ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ರಾಜಮನೆತನದ ಬಗ್ಗೆ ಅಪಾರ ಗೌರವ ಇದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಬಗ್ಗೆಯೂ ಹೆಚ್ಚು ಗೌರವ ಭಾವನೆ ಹೊಂದಿದ್ದೇನೆ. ರಾಜಮನೆತನದವರ ಹೆಸರು ಬದಲಿಸಬೇಕು ಎಂಬ ಉದ್ದೇಶ ನನಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆ ಕ್ಷೇತ್ರದ ಶಾಸಕನಾಗಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಬಂದಿದ್ದೇನೆ. ಅಲ್ಲಿಗೆ ಯಾರೋ ಕೆಲವರು ಸ್ಟಿಕ್ಕರ್ ಅಂಟಿಸಿ ಅವಮಾನ ಮಾಡುವುದು ಬೇಡ. ನಾನೇ ಪ್ರಿನ್ಸೆಸ್ ರಸ್ತೆ ಎಂದು ಬೋರ್ಡ್ ಹಾಕಿಸುತ್ತೇನೆ. ಜತೆಗೆ ಆ ರಸ್ತೆಯ ಸೂಕ್ತ ಸ್ಥಳದಲ್ಲಿ ಕೆಂಪನಂಜಮ್ಮಣ್ಣಿ ಅವರ ಪ್ರತಿಮೆಯನ್ನೂ ಹಾಕಿಸುತ್ತೇನೆ. ಈ ಹೆಸರಿನ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಅವರು ಕೋರಿದರು.ನನಗೆ ಲಭ್ಯವಿರುವ ದಾಖಲೆಗಳ ಪ್ರಕಾರ ಜೆ.ಎಲ್.ಬಿ. ರಸ್ತೆಯಿಂದ ಒಂಟಿಕೊಪ್ಪಲ್ ದೇವಸ್ಥಾನದವರೆಗೆ ಮಾತ್ರವೇ ಪ್ರಿನ್ಸೆಸ್ ರಸ್ತೆ ಎಂದು ಹಲವು ದಾಖಲೆಗಳಲ್ಲಿ ನಮೂದಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಕೆ.ಆರ್.ಎಸ್ ರಸ್ತೆ ಎಂದು ಬಾಯಿ ಮಾತಿನಲ್ಲಿ ಕರೆಯುತ್ತಿದ್ದೇವೆ. ಆ ರಸ್ತೆಯಲ್ಲಿ ಜಿಲ್ಲಾಸ್ಪತ್ರೆ, ಜಯದೇವ ಆಸ್ಪತ್ರೆ, ಕಿದ್ವಾಯಿ ಘಟಕ, ಚರಕ ಆಯುರ್ವೇದ ಆಸ್ಪತ್ರೆ ಸೇರಿದಂತೆ ಅನೇಕಾರು ಆಸ್ಪತ್ರೆಗಳನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಿರ್ಮಿಸಿರುವುದರಿಂದ ಆ ಮಾರ್ಗಕ್ಕೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡುವುದು ಸೂಕ್ತ ಎನಿಸಿದ ಕಾರಣಕ್ಕೆ 2024ರ ನ. 12ರಂದು ಜಿಲ್ಲಾಧಿಕಾರಿಗೆ ಮತ್ತು ನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೆ ಎಂದರು.
ನಾವು ಮೈಸೂರಿನಲ್ಲಿ ಇಷ್ಟೊಂದು ನೆಮ್ಮದಿಯ ವಾತಾವರಣದಲ್ಲಿ ಬದುಕುವುದಕ್ಕೆ ಮಹಾರಾಜರು ಕಾರಣ ಎಂಬುದು ಗೊತ್ತಿದೆ. ನಾನೂ ಮೈಸೂರಿನವನೇ, ಬೇರೆ ಕಡೆಯಿಂದ ಬಂದು ಸೇರಿಲ್ಲ. ಆದ್ದರಿಂದ ಇಲ್ಲಿನ ಇತಿಹಾಸ ನನಗೂ ಗೊತ್ತಿದೆ. 1997ರ ಭೂಪಟ ಮತ್ತು ನಗರ ಯೋಜನೆಯ ನಕ್ಷೆಯಲ್ಲಿಯೂ ಕೆ.ಆರ್.ಎಸ್ ರಸ್ತೆ ಎಂದೇ ಉಲ್ಲೇಖವಾಗಿದೆ ಎಂದು ಅವರು ದಾಖಲಾತಿ ಬಿಡುಗಡೆಗೊಳಿಸಿದರು.
ಸಿಎಂ ಬದಲಾವಣೆ ಇಲ್ಲ:
ಬಂದ್ ಗೆ ಸಂಪೂರ್ಣ ಬೆಂಬಲ, ಭಾಗಿ:
ನಗರದ ದಾಸಪ್ಪ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನಿಟ್ಟು ಪುಷ್ಪಾರ್ಚನೆ ನೆರವೇರಿಸಲಾಗುವುದು. ಈ ವೇಳೆ ಎಲ್ಲಾ ಧರ್ಮಗುರುಗಳನ್ನು ಆಹ್ವಾನಿಸಲಾಗುತ್ತಿದೆ. ನಾವು ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಹೋರಾಟದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮ ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೂ ಭಾಗಿ ಆಗುವುದಾಗಿ ಅವರು ತಿಳಿಸಿದರು.
ಬಿಜೆಪಿಯವರು ಬಿಡುಗಡೆಗೊಳಿಸಿರುವ ದಾಖಲೆ ಮತ್ತು ನನ್ನ ಬಳಿ ಇರುವ ದಾಖಲೆ ಎರಡನ್ನೂ ನೋಡಲಿ. ಅವರ ದಾಖಲೆಗಳಲ್ಲಿ ಸಂಪೂರ್ಣವಾಗಿ ಪ್ರಿನ್ಸಸ್ ರಸ್ತೆ ಎಂದೇ ಇದ್ದರೆ, ಅದೇ ಹೆಸರು ಇರಲಿ. ಇದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ ಸಿದ್ದರಾಮಯ್ಯ ಅವರ ಹೆಸರು ಹೇಳಿದಾಕ್ಷಣ ಯಾಕೆ ಕೆಲವರು ಹೀಗೆ ಆಕ್ಷೇಪ ಎತ್ತಿದ್ದಾರೋ ಗೊತ್ತಿಲ್ಲ.