ಹೊಸದುರ್ಗ: ನಾಟಕೋತ್ಸವ ಜನರ ಉತ್ಸವವಾಗಲಿ, ಜನರಿಗೆ ಅರಿವು ಮೂಡಿಸುವ ಕೆಲಸವಾಗಲಿ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯಲ್ಲಿ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಬಿಟ್ಟರೆ ಅದಕ್ಕೆ ಪೂರಕವಾದ ಯಾವುದೇ ಕಾರ್ಯ ಮಾಡಿಲ್ಲ. ಇನ್ನು ಮುಂದಾದರು ಸಾಂಸ್ಕೃತಿಕ ನಾಯಕದ ಆದರ್ಶಗಳನ್ನು ಜನರಿಗೆ ಬಿತ್ತುವ ಕೆಲಸ ಮಾಡಲಿ. ಪ್ರತಿ ಶಾಲೆಗಳಲ್ಲಿ ಶರಣರ ಬಗ್ಗೆ ನಾಟಕ, ವಚನ , ನೃತ್ಯಗಳನ್ನು ಮಾಡಿಸುವ ಕಾರ್ಯಕ್ರಮ ನೀಡುವಂತೆ ಮನವಿ ಮಾಡಲಾಗಿತ್ತು ಆದರೆ ಇನ್ನೂ ಉತ್ತರ ಬಂದಿಲ್ಲ ಎಂದು ಹೇಳಿದರು.
ಈ ಹಿಂದೆ ದೇಶದಾದ್ಯತ ನಡೆದ ವಚನಗಳ ನೃತ್ಯ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು 30 ಲಕ್ಷ ಕೊಡುವುದಾಗಿ ಹೇಳಿದ್ದರು ಈವೆರೆವಿಗೂ ಒಂದು ನಯಾ ಪೈಸೆಕೊಟ್ಟಿಲ್ಲ ಎಂದು ಹೆಳಲು ವಿಷಾದವಾಗುತ್ತದೆ ಎಂದರು.ಶರಣರ ವಚನಗಳನ್ನು ತಿರುಚುವ ಕೆಲಸ ಆಗುತ್ತಿವೆ. ಇತ್ತೀಚಿಗೆ ಬಿಡುಗಡೆ ಮಾಡಿದ ವಚನ ದರ್ಶನ ಪುಸ್ತಕ ಅವೈಜ್ಞಾನಿಕವಾಗಿದೆ ಅದರಲ್ಲಿ ಬಸವಣ್ಣನನ್ನು ಕೇವಲ ಭಕ್ತಿ ಬಂಡಾರಿ ಎಂದು ಹೇಳುವುದಕ್ಕೆ ಸೀಮಿತಗೊಳಿಸಲಾಗಿದೆ. ಅಲ್ಲದೆ ಸನಾತನ ಧರ್ಮವನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಹೇಳಲಾಗಿದೆ. ಇದೊಂದು ಸಂಚು ಇಂತಹ ಕೃತಿಗಳನ್ನು ಸರ್ಕಾರ ಮಟ್ಟುಗೋಲು ಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಶರಣರ ಐತಿಹಾಸಿಕ ಸ್ಮಾರಕಗಳು ಸಾಕಷ್ಟಿವೆ ಅವುಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಿ. ಮಹನೀಯರ ಜಯಂತಿ ಆಚರಿಸುವುದು ಸರ್ಕಾರದ ಕೆಲಸವಲ್ಲ ಜಯಂತಿಗಳಿಗೆ ಸರ್ಕಾರ ಆರ್ಥಿಕ ನೆರವು ಕೊಡಬಾರದು . ಯಾರು ಯಾರ ಜಯಂತಿ ಬೇಕಾದರು ಮಾಡಿಕೊಳ್ಳಲಿ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನೆಂದು ಪ್ರಶಸ್ತಿ ಬಯಸಿದವನಲ್ಲ. ನಾವು 8 ಜನ ಅಣ್ಣತಮ್ಮಂದಿರು ಅವರೆಲ್ಲಾ ಉದ್ಯೋಗದಲ್ಲಿದ್ದಾರೆ. ನಾನೊಬ್ಬ ಮಾತ್ರ ನಾಟಕದ ಗೀಳಿಗೆ ಬಿದ್ದಿದ್ದೇನೆ ಇದಕ್ಕೆ ನನ್ನ ತಂದೆ ತಾಯಿಗಳ ಪ್ರೋತ್ಸಾಹ ಇದ್ದುದ್ದರಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಈ ಪ್ರಶಸ್ತಿಯನ್ನು ನನ್ನ ಅಕ್ಕ ಸರೋಜಕ್ಕ ಅವರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ವೇದಿಕೆಯಲ್ಲಿ ಚಿತ್ರದುರ್ಗ ಶಾಸಕ ವಿರೇಂದ್ರಪಪ್ಪಿ, ಬೆಳ್ಳಿ ಪ್ರಕಾಶ್, ಮಾಜಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಶ್ರೀನಿವಾಸಕಪ್ಪಣ್ಣ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಅರುಣ್‌ಗೋವಿಂದಪ್ಪ, ಇಂದುಮತಿಸಾಲಿಮಠ್ ಉಪಸ್ಥಿತರಿದ್ದರು.
ರಾಷ್ಟ್ರೀಯ ನಾಟಕೋತ್ಸವಕ್ಕೆ ಅದ್ಧೂರಿ ತೆರೆಕಳೆದ 5 ದಿನಗಳಿಂದ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಶನಿವಾರ ಶ್ರೀ ಶಿವಕುಮಾರ ಪ್ರಶಸ್ತಿ ವಿತರಣೆಯೊಂದಿಗೆ ಅದ್ಧೂರಿ ತೆರೆ ಬಿದ್ದಿತು.
ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದೆ ಆದರೆ ಅದಕ್ಕೆ ಪೂರಕವಾದ ಯಾವ ಕೆಲಸವನ್ನು ಮಾಡಿಲ್ಲ , ಕೇವಲ ಘೋಷಣೆಗಷ್ಠೆ ಸೀಮಿತವಾಗಿದೆ
ಈ ಬಾರಿಯ ನಾಟಕೋತ್ಸವ ಬಹುತೇಕ ರಾಜಕೀಯ ನಾಯಕರ ಅನುಪಸ್ಥಿತಿಯಲ್ಲಿ ಕಲಾಸಕ್ತರು ಹಾಗೂ ಚಿಂತಕರ ನೇತೃತ್ವದಲ್ಲಿ ನಡೆಯಿತು. ಇದು ನಾಟಕೋತ್ಸವದ ಇತಿಹಾಸದಲ್ಲಿಯೇ ಮೊದಲ ಬಾರಿ ಸಚಿವರುಗಳು ಹಾಗೂ ಶಾಸಕರು ಗೈರು ಎದ್ದು ಕಾಣುತ್ತಿತ್ತು.