ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಂತರ ಮಾತನಾಡಿದ ಶಾಸಕರು, ಗ್ರಾಮದಲ್ಲಿ ದಿನನಿತ್ಯ ಸುಮಾರು ಒಂದುವರೆಯಿಂದ ಎರಡು ಸಾವಿರ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಈ ಗ್ರಾಮಕ್ಕೆ ಪಶುವೈದ್ಯಕೀಯ ಚಿಕಿತ್ಸಾಲಯ ತರಬೇಕೆಂಬ ನನ್ನ ಆಸೆ ಮತ್ತು ಗ್ರಾಮಸ್ಥರು ಕೂಗನ್ನು ಈಡೇರಿಸಿದ್ದೇನೆ ಎಂದರು.
ಹಲವು ವರ್ಷಗಳಿಂದ ಪಶು ಚಿಕಿತ್ಸಾಲಯದ ಕಟ್ಟಡ ಇಲ್ಲದ ಕಾರಣ ರೋಗದಿಂದ ಬಳಲುತ್ತಿದ್ದ ಮೂಕ ಪ್ರಾಣಿಗಳನ್ನು ದೂರದ ಗ್ರಾಮಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಬೇಕಾಗಿತ್ತು. ಈ ಸಂಬಂಧ ಗ್ರಾಮದ ಮುಖಂಡರು ಕಳೆದ 30 ವರ್ಷಗಳಿಂದ ಈ ಬೇಡಿಕೆ ಸಲ್ಲಿಸಿದ್ದರು ಎಂದರು.ಇದೀಗ ಪಶು ಚಿಕಿತ್ಸಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಸರ್ಕಾರ ಹಾಲಿನ ದರ 8 ರು. ಹೆಚ್ಚಳ ಮಾಡಿದೆ, ಇದರಿಂದ ರೈತರಿಗೆ 1 ಲೀಟರ್ ಹಾಲಿಗೆ ಕನಿಷ್ಠ 48 ರು. ಸಿಗಲಿದೆ. ಇನ್ನು ಮುಂದೆ ನಿಮ್ಮ ಗ್ರಾಮದಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ಕೊಡಲು ವೈದ್ಯಾಧಿಕಾರಿಗಳು ಯಾವಾಗಲೂ ಸಿದ್ಧರಿರುತ್ತಾರೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ರಾಮಚಂದ್ರ, ಸಹಾಯಕ ನಿರ್ದೇಶಕ ಡಾ.ಪ್ರವೀಣ್, ಗ್ರಾಮದ ಮುಖಂಡರಾದ ಪಟೇಲ್ ಸುರೇಶ್, ರಮೇಶ್, ಮಹೇಶ್, ಹರಿಪ್ರಸಾದ್, ನಾಗೇಶ್, ಚಂದ್ರು, ಎಂ.ಪಿ.ಸುರೇಶ್, ನಿಂಗೇಗೌಡ, ಪಶುವೈದ್ಯಾಧಿಕಾರಿಗಳಾದ ಡಾ.ರಾಘವೇಂದ್ರ, ಡಾ.ದರ್ಶನ್, ಡಾ.ಪ್ರದೀಪ್ ಸೇರಿದಂತೆ ಇತರರು ಇದ್ದರು.