿನ ಚನ್ನಪಟ್ಟಣ,‌ ತಾಲೂಕು ಇದೇ ಅಂತ ಕಾಂಗ್ರೆಸ್‌ಗೆ ಗೊತ್ತಿರಲಿಲ್ಲ. ಯಾಕೆ ಈ ಹಿಂದೆ ಚನ್ನಪಟ್ಟಣ ಕಂಡಿರಲಿಲ್ವಾ, ಸತ್ತೆಗಾಲದಿಂದ‌ ನೀರು ಕೊಡಬೇಕು ಅಂತ ಕುಮಾರಸ್ವಾಮಿ ನಿರ್ಧಾರ ತೆಗೆದುಕೊಂಡರು. ಇದು ‌ನಿಖಿಲ್ ಗೆಲ್ಲುವ ಪ್ರಶ್ನೆ ಅಲ್ಲ,‌ ಎನ್ ಡಿ ಎ ಕುಟುಂಬ ಪ್ರಶ್ನೆ, ‌ಮೂರುವರೆ ವರ್ಷದ ಪ್ರಶ್ನೆ ಒಂದು ಸಲ ಅವಕಾಶ ಕೊಟ್ಟು‌ ನೋಡಿ, ನಿಮ್ಮ ಜೊತೆ ಇರ್ತೇನೆ ಎಂದು ಮನವಿ ಮಾಡಿದರು.

ಯೋಗೇಶ್ವರ್ ಅವರಿಗೆ ಜನತಾದಳ ಚಿಹ್ನೆಯಡಿ ನಿಂತುಕೊಳ್ಳಿ ಅಂತ ಹೇಳಿದ್ವಿ, ಬಿಜೆಪಿ ಟಿಕೆಟ್ ಬೇಕು ಅಂದ್ರು, ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸಂಬಂಧ ಹಾಳು ಮಾಡಬಾರದು ಅಂತ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಅಂತ ಹೇಳಿದರು. ಆದರೆ, ಸಚಿವ ಸ್ಥಾನ ಕೊಟ್ಟಿದ್ದ ಬಿಜೆಪಿಗೆ ಮೋಸ ಮಾಡಿ ಕಾಂಗ್ರೆಸ್ ಗೆ ಹೋಗಿದ್ದಾರೆ. ಯೋಗೇಶ್ವರ್ ಅವರು ಆರು ವರ್ಷ ಮೇಲೆ ಒಂದು ಪಕ್ಷದಲ್ಲಿ ನಿಲ್ಲಲ್ಲ ಎಂದು ವಾಗ್ದಾಳಿ ನಡೆಸಿದರು.

ಕುಮಾರಣ್ಣ ಇವತ್ತು ಕೇಂದ್ರ ಕೈಗಾರಿಕಾ ಮಂತ್ರಿ ಆಗಿದ್ದಾರೆ. ರಾಮನಗರ ಜಿಲ್ಲೆಯ ಜನತೆಗೆ ಯುವಕರಿಗೆ, ತಾಯಂದಿರಿಗೆ ಏನಾದರೂ ಕೊಡಬೇಕು ಅಂತ ಪಣ ತೊಟ್ಟಿದ್ದಾರೆ. ಮಂಡ್ಯ ಮತ್ತು ರಾಮನಗರ ಮಧ್ಯ ಕಾರ್ಖಾನೆ ತೆಗೆದು‌ 25‌ ಸಾವಿರ ಯುವಕರಿ ಉದ್ಯೋಗ ನಿರ್ಮಾಣ ಮಾಡುವ ಚರ್ಚೆ ನಡೆದಿದೆ ಎಂದು ನಿಖಿಲ್ ಹೇಳಿದರು.

ಮಾಜಿ ಪ್ರಧಾನಿ ದೇವೇಗೌಡ, ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ , ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು ಹಾಗೂ ಮುಖಂಡರು ಭಾಗವಹಿಸಿದ್ದರು.

9ಕೆಆರ್ ಎಂಎನ್ 8.ಜೆಪಿಜಿ

ಚನ್ನಪಟ್ಟಣ ಕ್ಷೇತ್ರದ ಚಕ್ಕರೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಪ್ರಧಾನಿ ದೇವೇಗೌಡರು ಉದ್ಘಾಟಿಸಿದರು.

Share this article